ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ : ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ

By Mahesh

ಅಡಿಲೇಡ್, ಫೆ.12: ಐಸಿಸಿ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಟೀಂ ಇಂಡಿಯಾ ಪಂದ್ಯಗಳನ್ನು ದೂರದರ್ಶನದಲ್ಲೇ ನೋಡಬಹುದು ಎಂಬ ಶುಭ ಸುದ್ದಿ ಅಭಿಮಾನಿಗಳ ಕಿವಿಗೆ ಈಗಾಗಲೇ ಬಿದ್ದಿದೆ. ಹಾಲಿ ಚಾಂಪಿಯನ್ ಭಾರತ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಎಲ್ಲರಲ್ಲಿದೆ.

ಫೆ.14ರಿಂದ ಆರಂಭಗೊಳ್ಳಲಿರುವ 11ನೇ ಆವೃತ್ತಿಯ ವಿಶ್ವಕಪ್, 44 ದಿನಗಳ ಕ್ರಿಕೆಟ್ ಹಬ್ಬ ಸಂಪೂರ್ಣವಾಗಿ ಸವಿಯಬೇಕಾದರೆ ನಿಮ್ಮ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ 1ಚಾನೆಲ್ ಇರಲೇಬೇಕು. ಬರೀ ಭಾರತದ ಪಂದ್ಯವನ್ನು ಕಾಣಬಯಸುವವರು ಮುಂಜಾನೆ 3.30 AM(ಭಾರತೀಯ ಕಾಲಮಾನ ಪ್ರಕಾರ)ಕ್ಕೆ ಎದ್ದು ದೂರದರ್ಶನ ಡಿಡಿ ನ್ಯಾಷನಲ್ ಚಾನೆಲ್ ಆನ್ ಮಾಡಿದರೆ ಸಾಕು. ಅಥವಾ ಕನ್ನಡ ಪ್ರೇಮಿಗಳು ಸುವರ್ಣ ಪ್ಲಸ್ ವಾಹಿನಿ ನೋಡಿ.[ವೀಕ್ಷಕ ವಿವರಣೆ ಕಸ್ತೂರಿ ಕನ್ನಡದಲ್ಲಿ!]

Team India's ICC World Cup 2015 schedule in IST and squad

ಕಳೆದ ಡಿಸೆಂಬರ್ ಅಂತ್ಯದಿಂದ ಆಸ್ಟ್ರೇಲಿಯಾದಲ್ಲೇ ಬೀಡು ಬಿಟ್ಟಿರುವ ಧೋನಿ ನೇತೃತ್ವದ ಟೀಂ ಇಂಡಿಯಾಕ್ಕೆ ವಿಶ್ವಕಪ್ ಆರಂಭಕ್ಕೂ ಮುನ್ನ ಸರಿಯಾದ ಅಭ್ಯಾಸ ಸಿಕ್ಕಿಲ್ಲ. ಇಲ್ಲಿ ತನಕದ ಆಸೀಸ್ ಪ್ರವಾಸದಲ್ಲಿ ಗೆದ್ದಿರುವುದು ಒಂದೇ ಪಂದ್ಯ. ಅದು ಅಫ್ಘಾನಿಸ್ತಾನದ ಮೇಲೆ..

ಅದರೂ ವಿಶ್ವಕಪ್ ವೇಳಾಪಟ್ಟಿ ನೋಡಿದರೆ ಭಾರತ ಸುಲಭವಾಗಿ ಕ್ವಾರ್ಟರ್ ಫೈನಲ್ ಹಂತ ತಲುಪಬಹುದು. ಅಲ್ಲಿಂದ ಮುಂದೆ ತಂಡವನ್ನು ಯಾರು ಗೆಲ್ಲಿಸುತ್ತಾರೋ ಕಾದು ನೋಡಬೇಕಿದೆ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಫೆ.15ರಂದು ಅಡಿಲೇಡ್ ನಲ್ಲಿ ಪಾಕಿಸ್ತಾನವಿರುದ್ಧ ಮೊದಲ ಪಂದ್ಯವಾಡಲಿರುವ ಟೀಂ ಇಂಡಿಯಾಕ್ಕೆ ಶುಭ ಹಾರೈಕೆಗಳು.. ಇಲ್ಲಿ ಟೀಂ ಇಂಡಿಯಾದ ಪಂದ್ಯಗಳ ವೇಳಾಪಟ್ಟಿ ಹಾಗೂ ಭಾರತೀಯ ಕಾಲಮಾನ ಪ್ರಕಾರ ಟೈಮಿಂಗ್ಸ್ ನೀಡಲಾಗಿದೆ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

