ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಲಂಡನ್ನಿನಲ್ಲಿ ಕ್ರಿಕೆಟರ್ ಗೆ ಭೂತ ಪ್ರೇತ ಕಾಟ!

By Mahesh
Taps turned on themselves in 'haunted' London hotel room: Stuart Broad
ಲಂಡನ್, ಜು.21: ಇಲ್ಲಿನ ಪಂಚತಾರಾ ಹೊಟೇಲ್‌ವೊಂದರಲ್ಲಿ ಪ್ರೇತ ಬಾಧೆ ಕಾಣಿಸಿಕೊಂಡ ಕಾರಣ ಕ್ರಿಕೆಟರ್ ರೊಬ್ಬರು ರೂಮು ಬದಲಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರೇತ ಕಾಟಕ್ಕೆ ಹೆದರಿ ಇಂಗ್ಲೆಂಡಿನ ಆಟಗಾರರು ರೂಮ್ ಬದಲಾಯಿಸಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೊಟೇಲ್ ರೂಮ್‌ವೊಂದರಲ್ಲಿ ರಾತ್ರಿ ವೇಳೆ ಪ್ರೇತಬಾಧೆಯಿದೆ ಎಂದು ಹಲವು ಬಾರಿ ದೂರುಗಳ ಬಂದ ನಂತರ ಇಂಗ್ಲೆಂಡ್ ಆಟಗಾರರ ಪತ್ನಿಯಂದಿರು ಹಾಗೂ ಗೆಳೆತಿಯರು ಹೊಟೇಲ್ ರೂಮ್‌ನಲ್ಲಿ ತಂಗಲು ನಿರಾಕರಿಸಿದ್ದರು ಎಂದು 'ಡೈಲಿ ಮೈಲ್' ತನ್ನ ರವಿವಾರದ ಸಂಚಿಕೆಯಲ್ಲಿ ಸುದ್ದಿ ವರದಿ ಮಾಡಿದೆ. [ದೆವ್ವದ ಕತೆಗಳು ಎ೦ದರೇ ಸಾಕು ಕಿವಿ ನೆಟ್ಟಗೆ!]

'ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯ ವೇಳೆ ನಾನು ರೂಮ್ ಬದಲಾಯಿಸಿದ್ದೆ. ನಾನು ತಂಗಿದ್ದ ರೂಮ್‌ನಲ್ಲಿ ವಿಪರೀತ ಸೆಖೆಯಿತ್ತು. ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ. ಇದ್ದಕ್ಕಿದ್ದಂತೆ ಬಾತ್‌ರೂಮ್‌ನ ನಲ್ಲಿ ಆನ್ ಆಗುತ್ತಿತ್ತು. ನಾನು ಲೈಟ್ ಹಾಕಿದಾಗ ನಲ್ಲಿ ಆಫ್ ಆಗುತ್ತಿತ್ತು.

ನಾನು ಲೈಟ್ ಆಫ್ ಮಾಡಿದಾಗ ನಲ್ಲಿ ಆನ್ ಆಗುತ್ತಿತ್ತು. ಒಮ್ಮೆ ಮಧ್ಯರಾತ್ರಿ ನನಗೆ ಎಚ್ಚರವಾದಾಗ ರೂಮ್‌ನಲ್ಲಿ ಯಾರೋ ಮಲಗಿದ್ದಂತೆ ಕಂಡುಬಂದಿತ್ತು. ಇದರಿಂದ ಹೆದರಿದ್ದ ನಾನು ರೂಮ್ ಬದಲಾಯಿಸಿದ್ದೆ. ಇದೀಗ ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ' ಎಂದು ಇಂಗ್ಲೆಂಡ್ ನ ಪ್ರಮುಖ ವೇಗಿ ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ.[ನ್ಯೂಜಿಲೆಂಡ್ ನಲ್ಲಿ ಪಾಕಿಸ್ತಾನ ಕ್ರಿಕೆಟರ್ ಗೆ 'ಭೂತ ಕಾಟ']

