ಬಹುಮಾನ, ಬಡ್ತಿ ನಿರೀಕ್ಷೆಯಲ್ಲಿ ಸಾಕ್ಷಿ ಮಲಿಕ್ ಕೋಚ್!

Written By: Ramesh
Subscribe to Oneindia Kannada

ನವದೆಹಲಿ, ಸೆ.26 : ರಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಮೊದಲ ಪದಕ ಸಾಧನೆ ಮಾಡಿದ್ದ ಕುಸ್ತಿ ಪಟು ಸಾಕ್ಷಿ ಮಲಿಕ್ ಈಗ ಸ್ಟಾರ್. ಅವರಿಗೆ ಸಾಕಷ್ಟು ನಗದು ಬಹುಮಾನ ಇತರೆ ಉಡುಗೊರೆಗಳು ಅವರಿಗೆ ಸಿಕ್ಕಿವೆ. [ಕಡೆಗೂ ಭಾರತ ಒಂದು ಪದಕ ಗೆದ್ದುಕೊಂಡಿದೆ, ಹುರ್ರೆ!]

ಆದರೆ, ಸಾಕ್ಷಿ ಪದಕ ಗೆಲ್ಲಲು ಶ್ರಮವಹಿಸಿದ್ದ ಭಾರತ ಮಹಿಳಾ ಫ್ರೀ ಸ್ಟೈಲ್ ರೆಸ್ಲಿಂಗ್ ಕೋಚ್ ಕುಲ್​ದೀಪ್ ಮಲಿಕ್ ಮಾತ್ರ ಇನ್ನೂ ಬಹುಮಾನ, ಬಡ್ತಿಯ ನಿರೀಕ್ಷೆಯಲ್ಲಿದ್ದಾರೆ. ರಿಯೋ ಗೇಮ್ಸ್​ನಲ್ಲಿ ಸಾಕ್ಷಿ ಜತೆ ವಾಪಸಾದ ಬಳಿಕ, ಹರಿಯಾಣ ಸರ್ಕಾರ 10 ಲಕ್ಷ ರೂ. ಚೆಕ್​ನ ಫೋಟೋಕಾಪಿ ನೀಡಿ ಸನ್ಮಾನಿಸಿತ್ತು. ಆದರೆ ಒಂದು ತಿಂಗಳು ಕಳೆದರೂ ಕೋಚ್​ ಕುಲ್​ದೀಪ್ ಅವರಿಗೆ ಅಸಲಿ ಚೆಕ್ ಇನ್ನೂ ಕೈಸೇರಿಲ್ಲ. [ಕುಸ್ತಿ: ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

Kuldeep Malik

ಸಾಕ್ಷಿಗೆ ಖೇಲ್​ರತ್ನ ಪುರಸ್ಕಾರ ಪ್ರಕಟವಾದ ವೇಳೆ ಕುಲ್​ದೀಪ್ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿರುವುದು ಬಹಿರಂಗವಾಗಿತ್ತು. ಅಂದು ರೈಲ್ವೆ ಸಚಿವ ಸುರೇಶ್ ಪ್ರಭು ಇಲಾಖೆಯಲ್ಲಿ ಕುಲ್ ದೀಪ್ ಅವರಿಗೆ ಬಡ್ತಿ ನೀಡುವ ಆಶ್ವಾಸನೆ ನೀಡಿದ್ದರು.

ಆದರೆ ಇದರುವರೆಗೂ ಕುಲ್ ದೀಪ್ ಅವರಿಗೆ ಯಾವುದೇ ಬಡ್ತಿಯು ಸಿಕ್ಕಿಲ್ಲ. ಸಚಿವರು ನೀಡಿದ್ದ ಆಶ್ವಾಸನೆ ಆಶ್ವಾಸನೆಯಾಗಿಯೇ ಉಳಿದಿದೆ. ಹುಮ್ಮಸ್ಸಿನಲ್ಲಿ ಘೋಷಿಸಿದ್ದ ಬಹುಮಾನಗಳು, ಬಡ್ತಿಯ ಸುದ್ದಿಯಾಗಲಿ ಇನ್ನೂ ಕುಲ್​ದೀಪ್ ಮಲಿಕ್​ಅವರಿಗೆ ತಲುಪಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio Olympics' bronze-winning wrestler Sakshi Malik's coach, Kuldeep Malik might have played a big role in Sakshi Malik’s success at the Rio Olympics but he is yet to get any cash awards or recognition.
Please Wait while comments are loading...