ಸಾನಿಯಾ ಮಿರ್ಜಾ ಜೀವನ ಚರಿತ್ರೆ ಸೆಲೆಬ್ರಿಟಿಗಳಿಂದ ಅನಾವರಣ

Posted By:
Subscribe to Oneindia Kannada

ಮುಂಬೈ, ಜುಲೈ 13: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ 'ಏಸ್ ಅಗೇನ್​ಸ್ ಆಡ್ಸ್' ಜೀವನ ಚರಿತ್ರೆ ಪುಸ್ತಕವನ್ನು ಕಿಂಗ್ ಖಾನ್ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರು ಅನಾವರಣಗೊಳಿಸುತ್ತಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಬುಧವಾರ ಬಿಡುಗಡೆಗೊಳಿಸಲಿದ್ದಾರೆ. 29 ವರ್ಷದ ಸಾನಿಯಾ ಹಾಗೂ ಅವರ ತಂದೆ ಇಮ್ರಾನ್ ಮಿರ್ಜಾ ಅವರು ಈ ಪುಸ್ತಕವನ್ನು ಬರೆದಿದ್ದಾರೆ.

ಅಧಿಕೃತವಾಗಿ ಒಂದು ವಾರದ ಹಿಂದೆಯೇ ಈ ಪುಸ್ತಕ ಅನಾವರಣಗೊಂಡಿದೆ. ಆದರೆ, ಸೆಲೆಬ್ರಿಟಿಗಳಿಂದ ಪುಸ್ತಕವನ್ನು ಮತ್ತೊಮ್ಮೆ ಅನಾವರಣಗೊಳಿಸಿ ಹೆಚ್ಚಿನ ಪ್ರಚಾರವನ್ನು ನೀಡಲಾಗುತ್ತಿದೆ.

Sania Mirza brings Shah Rukh Khan, Salman Khan together to launch her book

ಹೈದರಾಬಾದ್​ನಲ್ಲಿ ಪುಟ್ಟ ಬಾಲಕಿಯಾಗಿದ್ದ ದಿನಗಳಿಂದ, ಯೂಸುಫ್ ಗಡ್ ದ ಕಾಲೇಜಿನ ವಿದ್ಯಾರ್ಥಿ ಜೀವನ ನಂತರ ವಿಶ್ವ ನಂ. 1 ಆಟಗಾರ್ತಿಯಾಗಿ ಬೆಳೆದಿದ್ದು ಎಲ್ಲವನ್ನು ಈ ಪುಸ್ತಕ ಹೊಂದಿದೆ. ಸಾನಿಯಾರ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಹಲವು ವಿಶಿಷ್ಟ, ಕುತೂಹಲಕಾರಿ ವಿಷಯಗಳನ್ನು ಈ ಪುಸ್ತಕ ಹೊಂದಿದೆ. ಅಪ್ಪ-ಮಗಳು ಸೇರಿ ಸುಮಾರು 5 ವರ್ಷಗಳ ನಂತರ ಪುಸ್ತಕ ಬರೆದು ಮುಗಿಸಿದ್ದಾರೆ.

ಹಾರ್ಪರ್ ಕಾಲಿನ್ಸ್ ಪುಸ್ತಕದ ಪ್ರಕಾಶಕರಾಗಿರುವ ಈ ಪುಸ್ತಕವನ್ನು ಜುಲೈ 17ರಂದು ಮುಂಬೈನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ಲೋಕಾರ್ಪಣೆ ಮಾಡಲಿದ್ದಾರೆ. ನಂತರ
ಪರಿಣಿತಿ ಚೋಪ್ರಾ , ನಿರ್ದೇಶಕಿ ಫರ್ಹಾ ಖಾನ್ ಅವರು ಕೂಡಾ ಪುಸ್ತಕಕ್ಕೆ ಪ್ರಚಾರ ನೀಡಲಿದ್ದಾರೆ.

238 ಪುಟಗಳ ಈ ಪುಸ್ತಕದ ಬೆಲೆ 290 ರು ಇರುವ ಏಸ್ ಅಗೇನ್​ಸ್ ಆಡ್ಸ್ ಸದ್ಯಕ್ಕೆ ಅನೇಕ ಪುಸ್ತಕ ಮಳಿಗೆಗಳು ಹಾಗೂ ಆನ್​ಲೈನ್​ ನಲ್ಲಿ ಖರೀದಿಗೆ ಲಭ್ಯವಾಗಿದೆ. (ಎಎನ್ ಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ace tennis player Sania Mirza has invited both Shah Rukh Khan and Salman Khan to unveil her highly-awaited autobiography titled ' Ace Against Odds', which she has co-authored with her father Imran Mirza. The 238-page autobiography contains 40 chapters.
Please Wait while comments are loading...