ವಿಂಬಲ್ಡನ್ ಗೆದ್ದು, ಸ್ಟೆಫಿ ಗ್ರಾಫ್ ದಾಖಲೆ ಮುರಿದ ಸೆರೆನಾ

Posted By:
Subscribe to Oneindia Kannada

ಲಂಡನ್, ಜುಲೈ 10: ಇಲ್ಲಿನ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಯುಎಸ್ ನ ಸೆರೆನಾ ವಿಲಿಯಮ್ಸ್ ಅವರು ಮತ್ತೊಮ್ಮೆ ವಿಂಬಲ್ಡನ್ ಕಿರೀಟ ಧರಿಸಿದ್ದಾರೆ. ಶನಿವಾರ ನಡೆದ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಅಂತಿಮ ಹಣಾಹಣಿಯಲ್ಲಿ ಜರ್ಮನಿಯ ಏಂಜಲಿಕ್ ಕರ್ಬರ್ ಅವರನ್ನು ಸೋಲಿಸುವ ಮೂಲಕ ವೃತ್ತಿ ಬದುಕಿನ 22 ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಸೆರೆನಾ ಅವರು ಏಂಜಲಿಕ್ ವಿರುದ್ಧ 7-5,6-3 ಸೆಟ್ ಗಳ ಅಂತರದಲ್ಲಿ ಜಯ ದಾಖಲಿಸಿದರು. ಈ ಮೂಲಕ 7ನೇ ವಿಂಬಲ್ಡನ್ ಗೆದ್ದ ಸೆರೆನಾ ಅವರು, ಸ್ಟೆಫಿ ಗ್ರಾಫ್ ಅವರ 22 ಗ್ರ್ಯಾನ್ ಸ್ಲಾಮ್ ದಾಖಲೆಯಲ್ಲಿ ಸರಿಗಟ್ಟಿದರು.[300ನೇ ಗ್ರಾನ್ ಸ್ಲಾಮ್ ಗೆದ್ದ ಸೆರೆನಾ ವಿಲಿಯಮ್ಸ್]

Serena Williams wins Wimbledon for historic 22nd grand slam title

ಇದೇ ವರ್ಷದಲ್ಲಿ ಯುಎಸ್ ಓಪನ್​ನಲ್ಲಿ ಸೆಮಿಫೈನಲ್​ನಲ್ಲಿ, ಆಸ್ಟ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್ ಟೂರ್ನಿಯ ಫೈನಲ್​ನಲ್ಲಿ ಸೋಲು ಕಂಡಿದ್ದ ಸೆರೆನಾ ಅವರು ವಿಂಬಲ್ಡನ್ ಗೆಲ್ಲುವ ಮೂಲಕ ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದ್ದಾರೆ.

ಸೆರೇನಾ ವಿಲಿಯಮ್ಸ್ ಅವರಿಗೆ ಟ್ರೋಫಿಯೊಂದಿಗೆ 18.5 ಕೋಟಿ ರು. ಬಹುಮಾನ (ಸುಮಾರು 2 ಮಿಲಿಯನ್ ಪೌಂಡ್) ಗೆದ್ದುಕೊಂಡರು. ರನ್ನರ್ ​ಅಪ್ ಕರ್ಬರ್ 8.69 ಕೋಟಿ ರು. (1 ಮಿಲಿಯನ್ ಪೌಂಡ್) ಬಹುಮಾನ ಪಡೆದುಕೊಂಡರು.

ಡಬ್ಬಲ್ ಥ್ರಿಲ್ : ಸಿಂಗಲ್ಸ್ ಗೆದ್ದ ಐದು ಗಂಟೆ ಅಂತರದಲ್ಲೇ ಡಬಲ್ಸ್ ಪ್ರಶಸ್ತಿಯನ್ನು ಸೆರೆನಾ ಗೆದ್ದುಕೊಂಡಿದ್ದಾರೆ. ಸೋದರಿ ವೀನಸ್ ವಿಲಿಯಮ್ಸ್ ಜತೆಗೂಡಿ 14 ನೇ ಗ್ರ್ಯಾನ್ ಸ್ಲಾಮ್ ಬಾಚಿದ್ದಾರೆ. ಫೈನಲ್ ನಲ್ಲಿ ಟಿಮಿಯಾ ಬಾಬೊಸ್ ಹಾಗೂ ಯರೋಸ್ಲಾವಾ ಶ್ವೆಡೋವಾ ವಿರುದ್ಧ 6-3, 6-4 ವಿರುದ್ಧ ನೇರ ಸೆಟ್ ಗಳ ಜಯ ದಾಖಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Serena beat Angelique Kerber 7-5 6-3 to win her 22nd Grand Slam, equalling Steffi Graf's open era record.
Please Wait while comments are loading...