ಟೆನಿಸ್ ಆಟಗಾರ ಸೋಮ್ ದೇವ್ ರಿಂದ ನಿವೃತ್ತಿ ಘೋಷಣೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 01: ಬಹುಕಾಲ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಭಾರತದ ಟೆನಿಸ್ ಸಿಂಗಲ್ಸ್ ಆಟಗಾರ ಸೋಮದೇವ್ ದೆವರ್ ಮನ್ ಅವರು ಭಾನುವಾರ (ಜನವರಿ 01) ದಂದು ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

31 ವರ್ಷ ವಯಸ್ಸಿನ ಸೋಮ್ ದೇವ್ ಅವರು ಬಹುಕಾಲದಿಂದ ಭುಜದ ಗಾಯದ ನೋವಿನಿಂದ ಬಳಲುತ್ತಿದ್ದಾರೆ. 2012ರಿಂದ ವೃತ್ತಿ ಬದುಕಿನಲ್ಲಿ ಹೆಚ್ಚು ಸಕ್ರಿಯರಾಗಿ ಕಾಣಿಸಿಕೊಂಡಿಲ್ಲ. ಆಟಗಾರನಾಗಿ ಮುಂದುವರೆಯಲು ಸಾಧ್ಯವಾಗದ ಕಾರಣ, ಸೋಮ್ ದೇವ್ ಅವರು ಇನ್ಮುಂದೆ ಕೋಚ್ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Somdev Devvarman announces retirement from professional tennis

2008ರಿಂದ ಭಾರತದ ಪರ ಸಿಂಗಲ್ಸ್ ಆಡುತ್ತಾ ಬಂದಿರುವ ಸೋಮ್ ದೇವ್ ಅವರು ಡೇವಿಸ್ ಕಪ್ ತಂಡದ ಸಕ್ರಿಯ ಸದಸ್ಯರಾಗಿದರು. 14 ಸರಣಿಯಲ್ಲಿ ಆಡಿದ್ದಲ್ಲದೆ 2010ರಲ್ಲಿ ವಿಶ್ವಗುಂಪಿಗೆ ಅರ್ಹತೆ ಪಡೆದ ತಂಡದಲ್ಲಿದ್ದರು.

2009ರ ಚೆನ್ನೈ ಓಪನ್ (ವೈಲ್ಡ್ ಕಾರ್ಡ್) ಹಾಗೂ 2011ರಲ್ಲಿ ದಕ್ಷಿಣ ಆಫ್ರಿಕಾ ಓಪನ್ ಟೂರ್ನಿಗಳು ಸೋಮ್ ದೇವ್ ಅವರು ಫೈನಲ್ ಪ್ರವೇಶಿಸಿದ ಎರಡು ಎಟಿಪಿ ಟೂರ್ ಆಗಿದೆ. ಚೀನಾದ ಗ್ವಾಂಗ್ಜೊದಲ್ಲಿ 2010ರ ಏಷ್ಯನ್ ಗೇಮ್ಸ್ ನಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

2011ರಲ್ಲಿ ಸೋಮ್ ದೇವ್ ಅವರಿಗೆ ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಗೌರವ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ravaged by injuries, India's star singles player Somdev Devvarman today, January 1, announced his retirement from professional tennis, bringing an abrupt end to what was once a promising career.
Please Wait while comments are loading...