ಸಿಂಧು ಸಾಧನೆ ಹಿಂದಿನ ಪ್ರೇರಕ ಶಕ್ತಿ ಆಕೆ ತಂದೆ ರಮಣ

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 19: ರಿಯೋ ಒಲಂಪಿಕ್ಸ್ ನಲ್ಲಿ ಪದಕದ ಬರ ಅನುಭವಿಸಿದ್ಧ ಭಾರತಕ್ಕೆ ಸಾಕ್ಷಿ ಬಳಿಕ ಬ್ಯಾಡ್ಮಿಂಟನ್ ತಾರೆ ಸಿಂಧು ಮತ್ತೊಂದು ಪದಕವನ್ನು ಖಚಿತ ಪಡಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಫೈನಲ್ ಪ್ರವೇಶಿಸಿದ ಸಿಂಧು, ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕವನ್ನು ಹೊತ್ತು ತರಲಿದ್ದಾರೆ. ಪಿವಿ ಸಿಂಧು ಹೆತ್ತವರ ಆನಂದದ ಕ್ಷಣಗಳು ನಿಮಗಾಗಿ ಇಲ್ಲಿವೆ. [ಪಿವಿ ಸಿಂಧು, ಬಾಡ್ಮಿಂಟನ್ ತಾರೆಯ ಬಗ್ಗೆ ತಿಳಿದುಕೊಳ್ಳಿ]

ದೂರದ ಸಾಂಬಾ ನಾಡಿನಲ್ಲಿ ಮಗಳ ಆಟೋಟದ ಸೊಬಗನ್ನು ದೂರದರ್ಶನದಲ್ಲೇ ಕಣ್ತುಂಬಿಕೊಳ್ಳುತ್ತಿರುವ ಪಿ.ವಿ. ಸಿಂಧುವಿನ ಹೆತ್ತವರು ತಮ್ಮ ಮಗಳ ರಿಯೋ ಕೂಟದ ತಯಾರಿಗಾಗಿ ಮಾಡಿದ ಪ್ರಯತ್ನ ಫಲ ನೀಡಿದೆ.

ಮುತ್ತಿನ ನಗರಿ ಹೈದರಾಬಾದ್‌ನಿಂದ 20 ಕಿ.ಮೀ. ಹೊರವಲಯದಲ್ಲಿರುವ ಸಿಂಧು ಪೋಷಕರು ಸದ್ಯ ಮಗಳ ಐತಿಹಾಸಿಕ ಸಾಧನೆಗಾಗಿ ತಹತಹಿಸುತ್ತಿದ್ದಾರೆ.[ಸಿಂಧು-ಮರೀನ್ ಫೈನಲ್ ಪಂದ್ಯದ ವೇಳೆ ಬದಲು? ಯಾವಾಗ?]

ಮಗಳಿಗಾಗಿ ರೇಲ್ವೆ ನೌಕರಿಗೆ ರಜೆ ಹಾಕಿದ ಅಪ್ಪ

ಮಗಳಿಗಾಗಿ ರೇಲ್ವೆ ನೌಕರಿಗೆ ರಜೆ ಹಾಕಿದ ಅಪ್ಪ

ಸಿಂಧು ಅವರ ರಿಯೋ ಒಲಿಂಪಿಕ್ಸ್ ತಯಾರಿಗಾಗಿ ರೇಲ್ವೆ ನೌಕರ, ಮಾಜಿ ವಾಲಿಬಾಲ್ ಆಟಗಾರರಾಗಿದ್ದ ಸಿಂಧು ತಂದೆ ಪಿ.ವಿ. ರಾಮಣ್ಣ 8 ತಿಂಗಳು ಕೆಲಸಕ್ಕೆ ರಜೆ ಹಾಕಿ ಪ್ರತಿನಿತ್ಯ ಮುಂಜಾನೆ 4 ಗಂಟೆಗೆ ಮಗಳನ್ನು ಪುಲ್ಲೇಲ ಗೋಪಿಚಂದ್ ಅಕಾಡೆಮಿಗೆ ಕರೆತಂದು ಪ್ರತಿ ಬಾರಿಯೂ ಆಟದ ಕುರಿತು ಮಗಳೊಂದಿಗೆ ಚರ್ಚಿಸಿ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದ ತಂದೆಯ ಸೂಚನೆಗಳನ್ನೆಲ್ಲ ಸಿಂಧು ರಿಯೋನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ತಂದೆಗೆ ತಕ್ಕೆ ಮಗಳು

ತಂದೆಗೆ ತಕ್ಕೆ ಮಗಳು

ಮಗಳು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಆಡಲು ತೆರುಳುತ್ತಿದ್ದಾಳೆಂಬ ಸಂತದ ರಮಣ ಅವರ ಕುಟುಂಬದಲ್ಲಿ ಮನೆ ಮಾಡಿದೆ. ಪ್ರತಿ ಪಂದ್ಯವನ್ನು ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಕುಳಿತು ವೀಕ್ಷಿಸುತ್ತಿದ್ದಾರೆ.

