ಟಿ1 ಪ್ರೈಮಾ ಟ್ರಕ್ ರೇಸಿಂಗ್ ಗೆ ಭಾರತದ ಚಾಲಕರು

Posted By:
Subscribe to Oneindia Kannada

ಮುಂಬೈ, ಮಾರ್ಚ್ 04: ಗ್ರೇಟರ್ ನೋಯ್ಡಾದ ಬುದ್ಧ್ ಇಂಟರ್ ನ್ಯಾಷನಲ್ ಸರ್ಕಿಟ್ (ಬಿಐಸಿ) ಯಲ್ಲಿ ಮಾರ್ಚ್ 20ರಂದು ಟಾಟಾ ಮೋಟರ್ಟ್ ನಿಂದ 3 ನೇ ಟ್ರಕ್ ರೇಸಿಂಗ್ ಚಾಂಪಿಯನ್ ಶಿಪ್ ಅಂತಿಮ ಸುತ್ತಿನಲ್ಲಿ ಭಾರತೀಯ ಟ್ರಕ್ ಚಾಲಕರು ಸ್ಪರ್ಧಿಸಲಿದ್ದಾರೆ.

4 ನೇ ಹಂತದಲ್ಲಿ 17 ಸಂಭಾವ್ಯ ಭಾರತೀಯ ಟ್ರಕ್ ಚಾಲಕರು ಪರಸ್ಪರ ಸ್ಪರ್ಧಿಸಲಿದ್ದಾರೆ ಎಂದು ಚಾಂಪಿಯನ್ ಶೀಪ್ ನ ಆತಿಥ್ಯ ವಹಿಸಿರುವ ಟಾಟಾ ಮೋಟರ್ಸ್ ತಿಳಿಸಿದೆ. ಟಿಆರ್ ಟಿಯ ಅಂತಿಮ ಸುತ್ತಲ್ಲಿ, 12 ಮಂದಿ ಭಾರತೀಯ ಟ್ರಕ್ ರೇಸಿಂಗ್ ಫೈನಲಿಸ್ಟ್ ಗಳು ನಿರ್ಣಯಗೊಳ್ಳಲಿದ್ದು, ಅವರು ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್ ಶಿಪ್ 2016 ರ ಸೀಸನ್ 3ನಲ್ಲಿ ಪರಸ್ಪರ ಸೆಣಸಲಿದ್ದಾರೆ.

ಟಾಟಾ ಮೋಟಾರ್ಸ್ ಹೊಸ ಟಿ1 2016ರ ರೇಸ್ ಟ್ರಕ್ ಅನ್ನು ಒಟ್ಟಾರೆ 43 ಹೆಚ್ಚುವರಿ ಮಾರ್ಪಾಡುಗಳೊಂದಿಗೆ ಹೆಚ್ಚು ವೇಗ ಹಾಗೂ ಉದ್ವೇಗಗೊಳಿಸುವ ಸೀಸನ್ 3ಕ್ಕಾಗಿ ಅನಾವರಣಗೊಳಿಸಿದೆ.

