ಟ್ರಕ್ ರೇಸರ್ ಗಳಿಗೆ ಟಾಟಾ ಮೋಟರ್ಸ್ ನಿಂದ ತರಬೇತಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 02: ಕಳೆದ ವರ್ಷ ಯಶಸ್ವಿಯಾಗಿ ಟ್ರಕ್ ರೇಸ್ ಅನ್ನು ಪೂರ್ಣಗೊಳಿಸಿದ್ದ ಟಾಟಾ ಮೋಟಾರ್ಸ್ ಇದೀಗ ಎರಡನೇ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್ ಶಿಪ್ ಅನ್ನು ಘೋಷಿಸಿದೆ. ಇದಕ್ಕೆ ಪೂರಕವಾಗಿ ಟ್ರಕ್ ಚಾಲಕರನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಟ್ರಕ್ ಡ್ರೈವರ್ ಆಯ್ಕೆ ಮತ್ತು ತರಬೇತಿಯನ್ನು ನೀಡಲಿದೆ.

ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ್ ಇಂಟರ್ ನ್ಯಾಷನಲ್ ಸಕ್ಯೂಟ್(ಬಿಐಸಿ)ಯಲ್ಲಿರುವ ಎಫ್1 ಕಾರ್ ರೇಸ್ ನ ಟ್ರ್ಯಾಕ್ ನಲ್ಲಿ ಈ ಚಾಲಕರಿಗೆ ತರಬೇತಿ ಇರಲಿದೆ.[ಪ್ರೈಮಾ ಟ್ರಕ್ ರೇಸಿಂಗ್ ಗೆ ಭಾರತದ ಚಾಲಕರು]

ಕಳೆದ ಬಾರಿ ನಡೆದ ಅತ್ಯಮೋಘ ಸಾಧನೆ ತೋರಿದ ಜಗತ್ ಸಿಂಗ್ ಮತ್ತು ನಾಗಾರ್ಜುನ ಅವರು ಯಶಸ್ಸಿನ ಕೇಂದ್ರಬಿಂದುವಾಗಿದ್ದರು. ದೇಶದ ಮೋಟಾರ್‍ಸ್ಪೋಟ್ಸ್ ಮ್ಯಾನೇಜ್‍ಮೆಂಟ್‍ನ ನುರಿತ ತರಬೇತುದಾರರಿಂದ ಮೂರು ತಿಂಗಳ ಕಾಲ ಕಠಿಣವಾದ ತರಬೇತಿಯನ್ನು ನೀಡಲಾಗಿತ್ತು. ಇದರ ಪರಿಣಾಮ ಈ ಹೀರೋಸ್ ಆಫ್ ದಿ ಹೈವೇಸ್ ಮೊಟ್ಟ ಮೊದಲ ಬಾರಿಗೆ ಭಾರತದ ಮೋಟಾರ್‍ಸ್ಪೋಟ್ರ್ಸ್ ಸ್ಪರ್ಧೆಯಲ್ಲಿ ಅತ್ಯಧಿಕ ಮೊತ್ತದ ಬಹುಮಾನವನ್ನು ಗೆದ್ದಿದ್ದರು.

ಇಬ್ಬರಿಗೂ ತಲಾ 10 ಲಕ್ಷ ರೂಪಾಯಿಗಳ ನಗದು ಬಹುಮಾನ ಲಭಿಸಿತ್ತು. ಟಿಆರ್ ಪಿ 2.0 2017 ರ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು 1000 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

