ಅಂಡರ್ ಟೇಕರ್ ಪತ್ನಿ ಮಿಷಲ್ ಗೆ ಕ್ಯಾನ್ಸರ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 26: ಅಮೆರಿಕ ವೃತ್ತಿಪರ ಕುಸ್ತಿ ಆಟಗಾರ ಮಾರ್ಕ್ ವಿಲಿಯಮ್ ಕಾಲವೇ ಅಲಿಯಾಸ್ ದಿ ಅಂಡರ್ ಟೇಕರ್ ಮತ್ತೊಮ್ಮೆ ವರ್ಲ್ಡ್ ರೆಸಲಿಂಗ್ ರಿಂಗ್ ಗೆ ಎಂಟ್ರಿ ಸುದ್ದಿ ತಿಳಿದಿರಬಹುದು. ಈಗ ಅಂಡರ್ ಟೇಕರ್ ಪತ್ನಿ ಮಿಷಲ್ ಮೆಕ್ ಕೂಲ್ ಬಗ್ಗೆ ಆಘಾತಕಾರಿ ಸುದ್ದಿಯಿದೆ. ಮಾಜಿ ಕುಸ್ತಿ ಚಾಂಪಿಯನ್ ಮಿಚೆಲ್ ಅವರಿಗೆ ಚರ್ಮದ ಕ್ಯಾನ್ಸರ್ ರೋಗವಿದೆಯಂತೆ. ಈ ಸುದ್ದಿಯನ್ನು ಸ್ವತಃ ಮಿಚೆಲ್ ಅವರು ಇನ್ಸ್ಟಾ ಗ್ರಾಮ್ ಮೂಲಕ ತಿಳಿಸಿದ್ದಾರೆ.

WWE ದಿವಾಸ್ ಹಾಗೂ ಮಹಿಳಾ ಚಾಂಪಿಯನ್ ಮಿಚೆಲ್ ಅವರು ಸೂರ್ಯ ಶಾಖಕ್ಕೆ ತುತ್ತಾಗಿ ಟ್ಯಾನ್ ಸಮಸ್ಯೆಯಿಂದ ಬಳಲಬೇಡಿ ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ ಎಂದು ಇನ್ಸ್ಟಾ ಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಚರ್ಮದ ಕ್ಯಾನ್ಸರ್ ಇದೆ ಎಂದು ಬೇಗನೆ ಬಂದಿರುವುದರಿಂದ ರೋಗ ನಿವಾರಣೆ ಸಾಧ್ಯವಿದೆ.[ದಿ ಅಂಡರ್ ಟೇಕರ್ ರೀ ಎಂಟ್ರಿ, ಡೆಡ್ ಮ್ಯಾನ್ ವಾಪಸ್]

ಈ ಹಿಂದೆ WWE ಹಾಲ್ ಆಫ್ ಫೇಮ್ ಸೇರಿದ್ದ ಬ್ರೆಟ್ 'ದಿ ಹಿಟ್ಮನ್' ಹಾರ್ಟ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಆದರೆ, ಸೂಕ್ತ ಚಿಕಿತ್ಸೆ ನಂತರ ಗುಣಮುಖರಾದರು. ನಂತರ ಆತನ ಸಂಬಂಧಿ ನತಾಲಿಯಾ ಕುಸ್ತಿ ಕಣಕ್ಕೆ ಇಳಿದು ಮಹಿಳಾ ಚಾಂಪಿಯನ್ ಆಗಿದ್ದರು. ಈಗ ಮಿಷಲ್ ಅವರ ಆರೋಗ್ಯ ಸುಧಾರಣೆಗಾಗಿ ವಿಶ್ವದೆಲ್ಲೆಡೆಯಿಂದ ಸಂದೇಶಗಳು ಹರಿದು ಬಂದಿವೆ.

ಮಿಚೆಲ್ 2010ರಲ್ಲಿ ನಿವೃತ್ತಿ ಹೊಂದಿದರು

ಮಿಚೆಲ್ 2010ರಲ್ಲಿ ನಿವೃತ್ತಿ ಹೊಂದಿದರು

ಶೇನ್ ಮೆಕ್ ಮಹ್ನ್ ಹಾಗೂ ಡೇನಿಯನ್ ಬ್ರಿಯಾನ್ ಅವರ ಬ್ರಾಂಡ್ ಪರ ಅಂಡರ್ ಟೇಕರ್ ಹಾಗೂ ಮಿಷಲ್ ಅವರು ಕೂಡಾ ಪ್ರಚಾರ ಆರಂಭಿಸಿದ್ದಾರೆ. 51 ವರ್ಷ ವಯಸ್ಸಿನ ಅಂಡರ್ ಟೇಕರ್ ಅವರ 36 ವರ್ಷದ ಪತ್ನಿ ಮಿಷಲ್ ಅವರು ಮೊಟ್ಟ ಮೊದಲ ದಿವಾಸ್ ಚಾಂಪಿಯನ್ ಆಗಿದ್ದರು. 2010ರಲ್ಲಿ ನಿವೃತ್ತಿ ಹೊಂದಿದರು. ಚಿತ್ರದಲ್ಲಿ ಅಂಡರ್ ಟೇಕರ್ ಹಾಗೂ ಮಿಷಲ್

