ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪಡೆದ ಕ್ರೀಡಾಳುಗಳಿವರು

Posted By:
Subscribe to Oneindia Kannada

ನವದೆಹಲಿ, ಜನವರಿ 25: ಕರ್ನಾಟಕದ ಅಂಧ ಕ್ರಿಕೆಟಿಗ ಶೇಖರ್ ನಾಯಕ್, ಡಿಸ್ಕಸ್ ತ್ರೋ ಕ್ರೀಡಾಳು ವಿಕಾಸ್ ಗೌಡ, ಭಾರತೀಯ ಕ್ರಿಕೆಟ್ ರಂಗದ ತಾರೆಗಳಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು, ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲೇಲ ಗೋಪಿಚಂದ್ ಸೇರಿದಂತೆ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದ ಏಳು ಕ್ರೀಡಾಳುಗಳು ಈ ಬಾರಿಯ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಲಭಿಸಿದೆ.[2017ನೇ ಸಾಲಿನ ಪದ್ಮ ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ]

ಪುಲ್ಲೇಲ ಗೋಪಿಚಂದ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದ್ದರೆ, ಧೋನಿ , ಪಿ.ವಿ. ಸಿಂಧು ಅವರಿಗೆ ಪದ್ಮಭೂಷಣ, ವಿರಾಟ್ ಕೊಹ್ಲಿ, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ (ಜಿಮ್ನಾಸ್ಟಿಕ್ಸ್), ವಿಕಾಸ್ ಗೌಡ, ಮರಿಯಪ್ಪನ್ ತಂಗವೇಲು (ಪ್ಯಾರಾಲಿಂಪಿಕ್ಸ್ ಹೈಜಂಪರ್), ದೀಪಾ ಮಲಿಕ್ (ಪ್ಯಾರಾಲಿಂಪಿಕ್ಸ್), ಪಿ.ಆರ್. ಶ್ರೀಜೇಶ್ (ಫೀಲ್ಡ್ ಹಾಕಿ), ಶೇಖರ್ ನಾಯಕ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಯಾರ್ಯಾರ ಸಾಧನೆ ಏನೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿ ನಿಮಗಾಗಿ....

ವಿಶ್ವಮಟ್ಟದ ಸಾಧನೆ ಮಾಡಿದ ಪ್ರತಿಭೆ

ವಿಶ್ವಮಟ್ಟದ ಸಾಧನೆ ಮಾಡಿದ ಪ್ರತಿಭೆ

ಶೇಖರ್ ನಾಯಕ್ ಭಾರತೀಯ ಅಂಧ ಕ್ರಿಕೆಟ್ ನ ಸಾಧಕ. ಭಾರತ ಅಂಧರ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿರುವ ಅವರ ದಕ್ಷ ನಾಯಕತ್ವದಲ್ಲಿ ಭಾರತ ಈ ಹಿಂದೆ ಎರಡು ವಿಶ್ವಕಪ್ ಗಳನ್ನು ಗೆದ್ದುತಂದಿದೆ.

ವಿಶ್ವ ಮಟ್ಟಕ್ಕೆ ಬೆಳೆದ ಬೆಂಗಳೂರಿಗ

ವಿಶ್ವ ಮಟ್ಟಕ್ಕೆ ಬೆಳೆದ ಬೆಂಗಳೂರಿಗ

ಮೂಲತಃ ಬೆಂಗಳೂರಿನವರಾದರೂ ದೂರದ ಅಮೆರಿಕದಲ್ಲಿ ಕ್ರೀಡಾ ಬದುಕು ಕಟ್ಟಿಕೊಂಡ ಡಿಸ್ಕಸ್ ತ್ರೋವರ್ ವಿಕಾಸ್ ಗೌಡ, ರಾಜ್ಯ ಕಂಡ ಹೆಮ್ಮೆಯ ಕ್ರೀಡಾಳು.