ಈ ಘಟನೆ ನಂತರ ನಿಜಕ್ಕೂ ನನಗೆ ನಿಜಕ್ಕೂ ತುಂಬಾ ಭಯ ಉಂಟಾಯಿತು. ನನ್ನ ಗೆಳತಿ ಬೀಲಿ ಕೂಡಾ ರೂಮ್ ಬದಲಾಯಿಸಿಕೊಳ್ಳೋಣ ಎಂದಳು. ಅದರಂತೆ, ಮೊಯೀನ್ ಅಲಿ ಹಾಗೂ ತಂಡದ ಇನ್ನೂ ಅನೇಕ ಸದಸ್ಯರಿಗೂ ಇದೇ ಅನುಭವವಾಗಿರುವುದು ತಿಳಿದು ಬಂದಿತು ಎಂದು ಸ್ಟುವರ್ಟ್ ಹೇಳಿಕೊಂಡಿದ್ದಾರೆ.

ಬೆನ್ ಸ್ಟೋಕ್ಸ್ ಇನ್ನಿತರರು ಹೋಟೆಲ್ ನ ಮೂರನೇ ಮಹಡಿಯಲ್ಲಿರುವ ರೂಮಿನಲ್ಲಿದ್ದರು.ಎಲ್ಲರಿಗೂ ಒಂದಲ್ಲ ಒಂದು ರೀತಿ ಅನುಭವವಾಗಿದೆ. ಲಂಡನ್ನಿನ ಲ್ಯಾಂಗ್ ಹಾಮ್ ಹೋಟೆಲ್ 1865ರಲ್ಲಿ ನಿರ್ಮಾಣಗೊಂಡಿದ್ದು, ವಿಶ್ವದ ಪ್ರಮುಖ ಹೋಟೆಲ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಮಾರ್ಕ್ ಟ್ವೇನ್, ಆಸ್ಕರ್ ವೈಲ್ಡ್, ಆರ್ಥ ಕಾನನ್ ಡಾಯ್ಲ್ ಮುಂತಾದ ಲೇಖಕರು ಈ ಹೋಟೆಲ್ ನ ಪ್ರೇತ ಕಾಟದ ಬಗ್ಗೆ ಪುಟಗಟ್ಟಲೇ ಬರೆದಿದ್ದಾರೆ.[ಭೂತ ಚಿತ್ರ ವಿಡಿಯೋ ಬಹಿರಂಗ!]

ಹೋಟೆಲ್ ನ 333ನೇ ಸಂಖ್ಯೆಯ ರೂಮ್ ಅತ್ಯಂತ ತೊಂದರೆಗೊಳಲ್ಪಟ್ಟ ರೂಮ್ ಎನಿಸಿದೆ. 1973ರಲ್ಲಿ ಬಿಬಿಸಿ ರೇಡಿಯೋ ಉದ್ಘೋಷಕ ಜೇಮ್ಸ್ ಅಲೆಕ್ಸಾಂಡರ್ ಗಾರ್ಡನ್ ಅವರು ಈ ರೂಮಿನಲ್ಲಿ ತಂಗಿದ್ದರು. ರಾತ್ರಿ ಒಂದು ಹೊತ್ತಿನಲ್ಲಿ ಎದುರಿಗೆ ಬೆಳಕಿನ ಉಂಡೆಯಂಥ ಚೆಂಡು ಕಾಣಿಸಿಕೊಂಡಿತು ನಂತರ ಅದರಿಂದ ಪುರುಷನೊಬ್ಬ ಹೊರ ಬಂದ, ಆತನ ಎರಡು ಕಾಲುಗಳು ಕತ್ತರಿಸಲ್ಪಟ್ಟಿತ್ತು, ತೆವಳುತ್ತಾ ತೆವಳುತ್ತಾ(ಈವಿಲ್ ಡೆಡ್ ಚಿತ್ರ ನೆನಪಿಸಿಕೊಳ್ಳಿ) ಬೆಡ್ ನ ಹತ್ತಿರ ಬರುತ್ತಿದ್ದಂತೆ ಜೇಮ್ಸ್ ಅಲ್ಲಿಂದ ಓಟಕಿತ್ತ ಎಂಬ ಕಟ್ಟುಕಥೆಗಳು ಲಂಡನ್ನಿನ ಈ ಬೀದಿಯಲ್ಲಿ ಕೇಳ ಸಿಗುತ್ತದೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X