ರಿಯೋ 2016: ಚಿನ್ನ ಪದಕಕ್ಕಾಗಿ ಹೀಗೂ ಮಾಡ್ತಾರೆ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 17: ಮಹಿಳೆಯ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಅಚ್ಚರಿಯೊಂದು ನಡೆದಿದೆ, ಓಟದ ಸ್ಪರ್ಧಿಯೊಬ್ಬರು ಚಿನ್ನದ ಪದಕ ಪಡೆಯಲು ಗೆಲುವಿನ ರೇಖೆಯ ಬಳಿ ಡೈವ್ ಮಾಡಿ ಗುರಿ ತಲುಪುವ ಮೂಲಕ ತಮ್ಮ ಪ್ರತಿಸ್ಪರ್ಧಿಯನ್ನು ಹಿಂದಿಕ್ಕಿ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಮಹಿಳೆಯರ 400 ಮೀಟರ್ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಇನ್ನೇನು ಅಮೆರಿಕಾದ ಸ್ಪರ್ಧಿ ಗುರಿ ಮುಟ್ಟತ್ತಾರೆ, ಎನ್ನುವ ಸಂದರ್ಭದಲ್ಲಿ ಬಹಾಮಸ್ ದೇಶದ ಸ್ಪರ್ಧಿ ಶೋನಿ ಮಿಲ್ಲರ್ ಡೈವ್ ಮಾಡಿ ಕೈಯನ್ನು ಮುಂದೆ ಚಾಚುವ ಮೊದಲಿಗರಾಗಿ ಮುಕ್ತಾಯದ ಗೆರೆಯನ್ನು ಮುಟ್ಟುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಮೆರಿಕಾದ ಓಟಗಾರ್ತಿ ಅಲಿಸನ್ ಫೆಲಿಕ್ಸ್ ಇನ್ನೇನು ಮುಕ್ತಾಯದ ಗೆರೆಯನ್ನು ಮುಟ್ಟಿ ಚಿನ್ನ ಪಡೆಯುತ್ತಾರೆ ಎನ್ನುವಷ್ಟರಲ್ಲಿಯೇ ಅವರ ಹಿಂದೆನೇ ಇದ್ದ ಶೋನಿ ಡೈವ್ ಮಾಡುವ ಮೂಲಕ ಚಿನ್ನವನ್ನು ಪಡೆದು ಸಂಭ್ರಮಿಸಿದರು.

49.44 ಗಳಲ್ಲಿ ಗುರಿ ಮುಟ್ಟಿದ ಮಿಲ್ಲರ್ ಚಿನ್ನ ಪಡೆದರೆ, ಅಮೆರಿಕಾದ ಫಿಲಿಕ್ಸ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಶೋನಿ ಅವರ ಈ ಸಹಾಸಕ್ಕೆ ಮೈಕ್ರೋ ಬ್ಲಾಗಿಂಗ್ ಟ್ವಿಟ್ಟರ್ ನಲ್ಲಿ ಮೆಚ್ಚುಗೆಗಳು ಹಾಗು ಟೀಕೆಗಳು ವ್ಯಕ್ತವಾಗಿವೆ.

ಶೋನಿ ಡೈವ್

ಶೋನಿ ಡೈವ್

49.44 ಗಳಲ್ಲಿ ಗುರಿ ಮುಟ್ಟಿದ ಮಿಲ್ಲರ್ ಚಿನ್ನ ಪಡೆದರೆ, ಅಮೆರಿಕಾದ ಫಿಲಿಕ್ಸ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಶೋನಿ ಅವರ ಈ ಸಾಹಸಕ್ಕೆ ಮೈಕ್ರೋ ಬ್ಲಾಗಿಂಗ್ ಟ್ವಿಟ್ಟರ್ ನಲ್ಲಿ ಮೆಚ್ಚುಗೆಗಳು ಹಾಗು ಟೀಕೆಗಳು ವ್ಯಕ್ತವಾಗಿವೆ.

400ಮೀಟರ್ ಫೈನಲ್ ಗೆದ್ದ ಮಿಲ್ಲರ್

400ಮೀಟರ್ ಫೈನಲ್ ಗೆದ್ದ ಮಿಲ್ಲರ್

400ಮೀಟರ್ ಫೈನಲ್ ನಲ್ಲಿ ಚಿನ್ನ ಗೆದ್ದ ಬಹಾಮಸ್ ನ ಮಿಲ್ಲರ್ ಅವರು ಗೆಲುವಿನ ಸಂಭ್ರಮದಲ್ಲಿ ಪಿಟಿಐ ಚಿತ್ರ

ಸೂಪರ್ ಡೈವ್ ಹೊಡೆದ ಮಿಲ್ಲರ್

ಸೂಪರ್ ಡೈವ್ ಹೊಡೆದ ಮಿಲ್ಲರ್ ಬಗ್ಗೆ ಟ್ವೀಟ್ಸ್

ಪದಕಕ್ಕಾಗಿ ಡೈವ್ ಹೊಡೆಯುವವರು

ಪದಕಕ್ಕಾಗಿ ಡೈವ್ ಹೊಡೆಯುವವರನ್ನು ನೋಡಿದ್ದೀರಾ

ಮಿಲ್ಲರ್ ಬಗ್ಗೆ ಥರಾವರಿ ಟ್ವೀಟ್ಸ್

ಮಿಲ್ಲರ್ ಬಗ್ಗೆ ಥರಾವರಿ ಟ್ವೀಟ್ಸ್ ಗಳು ಬಂದಿವೆ. ಬಹುತೇಕ ಹಾಸ್ಯಮಯವಾಗಿದ್ದು, ಮಿಲ್ಲರ್ ಡೈವ್ ಅಣಕಿಸಲಾಗಿದೆ.

ಈಜು ಸ್ಪರ್ಧಿಗೆ ಹೋಲಿಸಿದ ಸಾರ್ವಜನಿಕರು

ಮಿಲ್ಲರ್ ಡೈವ್ ಈಜು ಸ್ಪರ್ಧಿಗೆ ಹೋಲಿಸಿದ ಸಾರ್ವಜನಿಕರು

ಈ ರೀತಿ ಫಿನಿಶ್ ನಾ ಎಂದೂ ಕಂಡಿಲ್ಲ

ಈ ರೀತಿ ಫಿನಿಶ್ ನಾ ಎಂದೂ ಕಂಡಿಲ್ಲ ಎಂದು ಮಿಲ್ಲರ್ ಡೈವ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಮಿಲ್ಲರ್ ಟ್ವಿಟ್ಟರ್ ನಲ್ಲಿ ಫೇಮಸ್

ಮಿಲ್ಲರ್ ಡೈವ್ ಟ್ವಿಟ್ಟರ್ ನಲ್ಲಿ ಫೇಮಸ್.400ಮೀಟರ್ ಫೈನಲ್ ನಲ್ಲಿ ಚಿನ್ನ ಗೆದ್ದ ಬಹಾಮಸ್ ನ ಮಿಲ್ಲರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bahamas' Shaunae Miller smiles after winning the gold medal in the women's 400-meter final during the athletics competitions of the 2016 Summer Olympics at the Olympic stadium in Rio de Janeiro, Brazil,Shaunae Miller dived across the finish line to deny Allyson Felix a fifth Olympic gold
Please Wait while comments are loading...