ದೇಶ, ವಿದೇಶಗಳ ಕ್ರೀಡಾಸುದ್ದಿಗಳ ಚಿತ್ರ ಸಂಪುಟ

Posted By:
Subscribe to Oneindia Kannada

ಬೆಂಗಳೂರು, ಫೆ. 15: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

ಲಾಸ್ ಏಂಜಲೀಸ್ ಮ್ಯಾರಥಾನ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ, ವಿಶಾಖಪಟ್ಟಣಂನಲ್ಲಿ ಶ್ರೀಲಂಕಾ ವಿರುದ್ಧ ಟ್ವೆಂಟಿ20 ಸರಣಿ ಗೆದ್ದ ಟೀಂ ಇಂಡಿಯಾ, 12ನೇ ದಕ್ಷಿಣ ಏಷ್ಯಾ ಗೇಮ್ಸ್, ಪ್ರೋ ಕಬಡ್ಡಿ ಲೀಗ್ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳ ಸಂಕ್ಷಿಪ್ತ ವರದಿ ಹಾಗೂ ಚಿತ್ರಗಳು ಇಲ್ಲಿವೆ...

Sports

ಸಾಂಟಾ ಮೋನಿಕಾ: ಲಾಸ್ ಏಂಜಲೀಸ್ ಮ್ಯಾರಥಾನ್ ಪುರುಷರ ಸ್ಪರ್ಧೆ ವಿಜೇತ ವೆಲ್ಡನ್ ಕಿರುಯಿ, ಮಹಿಳೆಯರ ಸ್ಪರ್ಧೆ ವಿಜೇತೆ ನತಾಲಿಯಾ ಲೆಹೊಂಕೊವ.

Sports

ವಿಶಾಖಪಟ್ಟಣಂ: ಶ್ರೀಲಂಕಾ ವಿರುದ್ಧ ಮೂರನೇ ಟಿ20 ಪಂದ್ಯ ಹಾಗೂ ಸರಣಿಯನ್ನು 2-1 ಅಂತರದಿಂದ ಜಯಸಿದ ಟೀಂ ಇಂಡಿಯಾದ ಗೆಲುವಿನ ನಡಿಗೆ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ PTI Photo :ಆರ್ ಸೆಂಥಿಲ್ ಕುಮಾರ್.

Sports

ವಿಶಾಖಪಟ್ಟಣಂ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆಲ್ಲುವ ಮೂಲಕ ಮೊದಲ ಬಾರಿಗೆ ತವರು ನೆಲದಲ್ಲಿ ಟಿ20 ಸರಣಿ ಗೆದ್ದ ಸಂಭ್ರಮದಲ್ಲಿ ಧೋನಿ ಪಡೆ.

Sports


ಪತ್ರೋಡಾ: ಗೋವಾದ ನೆಹರೂ ಸ್ಟೇಡಿಯಂನಲ್ಲಿ ಐ ಲೀಗ್ ಪಂದ್ಯವೊಂದರಲ್ಲಿ ಮುಂಬೈ ಎಫ್ ಸಿ ಹಾಗೂ ಸ್ಫೋರ್ಟಿಂಗ್ ಕ್ಲಬ್ ಡಿ ಗೋವಾ ಆಡುತ್ತಿರುವ ದೃಶ್ಯ.

Sports

ಗುವಾಹಟಿ: ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಕಬಡ್ಡಿ ಸೆಮಿಫೈನಲ್ ಪಂದ್ಯ.


Sports

ರಾಂಚಿ: ರಾಂಚಿ ರೇಯ್ಸ್ ಆಟಗಾರರು ದಬಾಂಗ್ ಮುಂಬೈ ವಿರುದ್ಧ್ ಎಚ್ ಐಎಲ್ ಪಂದ್ಯದಲ್ಲಿ ಗೋಲು ಹೊಡೆದ ಸಂಭ್ರಮ.

