ಟೆನಿಸ್ ದಂತಕತೆ ಸ್ಟೆಫಿ ಗ್ರಾಫ್ ವಿಶ್ವ ದಾಖಲೆ ಮುರಿದ ಸೆರೆನಾ

Posted By:
Subscribe to Oneindia Kannada

ಮೆಲ್ಬರ್ನ್, ಜನವರಿ 28: ಅಮೆರಿಕದ ಅಗ್ರ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಮ್ಮ ವೃತ್ತಿಜೀವನದ 23ನೇ ಗ್ರಾಂಡ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವುದರ ಮೂಲಕ ಜರ್ಮನಿಯ ಮಾಜಿ ಟೆನಿಸ್ ತಾರೆ ಸ್ಟೆಫಿ ಗ್ರಾಫ್ ದಾಖಲೆಯನ್ನು (22 ಗ್ರಾಂಡ್ ಸ್ಲಾಂ) ದಾಖಲೆ ಮುರಿದಿದ್ದಾರೆ.

ಶನಿವಾರ ನಡೆದ, ಈ ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಪಂದ್ಯಾವಳಿಯಾದ ಆಸ್ಟ್ರೇಲಿಯಾ ಓಪನ್ ನ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಅವರು, ತಮ್ಮ ಸಹೋದರಿಯೇ ಆದ ವೀನಸ್ ವಿಲಿಯಮ್ಸ್ ಅವರನ್ನು 6-4, 6-4 ನೇರ ಸೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಬಾಚಿದರಲ್ಲದೆ, ವಿಶ್ವ ದಾಖಲೆಗೂ ಭಾಜನರಾದರು.

Serena Williams Clinch Australian Open Title, Breaks Steffi Graf's Record

ಈ ಸಾಧನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ಸಾಧನೆ ಖುಷಿ ತಂದಿದೆ. ಈ ಸುದಿನಕ್ಕಾಗಿ ನಾನು ಹಲವಾರು ದಿನಗಳಿಂದ ಕಾಯುತ್ತಿದ್ದೆ'' ಎಂದು ಹೇಳಿದ್ದಾರೆ.


ಸೆರೆನಾ ವಿಲಿಯಮ್ಸ್ ಈವರೆಗೆ ಗೆದ್ದ ಗ್ರಾಂಡ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿಗಳು

- ಆಸ್ಟ್ರೇಲಿಯನ್ ಓಪನ್: 2003, 2005, 2007, 2009, 2010, 2015, 2017

- ಫ್ರೆಂಚ್ ಓಪನ್: 2002, 2013, 2015

- ವಿಂಬಲ್ಡನ್: 2002, 2003, 2009, 2010, 2012, 2015, 2016

- ಅಮೆರಿಕನ್ ಓಪನ್: 1999, 2002, 2008, 2012, 2013, 2014

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Serena Williams created history when she beat sister Venus to clinch the 2017 Australian Open women's singles title on Saturday.
Please Wait while comments are loading...