2014ರಲ್ಲಿ ಆರಂಭಗೊಂಡ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್ ಶಿಪ್ ಟಾಟಾ ಮೋಟಾರ್ಸ್ ಚಾಲನೆ ನೀಡಿದ್ದು ಇದು ವಿಶ್ವದಲ್ಲೇ ಅತಿದೊಡ್ಡ ಟ್ರಕ್ ಮಾರುಕಟ್ಟೆಯಾಗಿರುವ ಟ್ರಕ್ ರೇಸಿಂಗ್ ಗೆ ಹೊಸ ಆಯಾಮವನ್ನು ನೀಡಿದೆ. ಕಳೆದ ಎರಡು ವರ್ಷಗಳಿಂದ, ಅಂತಾರಾಷ್ಟ್ರೀಯ ಟ್ರಕ್ ರೇಸಿಂಗ್‍ನ ಅತ್ಯುತ್ತಮ ಪ್ರತಿಭೆ ಜತೆಗೆ ಟಾಟಾ ಮೋಟಾರ್ಸ್ ನ ಟ್ರಕ್ ತಂತ್ರಜ್ಞಾನದಲ್ಲಿನ ಇತ್ತೀಚಿನ ಸುಧಾರಣೆಗಳು ಪ್ರದರ್ಶನಗೊಳ್ಳುತ್ತಿವೆ.
ಟಾಟಾ ಮೋಟಾರ್ಸ್ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‍ಶಿಪ್‍ನ ಸೀಸನ್ 3ಗಾಗಿ ಅಗ್ರಗಣ್ಯ ಬ್ರಾಂಡ್‍ ವಾಬ್ಕೊ, ಜೆಕೆ ಟೈರ್, ಕ್ಯಾಸ್ಟ್ರಾಲ್, ಕಮಿನ್ಸ್, ಟಾಟಾ ಮೋಟಾರ್ಸ್ ಫೈನಾನ್ಸ್,ಟಾಟಾ ಟೆಕ್ನಾಲಜೀಸ್ ಗಳೊಂದಿಗೆ ಸಹಭಾಗಿತ್ವ ಸಾಧಿಸಿದೆ.

ಚೊಚ್ಚಲ ರೇಸ್ ವೀಕ್ಷಿಸಿದ್ದ 25,000 ಪ್ರೇಕ್ಷಕರು

ಚೊಚ್ಚಲ ರೇಸ್ ವೀಕ್ಷಿಸಿದ್ದ 25,000 ಪ್ರೇಕ್ಷಕರು

ಸೀಸನ್ 1ರಲ್ಲಿ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‍ಶಿಪ್ ತನ್ನ ಚೊಚ್ಚಲ ರೇಸ್‍ನಲ್ಲಿ 25,000 ಪ್ರೇಕ್ಷಕರಿಗೆ ಸಾಕ್ಷಿಯಾಯಿತು. 2015ರ ಮಾರ್ಚ್ ನಲ್ಲಿ ನಡೆದ ಸೀಸನ್ 2ರಲ್ಲಿ 50,000 ಮಂದಿ ರೇಸ್ ಕಣ್ತುಂಬಿಕೊಂಡಿದ್ದಾರೆ.

ಸೀಸನ್ 3ಕ್ಕಾಗಿ, ಟಿ1 ರೇಸರ್ ಗೆ ಚಾಲನೆ

ಸೀಸನ್ 3ಕ್ಕಾಗಿ, ಟಿ1 ರೇಸರ್ ಗೆ ಚಾಲನೆ

ಸೀಸನ್ 3ಕ್ಕಾಗಿ, ಟಿ1 ರೇಸರ್ ಕಾರ್ಯಕ್ರಮಕ್ಕೆ ಟಾಟಾ ಮೋಟಾರ್ಸ್ ಚಾಲನೆ ನೀಡಿದೆ. ಈ ತನಕ ಟಾಟಾ ಮೋಟಾರ್ಸನ ಗ್ರಾಹಕ ಆಧಾರಿತ 550ಕ್ಕೂ ಹೆಚ್ಚು ಚಾಲಕರ ಎಂಟ್ರಿಗಳಿಂದ ಕಾರ್ಯಕ್ರಮದ ಮೂಲಕ 17 ಭಾರತೀಯ ಟ್ರಕ್ ಚಾಲಕರನ್ನು ಆಯ್ಕೆಗೊಳಿಸಲಾಗಿದೆ. ಈ 17 ಚಾಲಕರು ಇನ್ನಷ್ಟು ಕಡಿಮೆಗೊಳಿಸಿ 12ಕ್ಕೆ ಇಳಿಸಲಾಗುವುದು. ಅವರು ಅಂತಾರಾಷ್ಟ್ರೀಯ ಮಾನ್ಯತೆಯ ಬುದ್ಧ ಇಂಟರ್‍ನ್ಯಾಶನಲ್ ಸರ್ಕ್ಯೂಟ್, ಗ್ರೇಟರ್ ನೋಯ್ಡಾದಲ್ಲಿ ಪರಸ್ಪರ ಸೆಣಸಲಿದ್ದಾರೆ.

