ಕ್ರೀಡಾ ಸೆಲೆಬ್ರಿಟಿ ಉಡುಗೆ ತೊಡುಗೆ ಸಾನಿಯಾ ಬೆಸ್ಟ್

Posted By:
Subscribe to Oneindia Kannada

ಬೆಂಗಳೂರು, ಜೂನ್ 20: ಇಡೀ ವಿಶ್ವವೇ ಒಂದು ಎಂದು ಸಾರುವ ವಸುದೈವ ಕುಟುಂಬಕಂ ಪರಿಕಲ್ಪನೆಯ ರೂಪದಲ್ಲಿ ಜನಪ್ರಿಯತೆ ಪಡೆಯುತ್ತಿರುವ ವರ್ಲ್ಡ್ ಎಥನಿಕ್ ಡೇ ಭಾನುವಾರ (ಜೂನ್ 19) ಆಚರಿಸಲಾಯಿತು. ಈ ಸಂದರ್ಭದಲ್ಲಿ ವೆಬ್ ಸೈಟ್ ವೊಂದು ನಡೆಸಿದ ಸಮೀಕ್ಷೆಯಲ್ಲಿ ಟೆನಿಸ್ ಪಟು ಸಾನಿಯಾ ಮಿರ್ಜಾ ಅವರು ಸುಂದರ ಉಡುಗೆ ತೊಡುಗೆ ಧರಿಸುವ ಸೆಲೆಬ್ರಿಟಿ ಎಂಬ ಕಿರೀಟ ಧರಿಸಿದ್ದಾರೆ.

ವಿಶ್ವ ಸಂಪ್ರದಾಯ ದಿನ(ehtnic day) ದ ಅಂಗವಾಗಿ Craftsvilla.com ನಡೆಸಿದ ಆನ್​ಲೈನ್ ಸಮೀಕ್ಷೆಯಲ್ಲಿ ಲೆಹಂಗಾ, ಸೀರೆ, ಅನಾರ್ಕಲಿ ದಿರಿಸಿನಲ್ಲಿ ಕಾಣಿಸಿಕೊಳ್ಳುವ ಸಾನಿಯಾ ಮಿರ್ಜಾ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

Sania Mirza tops list of Best Dressed Sportspersons

ಕ್ರೀಡಾಂಗಣದ ಹೊರಗೆ ಕೂಡ ವಿಭಿನ್ನ ಉಡುಗೆಗಳಲ್ಲಿ ಕಾಣಿಸಿಕೊಂಡು ಸಂಸ್ಕೃತಿಯ ರಾಯಭಾರಿಗಳಾಗಿ ಅಭಿಮಾನಿಗಳಿಗೆ ಮಾದರಿಯಾಗಿ ನಿಲ್ಲಬಲ್ಲರು. ಕ್ರೀಡಾಜಗತ್ತಿನ ಸುಂದರಿಯನ್ನು ತಿಳಿಯಲು ಮಾತ್ರ ಈ ಸಮೀಕ್ಷೆ ನಡೆಸಿಲ್ಲ. ಬದಲಿಗೆ ಸಂಪ್ರದಾಯತೆ, ಭಾರತೀಯತೆಗೆ ಎಷ್ಟು ಮಹತ್ವ ನೀಡುತ್ತಿದ್ದಾರೆ ಎಂದು ತಿಳಿಯಲು ಆನ್​ಲೈನ್ ಸಮೀಕ್ಷೆ ನಡೆಸಲಾಗಿದೆ.

ಮೇ 20ರಿಂದ ಜೂನ್ 5ವರೆಗೆ ಅಂತರ್ಜಾಲ ಸಮೀಕ್ಷೆ ನಡೆಸಲಾಗಿತ್ತು. ಸಾನಿಯಾ ಅವರಿಗೆ ಶೇ 62.9ರಷ್ಟು ಜನರು ಮತ ಹಾಕಿದ್ದಾರೆ. ದ್ವಿತೀಯ ಸ್ಥಾನವನ್ನು ವಿಶ್ವದ ಏಳನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ತಾರೆ, ಹೈದರಾಬಾದ್ ಮೂಲದ ಸೈನಾ ನೆಹ್ವಾಲ್ ಪಡೆದುಕೊಂಡಿದ್ದಾರೆ. ಅವರಿಗೆ ಶೇ 18.8ರಷ್ಟು ಮತಗಳು ಬಂದಿವೆ.

ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಶೇ9.3ರಷ್ಟು ಮತಗಳಿಸಿ ಮೂರನೇ ಸ್ಥಾನಕ್ಕೆ ಗಳಿಸಿದ್ದಾರೆ ಎಂದು ಕ್ರಾಫ್ಟ್ಸ್ ವಿಲ್ಲಾ ಮುಖ್ಯಸ್ಥೆ ಮೋನಿಕಾ ಗುಪ್ತಾ ಹೇಳಿದರು.

ಕ್ರೀಡಾ ಸೆಲೆಬ್ರಿಟಿ ಉಡುಗೆ ತೊಡುಗೆ ಸಾನಿಯಾ ಬೆಸ್ಟ್

ಕ್ರೀಡಾ ಸೆಲೆಬ್ರಿಟಿ ಉಡುಗೆ ತೊಡುಗೆ ಸಾನಿಯಾ ಬೆಸ್ಟ್

ಟೆನಿಸ್ ತಾರೆ ಸಾನಿಯಾ ಮಿರ್ಜಾ
ಕ್ರೀಡಾ ಸೆಲೆಬ್ರಿಟಿ ಉಡುಗೆ ತೊಡುಗೆ ಸಾನಿಯಾ ಬೆಸ್ಟ್

ಕ್ರೀಡಾ ಸೆಲೆಬ್ರಿಟಿ ಉಡುಗೆ ತೊಡುಗೆ ಸಾನಿಯಾ ಬೆಸ್ಟ್

ಕ್ರೀಡಾ ಸೆಲೆಬ್ರಿಟಿ ಉಡುಗೆ ತೊಡುಗೆ ಸಾನಿಯಾ ಬೆಸ್ಟ್

ಕ್ರೀಡಾ ಸೆಲೆಬ್ರಿಟಿ ಉಡುಗೆ ತೊಡುಗೆ ಸಾನಿಯಾ ಬೆಸ್ಟ್

-
-
-

ಭಾರತೀಯ ಮಹಿಳಾ ಕ್ರೀಡಾಳುಗಳು ಸೌಂದರ್ಯದಲ್ಲಿ ಯಾರಿಗೂ ಕಮ್ಮಿಯಿಲ್ಲ. ಆದ್ದರಿಂದ ಇವರು ಮ್ಯಾಗಝಿನ್ ಮುಖಪುಟಗಳಲ್ಲಿ ಕೂಡ ರಾರಾಜಿಸಬೇಕೆಂಬುದು ನಮ್ಮ ಆಶಯ. ಸ್ಫೋರ್ಟ್ಸ್ ಐಕಾನ್ ಗಳು ಫ್ಯಾಷನ್ ಐಕಾನ್ ಗಳಾಗಬಹುದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a survey conducted by an online ethnic marketplace Craftsvilla.com to celebrate World Ethnic Day, Sania Mirza received 62.9 per cent votes as the Best Dressed Sports Celebrity in Ethnic Wear.
Please Wait while comments are loading...