ಟೆನಿಸ್: ಮರಿಯಾ ಶರಪೋವಾಗೆ 2 ವರ್ಷ ಅಮಾನತು ಶಿಕ್ಷೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 08: ನಿಷೇಧಿತ ಔಷಧಿ ಸೇವಿಸಿ ಡ್ರಗ್ ಟೆಸ್ಟ್ ನಲ್ಲಿ ಫೇಲಾದ ಕಾರಣ ಜನಪ್ರಿಯ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರಿಗೆ ಎರಡು ವರ್ಷಗಳ ಕಾಲ ಅಮಾನತು ಶಿಕ್ಷೆ ಸಿಕ್ಕಿದೆ.

ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆ ದಿನ ಶರಪೋವಾ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು. ಬುಧವಾರ(ಜೂನ್ 8) ಶಿಕ್ಷೆ ಪ್ರಮಾಣವನ್ನು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಪ್ರಕಟಿಸಿದೆ.[ಇಷ್ಟಕ್ಕೂ ಸಚಿನ್ ಬಗ್ಗೆ ಮರಿಯಾ ಹೇಳಿದ್ದೇನು?]

28ವರ್ಷ ವಯಸ್ಸಿನ ಮರಿಯಾ ಶರಪೋವಾ ಅವರು ಆಸ್ಟ್ರೇಲಿಯನ್ ಓಪನ್ ವೇಳೆ ಡ್ರಗ್ ಟೆಸ್ಟ್ ನಲ್ಲಿ ಫೇಲ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶರಪೋವಾ ಈ ಔಷಧವನ್ನು ಐಟಿಎಫ್ ನಿಷೇಧಿತ ಪಟ್ಟಿಯಲ್ಲಿ ಯಾವಾಗಿನಿಂದ ಸೇರಿಸಿದರೋ ಗೊತ್ತಿಲ್ಲ. ನನ್ನ ನಿರ್ಲಕ್ಷ್ಯದಿಂದ ಈ ಪ್ರಮಾದವಾಗಿದೆ ಎಂದಿದ್ದರು.

Maria Sharapova

ಜನವರಿ 01ರಿಂದ ಮೆಲ್ಡೋರ್ನೆಟ್ ಎಂಬ ಔಷಧಿಯಲ್ಲಿರುವ ಮೆಲ್ಡೋನಿಯಂ ಅಂಶಕ್ಕೆ ನಿಷೇಧಿಸಲಾಗಿದೆ. ಮಾದಕ ದ್ರವ್ಯ ನಿಯಂತ್ರಣ ಏಜನ್ಸಿ (ವಾಡಾ)ಯ ಹೊಸ ನಿಯಮದ ಈ ಬಗ್ಗೆ ನನಗೆ ತಿಳಿದಿಲ್ಲ ಎಂದು ಶರಪೋವಾ ಹೇಳಿದ್ದಾರೆ.

2004ರಲ್ಲಿ ವಿಂಬಲ್ಡನ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಸಾಧನೆ ಮಾಡಿದ ಶರಪೋವಾ ಅವರು ವಿಶ್ವದ ನಂ.1 ಆಟಗಾರ್ತಿಯಾಗಿ ಮೆರೆದರು. ಟೆನಿಸ್ ಕ್ರೀಡೆಗೆ ಗ್ಲಾಮರ್ ಟಚ್ ತಂದವರು.

ಐಟಿಎಫ್ ನ ಮಾದಕ ದ್ರವ್ಯ ನಿಯಂತ್ರಣ ಯೋಜನೆಯಂತೆ ಈ ರೀತಿ ಉದ್ದೀಪನ ಪರೀಕ್ಷೆಯಲ್ಲಿ ಫೇಲ್ ಆದ ಕ್ರೀಡಾಪಟುಗಳಿಗೆ ನಾಲ್ಕು ವರ್ಷಗಳ ನಿಷೇಧ ಹೇರಲಾಗುತ್ತದೆ. ಆದರೆ, ಮರಿಯಾಗೆ ಎರಡು ವರ್ಷ ಶಿಕ್ಷೆ ಸಿಕ್ಕಿದೆ.

ಈ ಹಿಂದೆ ಕ್ರಿಕೆಟ್ ಜಗತ್ತು ಕಂಡ ಮಹಾನ್ ಆಟಗಾರ ಸಚಿನ್ ತೆಂಡೂಲ್ಕರ್ ಯಾರೆಂದು ನನಗೆ ಗೊತ್ತಿಲ್ಲ ಎಂದ ರಷ್ಯಾದ ಜನಪ್ರಿಯ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಮರಿಯಾ ವಿರುದ್ಧ ಸಚಿನ್ ಅಭಿಮಾನಿಗಳು ಕಿಡಿಕಾರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Maria Sharapova, the glamorous tennis star from Russia and second highest-paid sportswoman, suspended from Tennis for Two years the International Tennis Federation (ITF) said.
Please Wait while comments are loading...