ಭಾರತೀಯ ಕ್ರಿಕೆಟ್ ಕಂಡ ಯಶಸ್ವೀ ನಾಯಕ

ಭಾರತೀಯ ಕ್ರಿಕೆಟ್ ಕಂಡ ಯಶಸ್ವೀ ನಾಯಕ

ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ, ಟೆಸ್ಟ್, ಏಕದಿನ ಹಾಗೂ ಟಿ20 - ಈ ಮೂರೂ ಮಾದರಿಗಳಲ್ಲಿ ತಂಡವನ್ನು ವಿಶ್ವದ ನಂಬರ್ ಒನ್ ಸ್ಥಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಅವರ ನಾಯಕತ್ವದಲ್ಲಿ ಏಕದಿನ ಹಾಗೂ ಟಿ20 ವಿಶ್ವಕಪ್ ಗಳನ್ನೂ ಭಾರತ ಗೆದ್ದಿತ್ತು.

ಆಕ್ರಮಣಕಾರಿ ಆಟಗಾರನ ಸಾಧನೆ

ಆಕ್ರಮಣಕಾರಿ ಆಟಗಾರನ ಸಾಧನೆ

ಇನ್ನು, ಭಾರತೀಯ ಕ್ರಿಕೆಟ್ ತಂಡಕ್ಕೆ ನೂತನವಾಗಿ ಸಾರಥ್ಯ ವಹಿಸಿಕೊಂಡಿರುವ ವಿರಾಟ್ ಕೊಹ್ಲಿ, ತಂಡವು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂಬರ್ ಒನ್ ಟೆಸ್ಟ್ ತಂಡವಾಗಿ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಅದ್ಭುತ ಬ್ಯಾಟಿಂಗ್ ಪ್ರತಿಭೆಯಿಂದ ಹಲವಾರು ದಾಖಲೆಗಳನ್ನು ಮೆಟ್ಟಿ ನಿಂತಿರುವ ಇವರು ವಿಶ್ವದ ಪ್ರಮುಖ ಕ್ರಿಕೆಟಿಗರಲ್ಲೊಬ್ಬರು.

ಕಠಿಣ ಪರಿಶ್ರಮದಿಂದಲೇ ಬೆಳೆದ ಪ್ರತಿಭೆ

ಕಠಿಣ ಪರಿಶ್ರಮದಿಂದಲೇ ಬೆಳೆದ ಪ್ರತಿಭೆ

ಸಿಂಧು ಅವರು, ಕಳೆದ ವರ್ಷ ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು. ಒಲಿಂಪಿಕ್ಸ್ ನಲ್ಲಿ ಈ ಸಾಧನೆ ಮಾಡಿದ ಮೊಟ್ಟ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಭಾರತೀಯ ಬ್ಯಾಡ್ಮಿಂಟನ್ ರಂಗದ ಗುರು

ಭಾರತೀಯ ಬ್ಯಾಡ್ಮಿಂಟನ್ ರಂಗದ ಗುರು

ಸಿಂಧು ಅವರ ಸಾಧನೆಯ ಹಿಂದೆ ಪುಲ್ಲೇಲ ಗೋಪಿಚಂದ್ ಅವರ ಪರಿಶ್ರಮವೂ ಇದೆ. ಈ ಹಿಂದೆ, ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು, ಆ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂದೆನಿಸಿದ್ದರು. ಅವರನ್ನೂ ಹುರಿಗೊಳಿಸಿದ್ದು ಇದೇ ಗೋಪಿಚಂದ್.

ವಿಭಿನ್ನ ಮಹಿಳಾ ಸಾಧಕಿ

ವಿಭಿನ್ನ ಮಹಿಳಾ ಸಾಧಕಿ

ಕಳೆದ ವರ್ಷ ನಡೆದಿದ್ದ ರಿಯೊ ಒಲಿಂಪಿಕ್ಸ್ ನ ಮಹಿಳಾ ಜಿಮ್ನಾಸ್ಟಿಕ್ಸ್ ನಲ್ಲಿ ಭಾಗವಹಿಸುವ ಅರ್ಹತೆ ಪಡೆಯುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಆಟಗಾರ್ತಿ ಎಂಬ ಖ್ಯಾತಿ ಪಡೆದಿದ್ದ ದೀಪಾ ಕರ್ಮಾಕರ್.

