300ನೇ ಗ್ರಾನ್ ಸ್ಲಾಮ್ ಗೆದ್ದ ಸೆರೆನಾ ವಿಲಿಯಮ್ಸ್

Posted By:
Subscribe to Oneindia Kannada

ಲಂಡನ್, ಜುಲೈ 04: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ 300ನೇ ಗ್ರಾನ್ ಸ್ಲಾಂ ಪಂದ್ಯ ಗೆಲುವಿನ ದಾಖಲೆಯೊಂದಿಗೆ 4ನೇ ಸುತ್ತು ತಲುಪಿದ್ದಾರೆ. ಈ ಗೆಲುವಿನ ಮೂಲಕ ಸೆರೆನಾ ಅವರು ಕ್ರಿಸ್ ಎವರ್ಟ್, ಮಾರ್ಟಿನಾ ನವ್ರತಿಲೋವಾ, ಸ್ಟೆಫಿಗ್ರಾಫ್ ಸಾಲಿಗೆ ಸೇರಿದ್ದಾರೆ.

ಸದ್ಯ ಕ್ರಿಸ್ ಎವರ್ಟ್ ದಾಖಲೆ ಮುರಿದಿರುವ ಸೆರೆನಾ ಅವರು ಸರ್ವಕಾಲಿಕ ದಾಖಲೆ ಪಟ್ಟಿಯಲ್ಲಿ ಮಾರ್ಟಿನಾ ಹಾಗೂ ಸ್ಟೆಫಿ ಅವರ ಹಿಂದಿದ್ದಾರೆ.[ಸಾನಿಯಾ -ಮಾರ್ಟಿನಾರಿಂದ ಶುಭಾರಂಭ]

34 ವರ್ಷ ವಯಸ್ಸಿನ ಸೆರೆನಾ ಅವರು ವಿಂಬಲ್ಡನ್ ನಲ್ಲಿ ಒಟ್ಟಾರೆ 82 ಪಂದ್ಯಗಳನ್ನು ಗೆದ್ದುಕೊಂಡಿದ್ದು ಸ್ಟೆಫಿಗ್ರಾಫ್ ಅವರ 22 ಗ್ರಾನ್ ಸ್ಲಾಮ್ ದಾಖಲೆ ಸಮಬಲಗೊಳಿಸುವ ಉತ್ಸಾಹದಲ್ಲಿದ್ದಾರೆ.

Serena Williams reaches 300-win milestone in Wimbledon romp

ಸೆರೆನಾ ಅವರು 6-3, 6-0 ನೇರ ಸೆಟ್ ಗಳ ಮೂಲಕ ಜರ್ಮನಿಯ ಅನ್ನಿಕಾ ಬೆಕ್​ರನ್ನು 51 ನಿಮಿಷಗಳಲ್ಲೇ ಮಣಿಸಿ ಪ್ರೀ ಕ್ವಾರ್ಟರ್ ಫೈನಲ್ ​ಗೆ ಲಗ್ಗೆ ಇಟ್ಟಿದ್ದಾರೆ.[ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ: 5ನೇ ಸ್ಥಾನಕ್ಕೇರಿದ ಸೈನಾ]

ವಿಶ್ವ ನಂ. 1 ಆಟಗಾರ್ತಿ, ಹಾಲಿ ವಿಂಬಲ್ಡನ್ ಚಾಂಪಿಯನ್ ಸೆರೆನಾ ಅವರು ಹೆಚ್ಚು ಪಂದ್ಯ ಗೆದ್ದಿರುವ ಪಟ್ಟಿಯಲ್ಲಿ ಕ್ರಿಸ್ ಎವರ್ಟ್​ರನ್ನು (299) ಹಿಂದಿಕ್ಕಿದ್ದು, ಮಾರ್ಟಿನಾ ನವ್ರಾಟಿಲೋವಾರ (306) ಮುಕ್ತ ಟೆನಿಸ್ ಯುಗದ ದಾಖಲೆ ಸನಿಹದಲ್ಲಿದ್ದಾರೆ.[ವಿಂಬಲ್ಡನ್ : ಆಟಗಾರರಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನ ಬೇಕೇ ಬೇಕು!]

ಮಾಜಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ, ಅಲೈಸ್ ಕಾರ್ನೆಟ್, ಮಾಜಿ ರನ್ನರ್​ಅಪ್ ಎಗುನಿ ಬೌಚಾರ್ಡ್ ಕೂಡ ಪ್ರಿ ಕ್ವಾರ್ಟರ್​ಫೈನಲಿಗೇರಲು ವಿಫಲರಾಗಿದ್ದರು. ಸ್ವೆಟ್ಲಾನಾ ಕುಸ್ನೆತ್ಸೋವಾ ಅವರು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Serena Williams clinched her 300th Grand Slam victory as the defending champion raced into the Wimbledon fourth round with a 6-3, 6-0 demolition of Germany's Annika Beck on Sunday (July 3).
Please Wait while comments are loading...