ಸ್ಪರ್ಧೆಯಲ್ಲಿ ಟ್ರಕ್ ಚಾಲಕರ ಆರು ತಂಡಗಳು

ಸ್ಪರ್ಧೆಯಲ್ಲಿ ಟ್ರಕ್ ಚಾಲಕರ ಆರು ತಂಡಗಳು

ಹಿಂದಿನ ವರ್ಷಗಳಂತೆ, ಈ ಚಾಂಪಿಯನ್‍ಶಿಪ್‍ನ ಸೀಸನ್ 3ನಲ್ಲೂ ನುರಿತ ಅಂತಾರಾಷ್ಟ್ರೀಯ ಟ್ರಕ್ ಚಾಲಕರ ಆರು ತಂಡಗಳು ಆಯೋಜನೆ ಮುಂದುವರಿಸಲಿವೆ, ಇದಕ್ಕಾಗಿಯೇ ಸಿದ್ಧಗೊಳಿಸಿದ 12 ಟಾಟಾ ಪ್ರೈಮಾ ರೇಸ್ ಟ್ರಕ್‍ಗಳು ಇರಲಿವೆ. ರೇಸ್‍ನ ದಿನದಂದು, ಎರಡು ವಿಭಾಗಗಳಲ್ಲಿ ನಾಲ್ಕು ರೇಸ್ ಗಳು ಇರಲಿವೆ

ಎರಡು ಸೂಪರ್ ಕ್ಲಾಸ್ - ಭಾರತೀಯ ರೇಸ್ ಟ್ರಕ್ ಚಾಲಕ

ಎರಡು ಸೂಪರ್ ಕ್ಲಾಸ್ - ಭಾರತೀಯ ರೇಸ್ ಟ್ರಕ್ ಚಾಲಕ

ಟ್ರಕ್ ರೇಸಿಂಗ್ ಕ್ಷೇತ್ರದಲ್ಲಿ ಅನುಭವ ಸಾಬೀತುಪಡಿಸಿದ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಹೊಂದಿದ ಚಾಲಕರನ್ನು ಒಳಗೊಂಡಿದೆ. ಟಾಟಾ ಮೋಟಾರ್ಸ್, ವೃತ್ತಿಪರ ಟ್ರಕ್ ಚಾಲನೆ ಆಕಾಂಕ್ಷಿಗಳನ್ನು ರೂಪಿಸುವ, ಅದೇ ವೇಳೆ ಭವಿಷ್ಯದ ಟಿ1ಗೆ ಚಾಲಕರನ್ನು ಸೇರ್ಪಡೆಗೊಳಿಸುವ ಸಲುವಾಗಿನ ಕಂಪನಿಯ ವ್ಯೂಹಾತ್ಮಕ ಉದ್ದೇಶದ ಆಧಾರದಲ್ಲಿ ಒಂದು ಹೊಸ ಭಾರತೀಯ ರೇಸ್ ಟ್ರಕ್ ಚಾಲಕರ ಆಯ್ಕೆ ಮತ್ತು ತರಬೇತಿ ಕಾರ್ಯಕ್ರಮವನ್ನು ರೂಪಿಸಿದೆ ಮತ್ತು ಪರಿಚಯಿಸಿದೆ.

ಸ್ಪರ್ಧೆಯಲ್ಲಿರುವ ತಂಡಗಳು

ಸ್ಪರ್ಧೆಯಲ್ಲಿರುವ ತಂಡಗಳು

1) ಟೀಮ್ ಕ್ಯಾಸ್ಟ್ರಾಲ್ ವೆಕ್ಟನ್ (ಕಳೆದ ವರ್ಷದ ಚಾಂಪಿಯನ್ಸ್)
2) ಟೀಮ್ ಕಮಿನ್ಸ್
3) ಟೀಮ್ ಟಾಟಾ ಟೆಕ್ನಾಲೀಜೀಸ್ ಮೋಟಾರ್‍ಸ್ಪೋರ್ಟ್ಸ್
4) ಟೀಮ್ ಟಾಟಾ ಮೋಟಾರ್ಸ್ ಫೈನಾನ್ಸ್
5) ಟೀಮ್ ಡೀಲರ್ ವಾರಿಯರ್ಸ್
6) ಟೀಮ್ ಡೀಲರ್ ಡೇರ್‍ಡೆವಿಲ್ಸ್