* ಬಿ ಗುಂಪಿನಲ್ಲಿ ಭಾರತದ ಜೊತೆಗೆ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಐರ್ಲೆಂಡ್, ಯುಎಇ
* ಭಾರತದ ಎಲ್ಲಾ ಪಂದ್ಯಗಳು ಹಗಲು/ರಾತ್ರಿ ಪಂದ್ಯಗಳಾಗಿವೆ.

ವಿಶ್ವಕಪ್ ಬಿ ಗುಂಪಿನಲ್ಲಿ ಭಾರತದ ವೇಳಾಪಟ್ಟಿ
* ಫೆ.15 (ಭಾನುವಾರ) vs ಪಾಕಿಸ್ತಾನ (ಅಡಿಲೇಡ್) 9 AM IST [ಟಿಕೆಟ್ ದಾಖಲೆ ಮಾರಾಟ]
* ಫೆ.22 (ಭಾನುವಾರ) vs ದಕ್ಷಿಣ ಆಫ್ರಿಕಾ (ಮೆಲ್ಬೋರ್ನ್) 9 AM IST
* ಫೆ. 28 (ಶನಿವಾರ) vs ಯುನೈಟೆಡ್ ಅರಬ್ ಎಮಿರೈಟ್ಸ್ (ಪರ್ತ್) 12 PM IST
* ಮಾ.6 (ಶುಕ್ರವಾರ) vs ವೆಸ್ಟ್ ಇಂಡೀಸ್ (ಪರ್ತ್) 12PM IST
* ಮಾ.10 (ಮಂಗಳವಾರ) vs ಐರ್ಲೆಂಡ್ (ಹ್ಯಾಮಿಲ್ಟನ್) 6.30 AM IST
* ಮಾ.14 (ಶನಿವಾರ) vs ಜಿಂಬಾಬ್ವೆ (ಅಕ್ಲೆಂಡ್) 6.30 AM IST

* ಕ್ವಾರ್ಟರ್ ಫೈನಲ್ ಪಂದ್ಯಗಳು ಮಾ.18(ಬುಧವಾರ), ಫೈನಲ್ ಮಾ.29 ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿದೆ.

ವಿಶ್ವಕಪ್ ತಂಡಕ್ಕೆ ಆಯ್ಕೆಯಾದ 15 ಜನ ಸದಸ್ಯರು:
ಅಜಿಂಕ್ಯ ರಹಾನೆ, ಶಿಖರ್ ಧವನ್,ವಿರಾಟ್ ಕೊಹ್ಲಿ, (ಉಪ ನಾಯಕ), ಸುರೇಶ್ ರೈನಾ, ರೋಹಿತ್ ಶರ್ಮ, ಎಂಎಸ್ ಧೋನಿ (ವಿಕೆಟ್ ಕೀಪರ್,ನಾಯಕ), ಅಂಬಟಿ ರಾಯುಡು (ವಿಕೆಟ್ ಕೀಪರ್),ಆರ್ ಅಶ್ವಿನ್,ಅಕ್ಷರ್ ಪಟೇಲ್,ರವೀಂದ್ರ ಜಡೇಜ, ಸ್ಟುವರ್ಟ್ ಬಿನ್ನಿ ಸ್ಟುವರ್ಟ್ ಬಿನ್ನಿ,ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಉಮೇಶ್ ಯಾದವ್, ಮೋಹಿತ್ ಶರ್ಮ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X