ಅಪ್ಪ ಅಮ್ಮ ಕೂಡಾ ಕ್ರೀಡಾಪಟುಗಳು

ಅಪ್ಪ ಅಮ್ಮ ಕೂಡಾ ಕ್ರೀಡಾಪಟುಗಳು

ಪಿವಿ ಸಿಂಧು ಅವರ ತಂದೆ ಪಿ ರಮಣ ಅವರು ವಾಲಿಬಾಲ್ ಪಟುವಾಗಿದ್ದು, ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. ತಾಯಿ ವಿಜಯ ಕೂಡಾ ವಾಲಿಬಾಲ್ ಪ್ಲೇಯರ್. ಹೀಗಾಗಿ ಮಗಳಿಗೆ ಚಿಕ್ಕಂದಿನಿಂದ ಕ್ರೀಡೆಯಲ್ಲಿ ಆಸಕ್ತಿ ಬೆಳೆದಿದೆ. ಒಲಿಂಪಿಕ್ಸ್ ಗಾಗಿ ದಿನಕ್ಕೆ 10 ಗಂಟೆ ಸಿಂಧು ತಯಾರಿ ನಡೆಸಿದರೆ, ಅವರ ಪೋಷಕರು ಜೊತೆಯಲ್ಲೇ ಮಗಳನ್ನು ನೋಡಿಕೊಳ್ಳುತ್ತಿದ್ದರು.

ಸಿಂಧು ಸಾಧನೆಗೆ ಗೋಪಿಚಂದ್ ಕೂಡಾ ಕಾರಣ

ಸಿಂಧು ಸಾಧನೆಗೆ ಗೋಪಿಚಂದ್ ಕೂಡಾ ಕಾರಣ

ತಂದೆ ವಾಲಿಬಾಲ್ ಪಟುವಾದರೂ ಸಿಂಧುಗೆ ಸೈನಾ ನೆಹ್ವಾಲ್ ಹಾಗೂ ಪಿ ಗೋಪಿಚಂದ್ ರಂಥ ದಿಗ್ಗಜ ಬಾಡ್ಮಿಂಟನ್ ಪಟುಗಳನ್ನು ನೋಡಿ ತಾನು ಭಾರತದ ಬಾಡ್ಮಿಂಟನ್ ತಾರೆಯಾಗಬೇಕು ಎಂಬ ಆಸೆ ಹುಟ್ಟಿತ್ತಂತೆ. ಇದಕ್ಕೆ ತಕ್ಕ ವಾತಾವರಣ, ಪ್ರೋತ್ಸಾಹ ನೀಡುವಲ್ಲಿ ಮೊದಲ ಕೋಚ್ ಮೆಹಬೂಬ್ ಸಹಕಾರಿಯಾಗಿದ್ದಾರೆ.

ಪಿ ಗೋಪಿಚಂದ್ ಮಾರ್ಗದರ್ಶನ

ಪಿ ಗೋಪಿಚಂದ್ ಮಾರ್ಗದರ್ಶನ

ಪುಲ್ಲೆಲ್ಲಾ ಗೋಪಿಚಂದ್ ಅಕಾಡೆಮಿಯ ವಿದ್ಯಾರ್ಥಿಯಾಗಿರುವ ಸಿಂಧು ಈಗ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಮಟ್ಟಕ್ಕೆ ಬೆಳೆದಿದ್ದಾರೆ. ಹಾಲಿ ಕೋಚ್ ಪಿ ಗೋಪಿಚಂದ್ ಮಾರ್ಗದರ್ಶನದಂತೆ ಸಿಂಧು ಹೊಸ ನಿರೀಕ್ಷೆ ಹುಟ್ಟಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Railways employee and a former volleyball player, Sindhu’s father had taken an eight-month leave before the Rio Games, as his daughter trained for a maiden Olympics appearance. During this period, Ramanna drove his daughter to Pullela Gopichand’s training academy at 4 am every morning.
Please Wait while comments are loading...