ರಿಯೋದಿಂದ ನೇರ ಹೈದರಾಬಾದಿನ ಆಸ್ಪತ್ರೆ ಸೇರಿದ ಸೈನಾ ನೆಹ್ವಾಲ್

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 19: ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ರಿಯೋ ಒಲಿಂಪಿಕ್ಸ್ 2016ರಲ್ಲಿ ಪಾಲ್ಗೊಂಡಿದ್ದ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಹೈದರಾಬಾದಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ಸೈನಾ ಅವರು ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಲೀಗ್ ಹಂತದಲ್ಲೇ ನಿರ್ಗಮಿಸಿದ್ದರು. 2ನೇ ಸುತ್ತಿನಲ್ಲೇ ನಿರ್ಗಮಿಸಲು ಮೊಣಕಾಲಿನ ಗಾಯ ಕಾರಣವಾಗಿತ್ತು.

Shuttler Saina Nehwal admitted to Hyderabad Hospital

26 ವರ್ಷ ವಯಸ್ಸಿನ ಭಾರತದ ಅಗ್ರಗಣ್ಯ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳಿಂದ ಆಸ್ಪತ್ರೆಯಲ್ಲಿದ್ದು ಶೀಘ್ರವೇ ಸರ್ಜರಿಗೆ ಒಳಪಡಲಿದ್ದಾರೆ. ಮರಿಯಾ ವಿರುದ್ಧದ ಪದ್ಯದಲ್ಲಿ ತೀವ್ರ ನೋವು ಅನುಭವಿಸಿದಳು ಎಂದು ಸೈನಾ ತಂದೆ ಹರ್ವೀರ್ ಹೇಳಿದ್ದಾರೆ.

ಎಂಆರ್​ಐ ಸ್ಕ್ಯಾನಿಂಗ್ ಮಾಡುವ ಬಗ್ಗೆ ವೈದ್ಯರು ಏನೂ ಸದ್ಯ ತಿಳಿಸಿಲ್ಲ. ಹೆಚ್ಚಿನ ಪರೀಕ್ಷೆಗೊಳಪಡಿಸಿಲು ಮುಂಬೈಗೆ ತೆರಳಲಿದ್ದೇವೆ. ನಂತರ ಇನ್ನಷ್ಟು ವಿವರ ಹೇಳಬಲ್ಲೆ ಎಂದು ಆಕೆಯ ತಂದೆ ಹರ್ವಿರ್ ಸಿಂಗ್ ತಿಳಿಸಿದ್ದಾರೆ.

ವಿಶ್ವದ ನಂ.5ನೇ ಶ್ರೇಯಾಂಕಿತ ಸೈನಾ ಅವರು ವಿಶ್ವದ ನಂ.61ನೇ ಶ್ರೇಯಾಂಕಿತ ಮರಿಯಾ ವಿರುದ್ಧ 18-21, 19-21ರಲ್ಲಿ ಅನಿರೀಕ್ಷಿತ ಸೋಲು ಕಂಡಿದ್ದರು. ಗಾಯದ ಸಮಸ್ಯೆಯಿಂದ ಶೀಘ್ರವೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India ace Saina Nehwal was admitted to a hospital in Hyderabad to undergo treatment for her knee injury which affected her progress in the badminton event of the Rio Olympics.
Please Wait while comments are loading...