ಆಸ್ಟ್ರೇಲಿಯನ್ ಓಪನ್ ಗೆದ್ದ ಸಾನಿಯಾ-ಮಾರ್ಟಿನಾ ಜೋಡಿ

Posted By:
Subscribe to Oneindia Kannada

ಮೆಲ್ಬೋರ್ನ್, ಜ. 29: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಅವರು ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಶುಕ್ರವಾರ ಗೆದ್ದುಕೊಂಡಿದ್ದಾರೆ.

ಮೆಲ್ಬೋರ್ನ್ ಪಾರ್ಕಿನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಇಂಡೋ-ಸ್ವಿಸ್ ಜೋಡಿ ಜೆಕ್ ರಿಪಬ್ಲಿಕ್ ನ ಆಂಡ್ರ್ಯೂ ಹ್ಲವಕೋವಾ-ಲೂಸಿ ಹ್ರಾಡೆಕಾ ಅವರನ್ನು 7-6,6-3 ನೇರ ಸೆಟ್ ಗಳಿಂದ ಸೋಲಿಸಿತು.

Sania Mirza and Martina Hingis win Australian Open title

ವಿಶ್ವದ ನಂ.1 ಡಬಲ್ಸ್ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಅವರು ಸತತ 36ನೇ ಗೆಲುವು ಸಾಧಿಸಿದ್ದಾರೆ. ಬುಧವಾರ ನಡೆದ ಸೆಮಿಫೈನಲ್ ನಲ್ಲಿ ಜರ್ಮನಿ-ಜೆಕ್ ಜೋಡಿ ಜೂಲಿಯಾ ಜಾರ್ಜಸ್ ಹಾಗೂ ಕೆರೋಲಿನಾ ಪ್ಲಿಸ್ಕೋವಾರನ್ನು 6-1,6-0ರಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದ ಸಾನಿಯಾ-ಮಾರ್ಟಿನಾ ತಮ್ಮ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ಸತತ 8ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಸಾನಿಯಾ ಮಿರ್ಜಾ ಅವರಿಗೆ ಇದು ಮೊದಲ ಆಸ್ಟ್ರೇಲಿಯನ್ ಓಪನ್ ಫೈನಲ್ ಆಗಿದೆ. 2012ರಲ್ಲಿ ರಷ್ಯಾದ ಎಲೆನಾ ವೆಸ್ನಿನಾರೊಂದಿಗೆ ಸೆಮಿಫೈನಲ್ ತಲುಪಿದ್ದು ಇವರ ಸಾಧನೆಯಾಗಿತ್ತು. ಈಗ ಈ ಸಾಧನೆಯನ್ನು ಉತ್ತಮಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sania Mirza and Martina Hingis continued their winning march as they pocketed the Australian Open women's doubles title today(Jan.29) at the Melbourne Park.
Please Wait while comments are loading...