ವೈಕಲ್ಯದ ನಡುವೆಯೇ ಸಾಧನೆ

ವೈಕಲ್ಯದ ನಡುವೆಯೇ ಸಾಧನೆ

ಬಲಗಾಲು ಊನವಾಗಿದ್ದರೂ ಪ್ಯಾರಾಲಿಂಪಿಕ್ಸ್ ಹೈಜಂಪ್ ನಲ್ಲಿ ಭಾರತಕ್ಕೆ ಚಿನ್ನ ತಂದ ಮರಿಯಪ್ಪನ್ ತಂಗವೇಲು ತಮಿಳುನಾಡಿವರು. ಪ್ಯಾರಾಲಿಂಪಿಕ್ಸ್ ನಲ್ಲಿ ಅವರು ಗಳಿಸಿದ ಚಿನ್ನ ಆ ಮಾದರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಬಂದ ಮೊದಲ ಚಿನ್ನವಾಗಿದೆ.

ಛಲದಿಂದಲೇ ಬೆಳೆದ ದೀಪಾ

ಛಲದಿಂದಲೇ ಬೆಳೆದ ದೀಪಾ

ಕಳೆದ ವರ್ಷ ನಡೆದಿದ್ದ ರಿಯೊ ಪ್ಯಾರಾಲಿಂಪಿಕ್ಸ್ ನ ಶಾಟುಫುಟ್ ವಿಭಾಗದಲ್ಲಿ ದೀಪಾ ಮಲಿಕ್ ಅವರು ಬೆಳ್ಳಿ ಪದಕ ಗೆದ್ದಿದ್ದರು. ಪ್ಯಾರಾಲಿಂಪಿಕ್ಸ್ ನ ಈ ವಿಭಾಗದಲ್ಲಿ ಬೆಳ್ಳಿ ತಂದ ಮೊದಲ ಭಾರತೀಯ ಕ್ರೀಡಾಳು ಅವರು.

ಪದಕದ ಬರ ನೀಗಿದ ಕ್ರೀಡಾಳು

ಪದಕದ ಬರ ನೀಗಿದ ಕ್ರೀಡಾಳು

ಕಳೆದ ವರ್ಷ ನಡೆದ ರಿಯೊ ಒಲಿಂಪಿಕ್ಸ್ ನ ಮಹಿಳಾ ಕುಸ್ತಿಯಲ್ಲಿ ಕಂಚು ಗೆದ್ದಿದ್ದ ದೀಪಾ ಮಲಿಕ್, ಆ ಕ್ರೀಡಾಕೂಟದಲ್ಲಿ ಭಾರತ ಎದುರಿಸುತ್ತಿದ್ದ ಪದಕದ ಬರವನ್ನು ನೀಗಿಸಿದವರು.

ಭಾರತೀಯ ಹಾಕಿಗೆ ಮೆರುಗು

ಭಾರತೀಯ ಹಾಕಿಗೆ ಮೆರುಗು

ಫೀಲ್ಡ್ ಹಾಕಿಯಲ್ಲಿ ತಮ್ಮದೇ ಆದ ಪರಿಶ್ರಮದಿಂದ ಪ್ರಮುಖ ಆಟಗಾರರಾಗಿ ರೂಪುಗೊಂಡಿದ್ದಾರೆ ಶ್ರೀಜೇಶ್. ಇತ್ತೀಚೆಗಷ್ಟೇ ಭಾರತೀಯ ಹಾಕಿ ತಂಡದ ನಾಯಕ ಸ್ಥಾನಕ್ಕೆ ಆಯ್ಕೆಯಾಗಿರುವ ಶ್ರೀಜೇಶ್, ವಿಶ್ವದ ಅತ್ಯುತ್ತಮ ಗೋಲ್ ಕೀಪರ್ ಗಳಲ್ಲೊಬ್ಬರೆಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The recently appointed captain of the India cricket team in all three formats of the game, Virat Kohli, is set to receive the coveted Padma Shri award on the 68th Republic Day of India this Thursday.
Please Wait while comments are loading...