ಡೇಟಿಂಗ್ ಮಾಡಿ ನಂತರ 2010ರಲ್ಲಿ ಮದುವೆ

ಡೇಟಿಂಗ್ ಮಾಡಿ ನಂತರ 2010ರಲ್ಲಿ ಮದುವೆ

ಇಬ್ಬರು 2007-08ರಲ್ಲಿ ಡೇಟಿಂಗ್ ಮಾಡಿ ನಂತರ 2010ರಲ್ಲಿ ಮದುವೆಯಾದರು. ಇದಕ್ಕೂ ಮುನ್ನ ಅಂಡರ್ ಟೇಕರ್ ಅವರು ಎರಡನೇ ಪತ್ನಿ ಸಾರಾ ಅವರಿಗೆ ವಿಚ್ಛೇದನ ನೀಡಿದ್ದರು. ಅಂಡರ್ ಟೇಕರ್ ಹಾಗೂ ಮಿಷಲ್ ದಂಪತಿಗೆ ಚಾಸಿ, ಗ್ರಾಸಿ ಹಾಗೂ ಕಾರಾ ಫೇತ್ ಎಂಬ ಮೂವರು ಮಕ್ಕಳಿದ್ದಾರೆ. ಈಗ ಮಿಷಲ್ ಅವರ ಆರೋಗ್ಯ ಸುಧಾರಣೆಗಾಗಿ ವಿಶ್ವದೆಲ್ಲೆಡೆಯಿಂದ ಸಂದೇಶಗಳು ಹರಿದು ಬಂದಿವೆ.

WWE ಎಂಬ ನಡೆಯುವುದೆಲ್ಲ ಕಣ್ಕಟ್ಟು

WWE ಎಂಬ ನಡೆಯುವುದೆಲ್ಲ ಕಣ್ಕಟ್ಟು

ಅಮೆರಿಕದಂತೆ ಭಾರತದಲ್ಲೂ ಹಲವರಿಗೆ ಹಲವು ದಶಕಗಳಿಂದ ಹುಚ್ಚು ಹಿಡಿಸಿರುವ WWE (ಈ ಮುಂಚೆ WWF) ಒಂದು ಕ್ರೀಡೆ. ಇಲ್ಲಿ ನಡೆಯುವುದೆಲ್ಲ ಕಣ್ಕಟ್ಟು. ಹಾಗೆಲ್ಲ ಯದ್ವಾ ತದ್ವಾ ಹೊಡೆದರೆ ಯಾರಾದ್ರೂ ಬದುಕಲು ಸಾಧ್ಯವೇ? ಇನ್ನೂ ಈ ಮನುಷ್ಯ 'ಅತೀಂದ್ರಿಯ ಶಕ್ತಿ ಹೊಂದಿದ್ದಾನಂತೆ, ಸಾವು ಗೆದ್ದವನು ಅಥವಾ ಪ್ರೇತಾತ್ಮಗಳ ನಾಯಕನಾಗಿ ಕಣದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬುದೆಲ್ಲ ಸುಮ್ಮನೆ ಗಿಮಿಕ್ ಎಂದು ಗೊತ್ತಿದ್ದರೂ ಜನ WWE ನೋಡೋದು ಬಿಟ್ಟಿಲ್ಲ

ಅಂಡರ್ ಟೇಕರ್ ಎಂಬ ದೈತ್ಯ ಪ್ರೇತ

ಅಂಡರ್ ಟೇಕರ್ ಎಂಬ ದೈತ್ಯ ಪ್ರೇತ! ಟೆಕ್ಸಾಸ್ ಮೂಲದ ಮಾರ್ಕ್ ವಿಲಿಯಂ ಅಲಿಯಾಸ್ ಅಂಡರ್ ಟೇಕರ್ 6 ಅಡಿ 10 ಇಂಚು ಎತ್ತರ, 136 ಕೆಜಿ ತೂಕುವ ದೈತ್ಯ. ರಿಂಗ್ ನಲ್ಲಿ ಮಾರಣಾಂತಿಕ ಪೆಟ್ಟು ತಿಂದು ಸಾಯುವ ಸ್ಥಿತಿ ತಲುಪಿದರೂ ಎದ್ದು ಬಡಿದಾಡುವ ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟು ಎಂಬ ಮಾತಿದೆ. 50 ವರ್ಷದ ಅಂಡರ್ ಟೇಕರ್ 1990ರಿಂದ ಈ ಕುಸ್ತಿ ಮೂಲಕ ಮನರಂಜನೆ ನೀಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Undertaker’s wife, Michelle McCool has been diagnosed with a disease which is seemingly terrifying. As noted in an Instagram picture, Michelle is suffering from skin cancer.
Please Wait while comments are loading...