ಭಲೇ ಜೋಡಿ: ಸಾನಿಯಾ+ಮಾರ್ಟಿನಾ- 41 ನಾಟೌಟ್

Posted By:
Subscribe to Oneindia Kannada

ದೋಹಾ, ಫೆ. 24: ಡಜನ್ ಗಟ್ಟಲೆ ಗ್ರಾನ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಮತ್ತೊಂದು ಸಾಧನೆ ಮಾಡಿದ್ದಾರೆ. ಸತತವಾಗಿ 41 ಪಂದ್ಯಗಳನ್ನು ಗೆಲುವಿನೊಂದಿಗೆ ಪೂರೈಸಿದ್ದಾರೆ.

ಕತಾರ್ ಟೋಟಲ್ ಓಪನ್ ನ ಕ್ವಾರ್ಟರ್ ಫೈನಲ್ ಹಂತ ತಲುಪಿರುವ ಈ ಜೋಡಿಗೆ 2.8 ಮಿಲಿಯನ್ ಯುಎಸ್ ಡಾಲರ್ ಮೊತ್ತ ಸಿಕ್ಕಿದೆ. ಯಾವುದೇ ಸೀಡ್ ಪಡೆಯದ ಚೀನಾದ ಜೋಡಿ ಯಿ ಫಾನ್ ಕ್ಸು ಹಾಗೂ ಸೈ ಸೈ ಝೆಂಗ್ ಜೋಡಿಯನ್ನು ಟಾಪ್ ಸೀಡೆಡ್ ಮಾರ್ಟಿನಾ ಹಾಗೂ ಸಾನಿಯಾ ಅವರು 6-4, 4-6, 10-4 ಸೆಟ್ ಗಳಲ್ಲಿ ಒಂದು ಗಂಟೆ 25 ನಿಮಿಷಗಳ ಅವಧಿಯಲ್ಲಿ ಮಣಿಸಿದರು. [ಆಸ್ಟ್ರೇಲಿಯನ್ ಓಪನ್ ಗೆದ್ದ ಸಾನಿಯಾ-ಮಾರ್ಟಿನಾ ಜೋಡಿ]

Sania and Martina

ಈ ವರ್ಷ ಸೋಲು ಕಾಣದ ಜೋಡಿ : ಖಲೀಫಾ ಇಂಟರ್ ನ್ಯಾಷನಲ್ ಟೆನಿಸ್ ಹಾಗೂ ಸ್ಕ್ವಾಶ್ ಕಾಂಪ್ಲೆಕ್ಸ್ ನಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯ ಗೆಲ್ಲುವ ಮೂಲಕ ಈ ವರ್ಷ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಸಿಡ್ನಿ, ಬ್ರಿಸ್ಬೇನ್, ಸೈಂಟ್ ಪೀಟರ್ಸ್ ಬರ್ಗ್ ಹಾಗೂ ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ಈ ಜೋಡಿ ಒಂದೇ ಒಂದು ಪಂದ್ಯದಲ್ಲೂ ಸೋಲು ಕಂಡಿಲ್ಲ.[ಸಾನಿಯಾ- ಮಾರ್ಟಿನಾರಿಂದ ಸತತ ಗೆಲುವು, ವಿಶ್ವದಾಖಲೆ]

ಅಭಿಮಾನಿಗಳಿಂದ 'SanTina' ಎಂದು ಕರೆಸಿಕೊಳ್ಳುವ ಸಾನಿಯಾ + ಮಾರ್ಟಿನಾ ಅವರು ಈ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ 'ಬೈ' ಪಡೆದಿದ್ದರು. ಈ ಟೂರ್ನಿ ಗೆಲ್ಲುವ ಫೇವರೀಟ್ ಎನಿಸಿದ್ದಾರೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
41st successive victory for Sania Mirza-Martina Hingis pairIndo-Swiss top tennis pair Sania Mirza and Martina Hingis expectedly romped home into yet another quarterfinal - their 41st successive win on the circuit - but not before getting a scare in their second round win in women's doubles at the $2.8 million Qatar Total Open here.
Please Wait while comments are loading...