ಬ್ರಿಸ್ಬೇನ್ ಡಬಲ್ಸ್ ಗೆದ್ದರೂ ಸಾನಿಯಾ ನಂ.1 ಪಟ್ಟದಿಂದ ವಂಚಿತೆ

Posted By:
Subscribe to Oneindia Kannada

ಬ್ರಿಸ್ಬೇನ್, ಜನವರಿ 08: ಭಾರತದ ಹೆಮ್ಮೆಯ ಟೆನಿಸ್ ಪಟು ಸಾನಿಯಾ ಮಿರ್ಜಾ ಅವರು ವರ್ಷಾರಂಭದಲ್ಲೇ ಡಬಲ್ಸ್ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದ್ದಾರೆ. ಅದರೆ, ಈ ಸಂಭ್ರಮದ ಜತೆಗೆ ವಿಶ್ವದ ನಂ.1 ಪಟ್ಟವನ್ನು ಕಳೆದುಕೊಂಡಿರುವುದು ಅಭಿಮಾನಿಗಳಿಗೆ ನಿರಾಶೆ ತಂದಿದೆ.

ಸತತ 91 ವಾರಗಳ ಬಳಿಕ ವಿಶ್ವ ನಂ. 1 ಪಟ್ಟ ಹೊಂದಿದ್ದ ಸಾನಿಯಾ ಅವರು ಅಂಕಗಳ ಆಧಾರದ ಮೇಲೆ ನಂ.1 ಸ್ಥಾನದಿಂದ ಕೆಳಗಿಳಿದಿದ್ದಾರೆ. ಆದರೆ, ಸಾನಿಯಾ ಮಿರ್ಜಾ ಅವರು ತಮ್ಮ ವೃತ್ತಿಜೀವನದ 41ನೇ ಡಬಲ್ಸ್ ಪ್ರಶಸ್ತಿ ಗೆಲುವು ಕಂಡಿದ್ದಾರೆ.

ಬ್ರಿಸ್ಬೇನ್ ಇಂಟರ್​ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್​ನಲ್ಲಿ ಅಮೆರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಜತೆಗೂಡಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದಾರೆ. [ಸಿನ್ಸಿನಾಟಿಯಲ್ಲಿ ನಂ. 1 ಪಟ್ಟಕ್ಕೇರಿದ ಸಾನಿಯಾ]

Sania Mirza loses World No. 1 rank despite winning title in Brisbane

ಅಗ್ರ ಶ್ರೇಯಾಂಕಿತ ಸಾನಿಯಾ-ಬೆಥನಿ ಜೋಡಿ ಶನಿವಾರ ನಡೆದ ಅಂತಿಮ ಹಣಾಹಣಿಯಲ್ಲಿ ರಷ್ಯಾದ ಎಕಟರೀನಾ ಮಕರೊ ವಾ-ಎಲೆನಾ ವೆಸ್ನಿನಾ ಜೋಡಿಯನ್ನು 6-2, 6-3 ನೇರ ಸೆಟ್​ಗಳಿಂದ ಸೋಲಿಸಿತು.

ಶ್ರೇಯಾಂಕ ಕಳೆದುಕೊಂಡಿದ್ದು ಏಕೆ?: ಟೆನಿಸ್ Ranking ನಿಯಮವೇ ಸಾನಿಯಾಗೆ ಮುಳುವಾಗಿದೆ. ಇದರನ್ವಯ ಹಾಲಿ ಚಾಂಪಿಯನ್​ಗೆ 2ನೇ ಬಾರಿ ಪ್ರಶಸ್ತಿ ಗೆದ್ದಾಗ ಹಿಂದಿನ ವರ್ಷದ ಶ್ರೇಯಾಂಕವನ್ನು ಅಂಕ ಉಳಿಸಿಕೊಳ್ಳುವ ಅವಕಾಶ ಮಾತ್ರ ಇರುತ್ತದೆ.

ಕಳೆದ ವರ್ಷ ಹಿಂಗಿಸ್ ಜತೆಗೂಡಿ ಟೂರ್ನಿಯ ಪ್ರಶಸ್ತಿ ಜಯಿಸಿದ್ದ ಸಾನಿಯಾ ಬ್ರಿಸ್ಬೇನ್​ನಲ್ಲಿ ಹಾಲಿ ಚಾಂಪಿಯನ್ ಆಗಿ ಅಭಿಯಾನ ಆರಂಭಿಸಿ ಒಟ್ಟಾರೆ 2,960 ಅಂಕಗಳನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಮುಂದಿನ ಸಿಡ್ನಿ ಓಪನ್​ನಲ್ಲಿ ಸಾನಿಯ ಮತ್ತೆ ಸ್ಟ್ರೈಕೋವಾ ಜತೆ ಆಡಲಿದ್ದಾರೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian tennis ace Sania Mirza clinched her first title of the season with American partner Bethanie Mattek-Sands by winning the Brisbane International women's doubles title here on Saturday (January 7).
Please Wait while comments are loading...