ಟಿ1 ಪ್ರೈಮಾ 2016 ರೇಸ್ ಟ್ರಕ್ ಬಗ್ಗೆ

ಟಿ1 ಪ್ರೈಮಾ 2016 ರೇಸ್ ಟ್ರಕ್ ಬಗ್ಗೆ

ಟಾಟಾ ಪ್ರೈಮಾ 4038.ಎಸ್ ಭಾರಿ ಶಕ್ತಿಯಾದ 370 ಬಿಎಚ್‍ಪಿ @ 2100 ಆರ್ ಪಿಎಂ ಮತ್ತು 130 ಕಿಮೀ/ಗಂ.ಗಿಂತಲೂ ಹೆಚ್ಚಿನ ಟಾಪ್ ಸ್ಪೀಡ್‍ನೊಂದಿಗೆ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‍ಶಿಪ್ 2016ರಲ್ಲಿ ಸ್ಪರ್ಧಿಸಲಿದೆ. ಈ ಪ್ರೈಮಾ ಟ್ರಕ್‍ಗಳನ್ನು ರೇಸಿಂಗ್‍ಗೆ ಫಿಟ್‍ಗೊಳಿಸಲು, ಬಿಟಿಆರ್‍ಎನ ಮಾರ್ಗಸೂಚಿಗಳ ಅನ್ವಯದ ಸುರಕ್ಷತೆ ಮತ್ತು ಕಾರ್ಯನಿರ್ವಹಣೆಗೆಯ ಅಗತ್ಯತೆಗಳನ್ನು ಪೂರೈಸಲು ಪ್ರಮುಖ ಮಾರ್ಪಾಡುಗಳನ್ನು ಮಾಡಲಾಗಿದೆ.

ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್ ಶಿಪ್ ಬಗ್ಗೆ

ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್ ಶಿಪ್ ಬಗ್ಗೆ

ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‍ಶಿಪ್ ಅನ್ನು ಎಂಎಂಎಸ್ಸಿ (ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್) ಆಯೋಜಿಸಿದೆ ಮತ್ತು ಇದು ಎಫ್‍ಐಎ (ಫೆಡರೇಶನ್ ಇಂಟರ್‍ನ್ಯಾಶನಲ್ ಇಡೆಲ್ ಆಟೊಮೊಬೈಲ್) ಮತ್ತು ಎಫ್‍ಎಂಎಸ್ಸಿಐ (ಫೆಡರೇಶನ್ ಆಫ್ ಮೋಟಾರ್ ಸ್ಪ್ರೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ) ಕ್ಯಾಲೆಂಡರ್‍ನಲ್ಲಿ ದಾಖಲಾಗಿದೆ. ಟಿ1 ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಲು ಅತ್ಯುತ್ತಮ ಬ್ರಿಟಿಷ್ ಮತ್ತು ಐರೋಪ್ಯ ರೇಸ್ ಟ್ರಕ್ ಚಾಲಕರನ್ನು ಆಯ್ಕೆ ಮಾಡುವಲ್ಲಿ ಪಾತ್ರವಹಿಸುವ ಸುರಕ್ಷತೆ ಮತ್ತು ಕಾರ್ಯನಿರ್ವಹಣೆ ಮಾನದಂಡಗಳನ್ನು ಬಿಟಿಆರ್‍ಎ(ಬ್ರಿಟಿಷ್ ಟ್ರಕ್ ರೇಸಿಂಗ್ ಅಸೋಸಿಯೇಶನ್) ನ ಮಾರ್ಗಸೂಚಿಗಳ ಪ್ರಕಾರ ಅನುಸರಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata Motors has announced the selection of 17 potential Indian truck drivers, who will compete in the final round of the T1 Racer Program (TRP), organised by the company. This will be the first time Indian drivers will participate in the race.
Please Wait while comments are loading...