ಉಪಾಧ್ಯಕ್ಷ ಆರ್.ಟಿ.ವಾಸನ್

ಉಪಾಧ್ಯಕ್ಷ ಆರ್.ಟಿ.ವಾಸನ್

ಟಾಟಾ ಮೋಟಾರ್ಸ್ ನ ವಾಣಿಜ್ಯ ವಾಹನಗಳ ವಿಭಾಗದ ಉಪಾಧ್ಯಕ್ಷ ಆರ್.ಟಿ.ವಾಸನ್ ಅವರು ಮಾತನಾಡಿ, 'ಭಾರತೀಯ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಸದಾ ಕಾಲ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಹಲವಾರು ನಾವಿನ್ಯತೆ, ವೈಶಿಷ್ಟ್ಯಗಳತ್ತ ಗಮನ ಹರಿಸುತ್ತಲೇ ಇರುತ್ತದೆ. ಇದಕ್ಕೆ ಪೂರಕವಾಗಿ ದೇಶದಲ್ಲಿ ಮೊದಲ ಬಾರಿಗೆ ಕಳೆದ ವರ್ಷ ಟ್ರಕ್ ಚಾಲಕರಿಗಾಗಿ ಟಿ1 ರೇಸರ್ ಕಾರ್ಯಕ್ರಮವನ್ನು ಆಯೋಜಿಸಿದ್ದೆವು.

ಟಿಆರ್ ಪಿ ಮಹತ್ವದ ಪಾತ್ರ ವಹಿಸುತ್ತಿದೆ

ಟಿಆರ್ ಪಿ ಮಹತ್ವದ ಪಾತ್ರ ವಹಿಸುತ್ತಿದೆ

ಟ್ರಕ್ ಚಾಲನೆಯೂ ಒಂದು ವೃತ್ತಿಪರ ಉದ್ಯೋಗ ಮತ್ತು ಟ್ರಕ್ ಚಾಲಕರಲ್ಲೂ ಒಂದು ಆಶಾಕಿರಣ ಮೂಡಲಿ ಎಂಬ ಉದ್ದೇಶದಿಂದ ಈ ಸ್ಪರ್ಧೆ ನಡೆಸಲಾಗುತ್ತಿದೆ. ಭಾರತೀಯ ಚಾಲಕರನ್ನು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಟಿಆರ್ ಪಿ ಮಹತ್ವದ ಪಾತ್ರ ವಹಿಸುತ್ತಿದೆ.

ಅದೇ ರೀತಿ ಕಳೆದ ಒಂದು ವರ್ಷದಲ್ಲಿ ಟಿಆರ್ ಪಿ 2.0ನಲ್ಲಿ ಎರಡು ಬಾರಿ ಪಾಲ್ಗೊಂಡಿದ್ದಾರೆ. ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್ ಶಿಪ್ 2017 ಗೆ ಸ್ಪರ್ಧಿಸಬಲ್ಲ ಉತ್ತಮ ಚಾಲಕರನ್ನು ಅಂತಿಮಗೊಳಿಸಲಿದ್ದೇವೆ ಎಂದರು.

ಚಾಲಕಸ್ನೇಹಿಯಾಗಿರುತ್ತವೆ.

ಚಾಲಕಸ್ನೇಹಿಯಾಗಿರುತ್ತವೆ.

ಇದುವರೆಗೆ ಟ್ರಕ್ ಚಾಲನೆಯಲ್ಲಿ ಯಾವುದೇ ಮಾನ್ಯತೆ ಸಿಗದ ಟ್ರಕ್ ಡ್ರೈವರ್‍ಗಳಿಗೆ ತರಬೇತಿ ನೀಡಲೆಂದೇ ವಿನೂತನ ಮತ್ತು ವೈಶಿಷ್ಟ್ಯಪೂರ್ಣವಾಗಿ ತರಬೇತಿ ರಚನೆಯನ್ನು ವಿನ್ಯಾಸಗೊಳಿಸಲಾಗಿದೆ. ಚಾಲನೆಯಲ್ಲಿ ಯಾವುದೇ ಶಿಕ್ಷಣ ಅಥವಾ ತರಬೇತಿ ಪಡೆಯದೇ ಅಥವಾ ಪ್ರೈಮಾದಲ್ಲಿ ಇದುವರೆಗೆ ಚಾಲನೆ ಮಾಡದೇ ಇರುವಂತಹ ಚಾಲಕರಿಗೆ ಈ ತರಬೇತಿ ಅತ್ಯಂತ ಮಹತ್ವದ್ದಾಗಿರುತ್ತದೆ. ತರಬೇತಿ ಅವಧಿಯಲ್ಲಿ ನೀಡಲಾಗುವ ಕೋರ್ಸ್ ನ ಪರಿಕರಗಳು ಚಾಲಕಸ್ನೇಹಿಯಾಗಿರುತ್ತವೆ. ಈ ಮೂಲಕ ಚಾಲಕರು ಅತ್ಯಂತ ಸರಳವಾಗಿ ಚಾಲನಾ ಚಾಕಚಕ್ಯತೆಯನ್ನು ಅರಿತುಕೊಳ್ಳಬಹುದಾಗಿದೆ.

