ಆಸ್ಟ್ರೇಲಿಯನ್ ಓಪನ್ ನಲ್ಲಿ ಸ್ಟಾರ್ ಆಟಗಾರರ ಸೆಣಸು

Posted By:
Subscribe to Oneindia Kannada

ವರ್ಷದ ಮೊಟ್ಟ ಮೊದಲ ಗ್ರ್ಯಾಂಡ್ ಸ್ಲಾಂ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿ ಆರಂಭವಾಗಿ ಕೆಲವು ದಿನಗಳು ಕಳೆದಿವೆ. ಅಷ್ಟರಲ್ಲಿ ಕೆಲವಾರು ಅಚ್ಚರಿಯ ಫಲಿತಾಂಶಗಳೂ ಸಿಕ್ಕಿವೆ.

ಹಾಲಿ ಚಾಂಪಿಯನ್ ಆದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು, ಟೂರ್ನಿಯ ಆರಂಭಿಕ ಸುತ್ತುಗಳಿಂದಲೇ ಸೋತು ನಿರ್ಗಮಿಸಿದ್ದಾರೆ. ಇತ್ತೀಚೆಗಷ್ಟೇ ವಿಶ್ವದ ನಂಬರ್ ಒನ್ ಸ್ಥಾನದಿಂದ ಕೆಳಗಿಳಿದಿದ್ದ ಅವರ ವೃತ್ತಿಜೀವನಕ್ಕೆ ಇದೊಂದು ಹೊಸ ಪೆಟ್ಟು.

ಇನ್ನು, ಈವರೆಗಿನ ತಮ್ಮ ವೃತ್ತಿಜೀವನದಲ್ಲಿ 22 ಗ್ರ್ಯಾಂಡ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಸ್ವಿಜರ್ಲೆಂಡ್ ನ ಟೆನಿಸ್ ತಾರೆ ಮಾರ್ಟಿನಾ ಹಿಂಗಿಸ್ (23 ಪ್ರಶಸ್ತಿ) ಅವರ ದಾಖಲೆ ಮುರಿಯುವ ಹೊಸ್ತಿಲಲ್ಲಿರುವ ಅಮೆರಿಕದ ಮಾಜಿ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಗೂ ಈ ಟೂರ್ನಿ ಮಹತ್ವದ್ದು.

ಶುಕ್ರವಾರ ತಡರಾತ್ರಿ ನಡೆದ ಈ ಟೂರ್ನಿಯ ಕೆಲವಾರು ಪಂದ್ಯಗಳಲ್ಲಿ ಸೆಣಸಿದ ಕೆಲವಾರು ಸ್ಟಾರ್ ಆಟಗಾರ್ತಿಯ ಫೋಟೋಗಳು ಇಲ್ಲಿವೆ.

ಕರೊಲಿನಾ ಬಾರ್ಬಡಾ ಸೊಗಸು

ಕರೊಲಿನಾ ಬಾರ್ಬಡಾ ಸೊಗಸು

ಜೆಕ್ ಗಣರಾಜ್ಯದ ಸ್ಟ್ರೈಕೋವಾ ವಿರುದ್ಧ ಮಹಿಳೆಯರ ಸಿಂಗಲ್ಸ್ ವಿಭಾಗದ 3ನೇ ಸುತ್ತಿನ ಪಂದ್ಯದಲ್ಲಿ ಸೆಣಸಿದ ಫ್ರಾನ್ಸ್ ನ ಕರೊಲಿನಾ ಗಾರ್ಸಿಯಾ ಬಾರ್ಬಡಾ ಅವರ ಕ್ಲೋಸಪ್ ಚಿತ್ರವಿದು. ಈ ಪಂದ್ಯದಲ್ಲಿ ಸ್ಟ್ರೈಕೋವಾ ಜಯ ಸಾಧಿಸಿದ್ದಾರೆ.

ಸೆರೆನಾ ವಿಲಿಯಮ್ಸ್ ಗಮನ

ಸೆರೆನಾ ವಿಲಿಯಮ್ಸ್ ಗಮನ

ವಿಶ್ವ ದಾಖಲೆಯ ಹೊಸ್ತಿಲಲ್ಲಿರುವ ಅಮೆರಿಕದ ಸೆರೆನಾ ವಿಲಿಯಮ್ಸ್, ತಮ್ಮ ಮೂರನೇ ಸುತ್ತಿನ ಪಂದ್ಯದಲ್ಲಿ ತಮ್ಮ ದೇಶದವರೇ ಆದ ನಿಕೋಲ್ ಗಿಬ್ಸ್ ವಿರುದ್ಧ ಸೆಣಸಿದ್ದು ಹೀಗೆ. ಈ ಪಂದ್ಯದಲ್ಲಿ ಗೆಲುವು ಸೆರೆನಾ ಪಾಲಾಗಿದೆ.

ಎಕಟೆರಿಯಾ ಸೆಣಸಿನ ಸೊಗಸು

ಎಕಟೆರಿಯಾ ಸೆಣಸಿನ ಸೊಗಸು

ರಷ್ಯಾದ ಟೆನಿಸ್ ಸುಂದರಿ, ಎಕಟೆರಿಯಾ ಮಕರೋವಾ ಅವರು, ಸ್ಲೊವಾಕಿಯಾದ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ ಸೆಣಸುವಾಗ ಕ್ಯಾಮೆರಾ ಕಣ್ಣಿಗೆ ಹೀಗೆ ಕಂಡರು. ಇಲ್ಲಿ ಎಕಟೆರಿಯಾ ಜಯ ಗಳಿಸಿದ್ದಾರೆ.

ಅಲೆಕ್ಸಾಂಡರ್ ಮಣಿಸಿದ ಸ್ಪೇನಿಗ

ಅಲೆಕ್ಸಾಂಡರ್ ಮಣಿಸಿದ ಸ್ಪೇನಿಗ

ಮಾಜಿ ನಂಬರ್ ಒನ್ ಆಟಗಾರ ಸ್ಪೇನ್ ನ ರಾಫೆಲ್ ನಡಾಲ್ ಅವರು, ತಮ್ಮ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಗೆ ಚೆಂಡನ್ನು ಹಿಂದಕ್ಕೆ ಕಳುಹಿಸಿದ್ದು ಹೀಗೆ. ಈ ಪಂದ್ಯದಲ್ಲಿ ನಡಾಲ್ ಗೆದ್ದರು.

ಪಾಬ್ಲೊ ವಿರುದ್ಧ ಜಯ

ಪಾಬ್ಲೊ ವಿರುದ್ಧ ಜಯ

ತಮ್ಮ ಎದುರಾಳಿ ಸ್ಪೇನ್ ನ ಪಾಬ್ಲೊ ಕ್ಯಾರೆನೊ ವಿರುದ್ಧದ ಸೆಣಸಾಟದಲ್ಲಿ ಚೆಂಡಿನ ಮೇಲೆ ನಿಗಾ ಇಟ್ಟಿರುವ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೋಮಿನ್. ಇಲ್ಲಿ ಗೆದ್ದ ಇಸ್ಟೋಮಿನ್ ನಾಲ್ಕನೇ ಸುತ್ತಿಗೆ ಪದಾರ್ಪಣೆ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As Australian Open tennis tournament advances interesting results are coming out from Melbourne turfs. Is it very keen to see the Serena Williams who is at the point to grab the world record of most grand slam wins from Swiss legend Martina Hingis.
Please Wait while comments are loading...