ಗೆಲುವಿನೊಂದಿಗೆ ಸಾನಿಯಾ- ಮಾರ್ಟಿನಾ ವರ್ಷಾರಂಭ

Posted By:
Subscribe to Oneindia Kannada

ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಪ್ರಶಸ್ತಿ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದಾರೆ. 1 ಮಿಲಿಯನ್ ಡಾಲರ್ ಮೊತ್ತದ ಈ ಟೂರ್ನಿ ಮುಂಬರುವ ಆಸ್ಟ್ರೇಲಿಯಾ ಓಪನ್ ಗೆ ಪೂರ್ವ ತಯಾರಿಯಾಗಿದೆ.

ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಆಂಜೆಲಿಕ್ ಕೆರ್ಬರ್ ಹಾಗೂ ಆಂಡ್ರಿಯಾ ಪೆಟ್ಕೊವಿಕ್ ಎದ್ದುರು ಇಂಡೋ-ಸ್ವಿಸ್ ಜೋಡಿ 7 -5 , 6 -1 ನೇರ ಸೆಟ್ ಗಳಲ್ಲಿ ಗೆಲುವು ಪಡೆದು ಪ್ರಶಸ್ತಿ ಪಡೆದರು. ಮೊದಲ ಡಬ್ಲ್ಯೂಟಿಎ ಟೂರ್ನಿಯಲ್ಲಿ ಸಾನಿಯಾ ಹಾಗೂ ಹಿಂಗಿಸ್ ಶುಭಾರಂಭ ಮಾಡಿದಂತಾಗಿದೆ.

Tennis: Sania-Martina start New Year with title in Brisbane

ಪ್ರಶಸ್ತಿ ಸುತ್ತಿಗೆ ಫೆಡರರ್: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್, ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಪ್ರಶಸ್ತಿ ಸುತ್ತಿಗೆ ಧಾವಿಸಿದ್ದಾರೆ. ಶನಿವಾರ ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಕೆನಡಾದ ಮಿಲಾಸ್ ರೋನಿಕ್ ವಿರುದ್ಧ 17 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳ ಒಡೆಯ ಫೆಡರರ್ 6 -1 6 -4 ರ ಸುನಾಯಾಸ ಸೆಟ್ ಗಳಲ್ಲಿ ಗೆಲುವು ದಾಖಲಿಸಿ ಫೈನಲ್ ತಲುಪಿದರು.

ಅಜರೆಂಕಾ ಸಡ್ಡು: ಬೆಲಾರಸ್ ನ ವಿಕ್ಟೋರಿಯಾ ಅಜರೆಂಕಾ ಚಾಂಪಿಯನ್ ಆಗಿದ್ದಾರೆ. ವಿಶ್ವದ ಮಾಜಿ ನಂ.1 ಆಟಗಾರ್ತಿ, ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್ ವಿರುದ್ಧ ಉತ್ತಮ ಏಸ್ ಗಳನ್ನು ಸಿಡಿಸುವ ಮೂಲಕ 6 -3 6 -1 ಸೆಟ್ ಗಳ ಅಂತರದಲ್ಲಿ ಅಜರೆಂಕಾ ಜಯ ಸಾಧಿಸಿ ಆ ಮೂಲಕ ಆಸೀಸ್ ಓಪನ್ ಗೆ ಸಿದ್ಧರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The world's top women tennis pair of Sania Mirza and Martina Hingis started the New Year on a brilliant note by clinching the title of the $1 million Brisbane International at the Queensland Tennis Centre here on Saturday.
Please Wait while comments are loading...