ಪವರ್‌ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಸುಪ್ರೀತಾಗೆ ಚಿನ್ನದ ಮೇಲೆ ಗುರಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 13 : ಮಂಗಳೂರಿನ ಸುಪ್ರೀತಾ ಪೂಜಾರಿ ಅವರು 'ಏಷ್ಯನ್ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್ 2016' ರಲ್ಲಿ ಕಂಚಿನ ಪದಕ ಪಡೆದಿದ್ದಾರೆ. ವರ್ಲ್ಡ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಡುವುದು ಅವರ ಕನಸು.

'2011ರಲ್ಲಿ ಪವರ್‌ ಲಿಫ್ಟಿಂಗ್ ವಿಭಾಗದಲ್ಲಿ ಕಾಮನ್‌ ವೆಲ್ತ್‌ನಲ್ಲಿ ಚಿನ್ನ ಗೆಲ್ಲಬೇಕೆಂಬ ಕನಸನ್ನು ಈಡೇರಿಸಿಕೊಂಡೆ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಗೆಲ್ಲಬೇಕೆಂಬುದು ಗುರಿ ಇತ್ತು. ಆದರೆ, ಕಂಚಿಗೆ ತೃಪ್ತಿ ಪಡೆಯಬೇಕಾಯಿತು. ಆದರೆ, ನಾಲ್ಕು ವರ್ಷದ ಬಳಿಕ ಇದೆ ಟೂರ್ನಿಯಲ್ಲಿ ಸ್ವರ್ಣ ಗೆಲ್ಲುವೆ' ಎನ್ನುತ್ತಾರೆ ಸುಪ್ರೀತಾ ಪೂಜಾರಿ. [ಒಲಿಂಪಿಕ್ಸ್ ಗೆ ಪೇಸ್, ಬೋಪಣ್ಣ ಜೋಡಿ ಆಟ]

supreetha poojary

1ರಿಂದ 7ನೇ ತರಗತಿ ವರೆಗೆ ಮುಲ್ಲಕಾಡುವಿನಲ್ಲಿ ಓದಿದ ಇವರು, 8 ರಿಂದ ಡಿಗ್ರಿಯವರೆಗೆ ಬೆಸೆಂಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಾಲ್ಯದಿಂದಲೇ ಕಬಡ್ಡಿ, ಶಾಟ್ ಪುಟ್, ಹಾಕಿ, ವೇಟ್ ಲಿಫ್ಟಿಂಗ್ ನಲ್ಲಿ ಸುಪ್ರೀತಾ ಅವರಿಗೆ ಅಪಾರವಾದ ಆಸಕ್ತಿ ಇತ್ತು. ಬೆಸೆಂಟ್ ಹೈಸ್ಕೂಲ್‌ನ ದೈಹಿಕ ಶಿಕ್ಷಕ ಹರೀಶ್ ರವರ ಸೂಚನೆಯಂತೆ ಬಳಿಕ ವೇಟ್ ಲಿಫ್ಟಿಂಗ್‌ಗೆ ಹೆಚ್ಚು ಗಮನಕೊಟ್ಟು ಸಾಧನೆ ಮಾಡಿದ್ದಾರೆ. [ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಟೆನಿಸ್ ತಾರೆ ಬೋಪಣ್ಣ]

ಉದಯಪುರದಲ್ಲಿ ಜೂನ್ 7ರಿಂದ 12ರ ತನಕ ನಡೆದ 'ಏಷ್ಯನ್ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್ 2016'ರಲ್ಲಿ ಕಂಚಿನ ಪದಕ ಗೆದ್ದಿರುವ ಸುಪ್ರೀತಾ ಪೂಜಾರಿ ಅವರು, ಭಾರತೀಯ ಪವರ್‌ ಲಿಫ್ಟಿಂಗ್ ತಂಡದ ನಾಯಕಿಯಾಗಿ ಸಮಗ್ರ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಂತಸ ವ್ಯಕ್ತಪಡಿಸಿದ ಕಾಲೇಜು : ಬೆಸೆಂಟ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಸುಪ್ರೀತಾ ಅವರ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕಾರ್ಮೆಲಿಟಾ ಗೋವಿಯಸ್ ಅವರು ಶ್ಲಾಘಿಷಿಸಿದ್ದಾರೆ. 'ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿ ನಮ್ಮ ಕಾಲೇಜಿನವರು ಎನ್ನಲು ತುಂಬಾ ಸಂತೋಷ ಮತ್ತು ಹೆಮ್ಮೆಯಾಗುತ್ತದೆ' ಎಂದು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru based Supreetha Poojary bagged bronze medal in Asian Powerlifting Championships 2016 held at Udaipur, India.
Please Wait while comments are loading...