ಸಾನಿಯಾ ಮಿರ್ಜಾಗೆ ತೆರಿಗೆ ಇಲಾಖೆ ನೋಟಿಸ್

Subscribe to Oneindia Kannada

ಹೈದರಾಬಾದ್, ಫೆಬ್ರವರಿ 9: ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ತೆರಿಗೆ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸೇವಾ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

ಯಾವ ಪ್ರಕರಣದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳದ ಇಲಾಖೆ, ಫೆ.16ರಂದು ಸಾನಿಯಾ ಮಿರ್ಜಾ ಅವರು ಖುದ್ದಾಗಿ ವಿಚಾರಣೆಗಾಗಿ ಹಾಜರಾಗುವಂತೆ ಸೂಚಿಸಲಾಗಿದೆ.

Sania Mirza Summoned By Service Tax Department Over Alleged Tax Evasion

ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿದ್ದ ಪಕ್ಷದಲ್ಲಿ ತಮ್ಮ ಅಧಿಕೃತ ಪ್ರತಿನಿಧಿಯನ್ನು ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗಾಗಿ ಇಲಾಖಾ ಕಚೇರಿಗೆ ಕಳುಹಿಸಬೇಕೆಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

ಇದಲ್ಲದೆ, ಖುದ್ದಾಗಿ ಅಥವಾ ಪ್ರತಿನಿಧಿ ಮೂಲಕ ವಿಚಾರಣೆಯನ್ನು ಎದುರಿಸದಿದ್ದ ಪಕ್ಷದಲ್ಲಿ 1994ರ ಸೇವಾ ತೆರಿಗೆ ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಅದು ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tennis player Sania Mirza has been issued notice by the Service Tax department over alleged non-payment or tax evasion. Service Tax office in Hyderabad has issued summons to the tennis star on February 6 and she will have to appear before it in person or by an authorised agent on February 16.
Please Wait while comments are loading...