ಪ್ರೈಮಾ-ರೇಸಿಂಗ್ ತರಬೇತಿ

ಪ್ರೈಮಾ-ರೇಸಿಂಗ್ ತರಬೇತಿ

1ನೇ ಹಂತ: ರೇಸಿನ ಬಗ್ಗೆ ಪ್ರಾಥಮಿಕ ಹಂತದ ವಿವರಣೆ ಮತ್ತು ಟ್ರ್ಯಾಕ್‍ನಲ್ಲಿ ಚಾಲನೆ ಮಾಡುವ ಕುರಿತಾದ ತರಬೇತಿ.

2ನೇ ಹಂತ: ಹೆಚ್ಚು ಪ್ರೈಮಾ-ರೇಸಿಂಗ್ ತರಬೇತಿ ಸೆಶನ್‍ಗಳಿರುತ್ತವೆ.

3ನೇ ಹಂತ: ದೈಹಿಕ ಮತ್ತು ಮಾನಸಿಕ ತರಬೇತಿ.

4ನೇ ಹಂತ: ಪ್ರೈಮಾ ರೇಸರ್ ಆಗಿ ರೋಡ್ ಡ್ರೈವರ್ ಅನ್ನು ಸಿದ್ಧಪಡಿಸುವುದು.

ಎಫ್‍ಐಎ ವಿಶ್ವ ಮೋಟಾರ್ ಸ್ಪೋರ್ಟ್ ನ ಆಡಳಿತ ಸಂಸ್ಥೆಯಾಗಿದೆ ಮತ್ತು ವಿಶ್ವದ ಅಗ್ರಗಣ್ಯ ಮೋಟಾರಿಂಗ್ ಸಂಸ್ಥೆಗಳ ಫೆಡರೇಶನ್ ಆಗಿದೆ. ವಿಶ್ವಾದ್ಯಂತ ಮೋಟಾರ್ ಸ್ಪೋರ್ಟ್ ಅಭಿವೃದ್ಧಿಪಡಿಸುವುದು ಎಫ್‍ಐಎನ ಪ್ರಮುಖ ಜವಾಬ್ದಾರಿಗಳಲ್ಲೊಂದಾಗಿದೆ.

ಟಾಟಾ ಪ್ರೈಮಾ

ಟಾಟಾ ಪ್ರೈಮಾ

ಟಾಟಾ ಪ್ರೈಮಾ 4038.ಎಸ್ ಭಾರಿ ಶಕ್ತಿಯಾದ 370 ಬಿಎಚ್‍ಪಿ @ 2100 ಆರ್ ಪಿಎಂ ಮತ್ತು 130 ಕಿಮೀ/ಗಂ.ಗಿಂತಲೂ ಹೆಚ್ಚಿನ ಟಾಪ್ ಸ್ಪೀಡ್‍ನೊಂದಿಗೆ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‍ಶಿಪ್ 2016ರಲ್ಲಿ ಸ್ಪರ್ಧಿಸಿತ್ತು. ಈ ಪ್ರೈಮಾ ಟ್ರಕ್‍ಗಳನ್ನು ರೇಸಿಂಗ್‍ಗೆ ಫಿಟ್‍ಗೊಳಿಸಲು, ಬಿಟಿಆರ್‍ಎನ ಮಾರ್ಗಸೂಚಿಗಳ ಅನ್ವಯದ ಸುರಕ್ಷತೆ ಮತ್ತು ಕಾರ್ಯನಿರ್ವಹಣೆಗೆಯ ಅಗತ್ಯತೆಗಳನ್ನು ಪೂರೈಸಲು ಪ್ರಮುಖ ಮಾರ್ಪಾಡುಗಳನ್ನು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tata Motors on Tuesday announced Season III of the T1 PRIMA TRUCK RACING CHAMPIONSHIP 2016, scheduled to be held on March 20, 2016, at India's globally renowned F1 race track - the Buddh International Circuit (BIC), Greater Noida.
Please Wait while comments are loading...