ರಿಯೋ 2016: ಸಿಂಧು, ಶ್ರೀಕಾಂತ್ ಕ್ವಾರ್ಟರ್ ಫೈನಲ್ ನತ್ತ ದಾಪುಗಾಲು

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 16: ಭಾರತದ ಸ್ಟಾರ್ ಶಟ್ಲರ್ ಗಳಾದ ಪಿವಿ ಸಿಂಧು ಮತ್ತು ಶ್ರೀಕಾಂತ್ ತಮ್ಮ ಗೆಲುವಿನ ಅಭಿಯಾನ ಮುಂದುವರೆಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಶಟ್ಲರ್ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್​ ಫೈನಲ್ ಪ್ರವೇಶಿಸುವ ಮೂಲಕ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ತಮ್ಮ ಚೊಚ್ಚಲ ಒಲಿಂಪಿಕ್ಸ್​ನಲ್ಲೇ 8ರ ಘಟ್ಟ ಪ್ರವೇಶಿಸಿದ ಸಾಧನೆ ಶ್ರೀಕಾಂತ್ ರದ್ದಾಗಿದೆ. [ರಿಯೋದಲ್ಲಿ ಪ್ರೇಮ ನಿವೇದನೆ: ಈಜುಕೊಳದ ಬಳಿ ಚೀನಿ ಲವ್ ಸ್ಟೋರಿ]

ಸೋಮವಾರ ನಡೆದ ಪುರುಷರ ಸಿಂಗಲ್ಸ್ 16ರ ಘಟ್ಟದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 42 ನಿಮಿಷ ಹೋರಾಡಿದ ಶ್ರೀಕಾಂತ್ 21-19, 21-19 ಅಂತರದಲ್ಲಿ ಡೆನ್ಮಾರ್ಕ್​ನ ವಿಶ್ವ ನಂ.5 ಶಟ್ಲರ್ ಜಾನ್ ಓ ಜಾರ್ಗೆನ್ಸನ್​ರನ್ನು ಸೋಲಿಸಿದರು.


ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿದ ಶ್ರೀಕಾಂತ್ ನಂತರ ಆಕ್ರಮಣಕಾರಿ ಆಟಕ್ಕಿಳಿದು ಮೊದಲ ಸೆಟ್ ನಲ್ಲಿ ಮೇಲುಗೈ ಸಾಧಿಸಿದರು. [ಕ್ಷಮಿಸಿ, ಮುಂದಿನ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವೆ: ದೀಪಾ]
Indian shuttler K Srikanth and PV sindhu enter quarterfinals

ಇನ್ನು 2ನೇ ಸೆಟ್ ನಲ್ಲಿ ಜಾನ್ ಪ್ರತಿರೋಧ ನೀಡಿದರಾದರೂ ಬಲಿಷ್ಟ ಸ್ಮ್ಯಾಶ್ ಗಳ ಮೂಲಕ ಶ್ರೀಕಾಂತ್ ರೋಚಕ ಗೆಲುವಿನೊಂದಿಗೆ ಸಂಭ್ರಮಿಸಿದರು.


23 ವರ್ಷದ ಶ್ರೀಕಾಂತ್ ಮುಂದಿನ ಪಂದ್ಯದಲ್ಲಿ 2008ರ ಬೀಜಿಂಗ್ ಮತ್ತು 2012ರ ಲಂಡನ್ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ನಲ್ಲಿ ಸ್ವರ್ಣ ಪದಕ ಗೆದ್ದಿರುವ ಚೀನಾದ ಲಿನ್ ಡನ್​ರನ್ನು ಎದುರಿಸಲಿದ್ದಾರೆ.
Indian shuttler K Srikanth and PV sindhu enter quarterfinals

ಇನ್ನೊಂದೆಡೆ ಭಾರತದ ಮಹಿಳಾ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.


ಚೀನಾ ಆಟಗಾರ್ತಿ ತೈಪೆಯ ತಾಯ್ ಝುೂ ಯಿಂಗ್ ವಿರುದ್ಧ 21-13, 21-15 ಅಂತರದಲ್ಲಿ ಸುಲಭ ಜಯಗಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
On the tenth day of Rio Olympics, Indian shuttlers PV Sindhu+ and Kidambi Srikanth booked their quarterfinals berths to keep medal hopes alive on Monday
Please Wait while comments are loading...