ಸಾನಿಯಾ- ಮಾರ್ಟಿನಾರಿಂದ ಸತತ ಗೆಲುವು, ವಿಶ್ವದಾಖಲೆ

Posted By:
Subscribe to Oneindia Kannada

ಸಿಡ್ನಿ, ಜ.14: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಅವರ ಗೆಲುವಿನ ನಾಗಾಲೋಟ ಮುಂದುವರೆದಿದೆ. ಕಳೆದ ವರ್ಷ ದಾಖಲೆಯ ವಿಜಯೋತ್ಸವವನ್ನು ಈ ವರ್ಷವೂ ಮುಂದುವರೆಸಿದ್ದಾರೆ. ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಗೆಲ್ಲುವ ಮೂಲಕ ಸತತ 29ನೇ ಗೆಲುವು ಸಾಧಿಸಿ ವಿಶ್ವ ದಾಖಲೆ ಬರೆದಿದ್ದಾರೆ.

ಸಿಡ್ನಿಯಲ್ಲಿ ಬುಧವಾರ ನಡೆದ ಮಹಿಳೆಯರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಾನಿಯಾ ಹಾಗೂ ಮಾರ್ಟಿನಾ ಚೀನಾದ ಚೆನ್ ಲಿಯಾಂಗ್ ಹಾಗೂ ಶುವಾಯಿ ಪೆಂಗ್‌ರನ್ನು ನೇರ ಸೆಟ್‌ಗಳಿಂದ ಮಣಿಸಿ ಸುದೀರ್ಘ ಗೆಲುವಿನ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು.

Sania Mirza and Martina Hingis set record with 29th consecutive win

ಸತತ 28ನೇ ಗೆಲುವು ದಾಖಲಿಸಿರುವ ಸಾನಿಯಾ ಹಾಗೂ ಹಿಂಗಿಸ್ 1994ರಲ್ಲಿ ಪೋರ್ಟರಿಕದ ಗಿಗಿ ಫೆರ್ನಾಂಡಿಸ್ ಹಾಗೂ ಬೆಲಾರಿಸ್‌ನ ನಟಾಶಾ ಝ್ವೆರೇವಾ ನಿರ್ಮಿಸಿದ್ದ ವಿಶ್ವ ದಾಖಲೆಯ ಸಾಧನೆಯನ್ನು ಸರಿಗಟ್ಟಿದರುಗುರುವಾರದಂದು ಮತ್ತೊಂದು ಜಯ ದಾಖಲಿಸಿ ವಿಶ್ವದಾಖಲೆಯನ್ನು ಮುರಿದಿದ್ದಾರೆ.

ಕೋರ್ಟ್ ನಂಬರ್ 1ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರೋಮಾನಿಯನ್ ರಲುಕಾ ಒಲಾರು ಹಾಗೂ ಕಜಕಿಸ್ತಾನದ ಯರುಸ್ಲಾವಾ ಶ್ವೆಡೊವಾ ವಿರುದ್ಧ ಇಂಡೋ ಸ್ವಿಸ್ ಜೋಡಿ 4-6, 6-3, 10-8ರಲ್ಲಿ ಜಯ ದಾಖಲಿಸಿದೆ.(ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Top ranked Sania Mirza and Martina Hingis survived a scare to win their 29th consecutive match as a pair here on Thursday, and set a record for most wins in a row in women's doubles.
Please Wait while comments are loading...