ಸಿಂಗಾಪುರ ಬ್ಯಾಡ್ಮಿಂಟನ್: ಫೈನಲ್ ನಲ್ಲಿ ಶ್ರೀಕಾಂತ್, ಪ್ರಣೀತ್ ಮುಖಾಮುಖಿ

Posted By:
Subscribe to Oneindia Kannada

ಸಿಂಗಾಪುರ, ಏಪ್ರಿಲ್ 15: ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಗೆ ಭಾರತದ ಕಿಡಾಂಬಿ ಶ್ರೀಕಾಂತ್ ಹಾಗೂ ಸಾಯಿ ಪ್ರಣೀತ್ ಲಗ್ಗೆಯಿಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಭಾರತೀಯರಿಬ್ಬರು ಫೈನಲ್ ನಲ್ಲಿ ಮುಖಾಮುಖಿಯಾಗಿದ್ದಾರೆ.

ಭಾನುವಾರ ಬೆಳಗ್ಗೆ ಸುಮಾರು 11:30 ಗಂಟೆಗೆ ನಡೆಯಲಿರುವ ಹಣಾಹಣಿಯಲ್ಲಿ ಯಾರು ಗೆದ್ದರೂ, ಚಾಂಪಿಯನ್ ಪಟ್ಟ ಹಾಗೂ ರನ್ನರ್ ಅಪ್ ಪ್ರಶಸ್ತಿ ಭಾರತಕ್ಕೆ ಲಭ್ಯವಾಗಲಿರುವುದು ವಿಶೇಷ.

ಶನಿವಾರ (ಏಪ್ರಿಲ್ 15) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡು ಪ್ರತ್ಯೇಕ ಸೆಮಿಫೈನಲ್ ಪಂದ್ಯಗಳಲ್ಲಿ ಶ್ರೀಕಾಂತ್, ಪ್ರಣೀತ್ ಜಯ ಸಾಧಿಸಿ ಫೈನಲ್ ಗೆ ಕಾಲಿಟ್ಟರು.

Singapore Open Super Series: Kidambi Srikanth to face B Sai Praneeth in the final

ತಮ್ಮ ಸೆಮಿಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಆ್ಯಂತೋನಿ ಸಿನಿಸುಕ ಗಿಂಟಿಂಗ್ ವಿರುದ್ಧ 21-13, 21-14 ಗೇಮ್ ಗಳ ಅಂತರದಲ್ಲಿ ಜಯ ಸಾಧಿಸಿದರು.

ಅತ್ತ, ಪ್ರಣೀತ್ ಅವರು, ದಕ್ಷಿಣ ಕೊರಿಯಾದ ಲೀ ಡಾಂಗ್ ಕಿಯೊನ್ ವಿರುದ್ಧ 21-6, 21-8 ಗೇಮ್ ಗಳ ಅಂತರದಲ್ಲಿ ಗೆಲುವು ಪಡೆದು ಫೈನಲ್ ಗೆ ಕಾಲಿಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At Singapore Open, Indian players Kidambi Srikanth will take on B Sai Praneeth in the final for the first instance of an all-India final at the Superseries level. The match has been scheduled at 11:30 am IST.
Please Wait while comments are loading...