ಗಾಲ್ಫ್: ಇಂಡಿಯನ್ ಓಪನ್ ಗೆದ್ದ ಬೆಂಗಳೂರಿನ ಅದಿತಿ

Posted By:
Subscribe to Oneindia Kannada

ಗುರುಗ್ರಾಮ್, ನವೆಂಬರ್ 14: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದ ಬೆಂಗಳೂರಿನ ಗಾಲ್ಫರ್ ಅದಿತಿ ಅವರು ಹೀರೋ ವುಮೆನ್ಸ್ ಇಂಡಿಯನ್ ಓಪನ್‌ ಗೆದ್ದುಕೊಂಡಿದ್ದಾರೆ.

ಮಹಿಳೆಯರ ಇಂಡಿಯನ್ ಓಪನ್‌ ಗಾಲ್ಫ್ ಪ್ರಶಸ್ತಿ ಗಳಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿರುವ ಯುವ ಗಾಲ್ಫ್ ತಾರೆ ಅದಿತಿ ಅಶೋಕ್ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದು ಬಂದಿವೆ. [ರಿಯೋದಲ್ಲಿ ಬೆಂಗಳೂರು ಗಾಲ್ಫರ್ ಅದಿತಿ]

Teen golfer Aditi Ashok wins Hero Women's Indian Open, creates history

ಲೇಡಿಸ್ ಯುರೋಪಿಯನ್ ಟೂರ್ ಪ್ರಶಸ್ತಿಯಾಗಿರುವ ಇಂಡಿಯನ್ ಓಪನ್‌ನ ಅಂತಿಮ ಸುತ್ತಿನಲ್ಲಿ 72 ಅಂಕ ಗಳಿಸಿದ ಬೆಂಗಳೂರಿನ 18ರ ಪ್ರಾಯದ ಅದಿತಿ ಪ್ರಶಸ್ತಿ ತನ್ನದಾಗಿಸಿಕೊಂಡರು. [ಕವಾಡಿಗನ ಮಗನಿಗೆ ಮತ್ತೆ ವಿಶ್ವ ಚಾಂಪಿಯನ್ ಕಿರೀಟ]

ಅಮೆರಿಕದ ಬ್ರಿಟನಿ ಲಿನ್ಸಿಕೊಮ್ ಹಾಗೂ ಸ್ಪೇನ್‌ನ ಬೆಲೆನ್ ಮೊರೊ ಟೈ ಸಾಧಿಸಿ ಎರಡನೆ ಸ್ಥಾನ ಪಡೆದರು. ಪ್ರಶಸ್ತಿ ಜಯಿಸಿರುವ ಅದಿತಿ 54,988.20 ಯುರೋಸ್‌ನ್ನು ಗೆದ್ದುಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian golfer Aditi Ashok created history by winning her maiden Hero Women's Indian Open the DLF Golf and Country Club here on Sunday (Nov 13).
Please Wait while comments are loading...