ಹವ್ಯಕರಿಗೆ ಸ್ಫೂರ್ತಿ ತುಂಬಿದ ಬಾಡ್ಮಿಂಟನ್ ಟೂರ್ನಿ

By: ಕ್ರೀಡಾ ಡೆಸ್ಕ್
Subscribe to Oneindia Kannada

ಬೆಂಗಳೂರು, ಆಗಸ್ಟ್ 01: ಹವ್ಯಕ ಬ್ಯಾಡ್ಮಿಂಟನ್ ಅಸೋಸಿಯೋಷನ್ ಆಶ್ರಯದಲ್ಲಿ ದಿನಗಳ ಕಾಲ ನಡೆದ "ಹಾಟ್ ಶಾಟ್ಸ್ - 2017" ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಕ್ರೀಡಾಪ್ರೇಮಿಗಳಿಗೆ ಸ್ಫೂರ್ತಿ ನೀಡಿತು.

ಬೆಂಗಳೂರಿನ ಸಹಕಾರ ನಗರ ಬಾಟಲ್ ನೆಟ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ 300 ಕ್ಕೂ ಅಧಿಕ ಜನ ಹವ್ಯಕ ಆಟಗಾರರು ಭಾಗವಹಿಸಿದ್ದರು.

State Level Havyaka Badminton Tournament Sahakara nagar

ಜುಲೈ 29 ರಂದು ರಾಮಚಂದ್ರ ಹಳ್ಲೆರೆ ಅವರಿಂದ ಉದ್ಘಾಟನೆಗೊಂಡು, ಜುಲೈ 30ರ ಸಂಜೆ ಸಮಾರೋಪಗೊಂಡಿತು. ಸಮಾರೋಪ ಸಮಾರಂಭಕ್ಕೆ ಅತಿಥಿಗಳಾಗಿ ಖ್ಯಾತ ಕಿರುತೆರೆ ಕಲಾವಿದೆ ಶ್ರೀಮತಿ ಲಕ್ಷೀ ಹೆಗಡೆ ಅವರು ಮಾತಾಡಿ, 'ಹವ್ಯಕರ ಸಾದನೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು ಹಾಗೆ ಇನ್ನೋರ್ವ ಅತಿಥಿಗಳಾಗಿ ಖ್ಯಾತ ಸಾಹಿತಿ ಗಿರಿಮನೆ ಶ್ಯಮರಾವ್ ಅವರು ಹವ್ಯಕ ಪ್ರತಿಭೆಗಳ ಸಾಧನೆಯನ್ನು ಕೊಂಡಾಡಿದರು.

100ಕ್ಕೂ ಅಧಿಕ ಪಂದ್ಯಗಳು ಬೇರೆ ಬೇರೆ ವಿಭಾಗಳಲ್ಲಿ ನಡೆದು 25ಕ್ಕೂ ಅಧಿಕ ಬಹುಮಾನಗಳು ನೀಡಲ್ಪಟ್ಟವು. ಸಾವಿರಾರು ಕ್ರೀಡಾ ಫ್ರೇಮಿಗಳು ಅದಕ್ಕೆ ಸಾಕ್ಷಿಯಾಗಿ ಕಾರ್ಯಕ್ರಮವನ್ನು ಚಂದಗೊಳಿಸಿದರು.

Australian Open Saina ,Sindhu, Srikanth, Praneeth Qualify for the Next Round

ಪಂದ್ಯಾವಳಿಯ ಸಂಪೂರ್ಣ ಪ್ರಾಯೋಜಕತ್ಪವನ್ನು ಹಾಗೂ ನಿರ್ದೇಶನವನ್ನು ಜಗದೀಶ್ ಹೊಸಬಾಳೆ ಹಾಗೂ ಕಮಲಾಕರ ಕೆ.ಎಸ್. ವಹಿಸಿದ್ದರು. ಕಮಾಲಕರ್ ಕೆ.ಎಸ್. ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರೆ, ಜಗದೀಶ ಹೊಸಬಾಳೆ ಕಾರ್ಯಕರ್ತರನ್ನು ಅಭಿನಂದಿಸಿ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು. ವಿನಾಯಕ ಹೆಗಡೆ ವಜಗದ್ದೆ ಕಾರ್ಯಕ್ರಮ ನಿರ್ವಹಿಸಿದ್ದರು. ಒಟ್ಟಾರೆ ಮೂರನೇ ವರ್ಷದ ಈ ಪಂದ್ಯವಳಿ ಹವ್ಯಕರ ಮನಗೆದ್ದು, ಮೆಚ್ಚುಗೆಗೆ ಪಾತ್ರವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Level Havyaka Badminton Tournament held successfully at Sahakara Nagar, Bengaluru. More than 300 sports persons attended the event
Please Wait while comments are loading...