ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸಿಂಧು, ಗೋಪಿಚಂದ್ ಗೆ ವರ್ಷದ ಕ್ರೀಡಾಳು, ಕೋಚ್ ಪ್ರಶಸ್ತಿ

ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಕೋಚ್ ಪುಲ್ಲೇಲ ಗೋಪಿಚಂದ್ ಅವರಿಗೆ ಇಲ್ಲಸ್ಟ್ರೇಟೆಡ್ ನಿಯತಕಾಲಿಕೆ ನೀಡುವ ವರ್ಷದ ಪ್ರಶಸ್ತಿ. ಇತರ ಬ್ಯಾಡ್ಮಿಂಟನ್ ಆಟಗಾರರಾದ ಎಚ್.ಎಸ್. ಪ್ರಣಯ್, ಶ್ರೀಕಾಂತ್ ಗೂ ಪ್ರಶಸ್ತಿಯ ಗೌರವ.

ಮುಂಬೈ, ಜುಲೈ 7: ಭಾರತೀಯ ಬ್ಯಾಡ್ಮಿಂಟನ್ ರಂಗದ ತಾರೆ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರಿಗೆ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ನಿಯತಕಾಲಿಕೆ ನೀಡುವ ವರ್ಷದ ಕ್ರೀಡಾಳು ಪ್ರಶಸ್ತಿಗೆ ಭಾಜನವಾಗಿದ್ದಾರೆ. ಮುಂಬೈನಲ್ಲಿ ಜುಲೈ 6ರ ರಾತ್ರಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ವಿತರಿಸಲಾಗಿದೆ.

ಅವರ ಗುರು ಪುಲ್ಲೇಲ ಗೋಪಿಚಂದ್ ಅವರಿಗೆ ವರ್ಷದ ತರಬೇತುದಾರ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಒಲಿಂಪಿಕ್ಸ್ ನಲ್ಲಿ ಸಿಂಧು ಅವರು ಪದಕ ಗೆದ್ದ ಮೇಲೆ ಗೋಪಿಚಂದ್ ಅವರಿಗೆ ಹಲವಾರು ಪ್ರಶಸ್ತಿಗೆ ಸಂದಿವೆ.

ಇನ್ನು ರಾಜ್ಯದ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು, ಗೇಮ್ ಚೇಂಜರ್ ಆಫ್ ದ ಇಯರ್ ಎಂಬ ಪ್ರಶಸ್ತಿಗೆ ಭಾಜನರಾದರು. ಇನ್ನು, ಭಾರತದ ಕಿರಿಯರ ಹಾಕಿ ತಂಡ ವರ್ಷದ ತಂಡ ಎಂಬ ಗೌರವಕ್ಕೆ ಪಾತ್ರವಾಯಿತು.

ಒಲಿಂಪಿಕ್ಸ್ ಮಡಿಲಿಗೆ ಮತ್ತೆರಡು ಪ್ರಶಸ್ತಿ

ಒಲಿಂಪಿಕ್ಸ್ ಮಡಿಲಿಗೆ ಮತ್ತೆರಡು ಪ್ರಶಸ್ತಿ

ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಪಿ.ವಿ. ಸಿಂಧು ಅವರು, ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಹಾಗೂ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಗೆದ್ದಿದ್ದರು. ಈ ಸಾಧನೆಯಿಂದಾಗಿ ಅವರಿಗೆ, ವರ್ಷದ ಕ್ರೀಡಾಳು ಪ್ರಶಸ್ತಿ ಸಂದಿದೆ.

ಉತ್ತಮ ಶಿಷ್ಯರನ್ನು ಕೊಟ್ಟಿರುವ ಗೋಪಿಚಂದ್

ಉತ್ತಮ ಶಿಷ್ಯರನ್ನು ಕೊಟ್ಟಿರುವ ಗೋಪಿಚಂದ್

ಇನ್ನು, ಸಿಂಧು ಅವರ ಗುರು ಗೋಪಿಚಂದ್ ಅವರು, ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದು ಭಾರತಕ್ಕೆ ಹೆಸರು ತಂದಿರುವ ಸೈನಾ ನೆಹ್ವಾಲ್, ಕಿಡಾಂಬಿ ಶ್ರೀಕಾಂತ್, ಬಿ. ಸಾಯಿ ಪ್ರಣೀತ್ ಅವರಂಥ ಶಿಷ್ಯ ಪಡೆಯನ್ನು ಕಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಗೋಪಿಚಂದ್ ಅವರಿಗೆ ವರ್ಷದ ಕೋಚ್ ಗೌರವ ಸಿಕ್ಕಿದೆ.

ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಪ್ರಣಯ್

ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಪ್ರಣಯ್

ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಅವರು, ಇತ್ತೀಚೆಗೆ ನಡೆದ ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಪಂದ್ಯಾವಳಿಯನ್ನು ಗೆದ್ದರು. ಮತ್ತೊಬ್ಬ ಬ್ಯಾಡ್ಮಿಂಟನ್ ಸ್ಟಾರ್ ಎಚ್.ಎಸ್ ಪ್ರಣಯ್ ಅವರು, ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಈ ಇಬ್ಬರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಿಲ್ಖಾ ಸಿಂಗ್ ಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ

ಮಿಲ್ಖಾ ಸಿಂಗ್ ಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ

ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್ ಅವರಿಗೆ ಲಿವಿಂಗ್ ಲೆಜೆಂಡ್ ಹಾಗೂ ಜೀವಮಾನ ಶ್ರೇಷ್ಠ ಕ್ರೀಡಾಳು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜೂನಿಯರ್ ವಿಶ್ವಕಪ್ ಗೆದ್ದಿದ್ದ ಕಿರಿಯರ ಬಳಗ

ಜೂನಿಯರ್ ವಿಶ್ವಕಪ್ ಗೆದ್ದಿದ್ದ ಕಿರಿಯರ ಬಳಗ

ಕಳೆದ ವರ್ಷ ನಡೆದಿದ್ದ ಕಿರಿಯರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತೀಯ ಕಿರಿಯರ ಹಾಕಿ ತಂಡವನ್ನು ವರ್ಷದ ತಂಡವೆಂದು ಗೌರವಿಸಲಾಯಿತು. ಆ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ಭಾರತ, ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಕಿರಿಯರ ತಂಡದ ನಾಯಕ ಹರ್ಜೀತ್ ಸಿಂಗ್ ಅವರು, ತಂಡದ ಪರವಾಗಿ ವೇದಿಕೆ ಮೇಲೆ ಬಂದು ಪ್ರಶಸ್ತಿ ಪಡೆದರು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X