Sports


ಗುವಾಹಟಿ: ಭಾರತದ ಶಿವ ಥಾಪ (ನೀಲಿ ಜರ್ಸಿ) ಅವರು ಬಾಂಗ್ಲಾದೇಶದ ಒಹಿದುಜಮನ್ ಅವರನ್ನು ಬಾಂಟಮ್ ವೇಯ್ಟ್ ವಿಭಾಗದಲ್ಲಿ ಸೋಲಿಸಿ ಫೈನಲ್ ತಲುಪಿದ್ದಾರೆ.
Sports


ಗುವಾಹಟಿ: ಪುರುಷರ ಹ್ಯಾಂಡ್ ಬಾಲ್ ಪಂದ್ಯಾವಳಿ : ಭಾರತ(ನೀಲಿ) ಹಾಗೂ ನೇಪಾಳ (ಹಳದಿ), ದಕ್ಷಿಣ ಏಷ್ಯಾ ಗೇಮ್ಸ್.
Sports

ಗುವಾಹಟಿ: ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಭಾರತ(ಕಿತ್ತಲೆ) ಹಾಗೂ ನೇಪಾಳ ನಡುವಿನ ಮಹಿಳೆಯರ ಕಬಡ್ಡಿ ಪಂದ್ಯ.

Sports

ಗುವಾಹಟಿ : ದಕ್ಷಿಣ ಏಷ್ಯಾ ಗೇಮ್ಸ್ ನ 50 ಮೀ ಏರ್ ರೈಫಲ್ ಚಿನ್ನ ಗೆದ್ದ ಚೈನ್ ಸಿಂಗ್(ಮಧ್ಯೆ), ಬೆಳ್ಳಿ ಗೆದ್ದ ಗಗನ್ ನಾರಂಗ್(ಎಡ), ಕಂಚು ಗೆದ್ದ ಶ್ರೀಲಂಕಾದ ಸಮರಕೂನ್(ಬಲ)

Sports

ಬಾರ್ಸಿಲೋನಾ: ಎಫ್ ಸಿ ಬಾರ್ಸಿಲೋನಾದ ನೇಮಾರ್ (ಬಲ) ಅವರು ಸೆಲ್ಟಾ ವಿಗೋದ ಹ್ಯೂಗೂ ಮಲ್ಲೋ ಜೊತೆ ಚೆಂಡಿಗಾಗಿ ಕಾದಾಡುತ್ತಿರುವ ದೃಶ್ಯ ಸ್ಪಾನೀಷ್ ಲಾ ಲೀಗಾ ಪಂದ್ಯ್, ಕ್ಯಾಂಪ್ ನೌ ಸ್ಟೇಡಿಯಂ, ಬಾರ್ಸಿಲೋನಾ.

Sports

ಸೈಂಟ್ ಪೀಟರ್ಸ್ ಬರ್ಗ್: ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ಮಹಿಳಾ ಟೆನ್ನಿಸ್ ಟೂರ್ನಮೆಂಟ್ ಗೆದ್ದ ಇಟಲಿಯ ರೊಬರ್ಟಾ ವಿನ್ಸಿ(ಬಲಗಡೆ) ರನ್ನರ್ ಅಪ್ ಸ್ವಿಟ್ಜರ್ಲೆಂಡ್ ನ ಬೆಲಿಂಡಾ ಬೆನ್ಸಿಕ್.

Sports

ಢಾಕಾ: ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅರ್ಧಶತಕ ಗಳಿಸಿ ಹೋರಾಟದ ಪ್ರದರ್ಶನ ನೀಡಿದ ಭಾರತದ ಸರ್ಫರಾಜ್ ಖಾನ್.

Sports

ಢಾಕಾ: ಮೊದಲ ಬಾರಿಗೆ ಭಾರತವನ್ನು ಸೋಲಿಸಿ ಅಂಡರ್ 19 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡ.

Sports

ವೆಲ್ಲಿಂಗ್ಟನ್ : ಆಸ್ಟ್ರೇಲಿಯಾದ ಆಡಂ ವೋಜಸ್ ಅವರು ಬಾಸಿನ್ ರಿಸರ್ವ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿಶತಕ (239) ಬಾರಿಸಿ ತಂಡಕ್ಕೆ ಐದು ರನ್ ಗಳ ಜಯ ತಂದಿತ್ತರು.

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Todays sports news stories in pics around the world: Pictures from Los Angeles Marathon, New Zealand vs Australian test match, visakhapatnam t20, pro kabaddi league, 12th South Asian Games and other major sports event.
Please Wait while comments are loading...