ಕಂಚು ವಿಜೇತೆ ಸಾಕ್ಷಿ ಮಲಿಕ್ ವರಿಸಲಿದ್ದಾರೆ ಈ ಕುಸ್ತಿ ಪಟು!

Posted By:
Subscribe to Oneindia Kannada

ರೋಹ್ಟಕ್, ಸೆಪ್ಟೆಂಬರ್, 06 : ರಿಯೋ ಒಲಂಪಿಕ್ಸ್ 2016ರಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಈ ವರ್ಷವೇ ತಾವು ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ಆದರೆ, ಭಾವಿ ಪತಿಯ ಹೆಸರನ್ನು ಮಾತ್ರ ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ತಾವು ಕೈಹಿಡಿಯಲಿರುವ ಹುಡುಗನ ಹೆಸರು ಬಹಿರಂಗ ಪಡಿಸಿದ್ದಾರೆ.

ಕಳೆದ ಬಾರಿಯ ಕಾಮನ್‌ವೆಲ್ತ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದ ಸತ್ಯವ್ರತ್ ಎಂದು ಹೇಳುವ ಮೂಲಕ ಎಲ್ಲ ಕುತೂಹಲಗಳಿಗೆ ಸಾಕ್ಷಿ ತೆರೆ ಎಳೆದರು. 23 ವರ್ಷದ ಸಾಕ್ಷಿ ತಮಗಿಂತ ಎರಡು ವರ್ಷ ಚಿಕ್ಕವನಾಗಿರುವ ತಮ್ಮದೇ ರಾಜ್ಯದ ಕುಸ್ತಿಪಟು ಸತ್ಯವ್ರತ್ ಕಾದಿಯಾನ್ ಅವರನ್ನು ಕಳೆದ ಹಲವು ದಿನಗಳಿಂದ ಪ್ರೀತಿಸುತ್ತಿದ್ದಾರೆ.

Sakshi Malik to get married to Rohtak-based wrestler Satyawart Kadian

ಸತ್ಯವ್ರತ್ ತಂದೆ ಸತ್ಯವಾನ್ ಅರ್ಜುನ್ ಪ್ರಶಸ್ತಿ ಪುರಸ್ಕೃತ ಕುಸ್ತಿಪಟುವಾಗಿದ್ದು, ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಕುಸ್ತಿ ಶಾಲೆಯನ್ನು ನಡೆಸುತ್ತಿದ್ದಾರೆ.

ಅವರು ಸಹ ತಮ್ಮ ಮಗ ಸಾಕ್ಷಿ ಜತೆ ಸಪ್ತಪದಿ ತುಳಿಯಲಿರುವುದನ್ನು ಒಪ್ಪಿಕೊಂಡಿದ್ದಾರೆ. 2014 ರ ಕಾಮನ್‌ವೆಲ್ತ್ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸತ್ಯವ್ರತ್ ಅದೇ ವರ್ಷ ಏಶಿಯನ್ ಚಾಂಪಿಯನ್ ಶಿಪ್‌ನಲ್ಲಿ ಕೂಡ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಸಾಕ್ಷಿ ಮತ್ತು ಸತ್ಯವ್ರತ್ ಒಂದೇ ಕುಸ್ತಿ ಶಾಲೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾಗ ಪರಿಚಯ ಸ್ನೇಹವಾಗಿ ಬೆಳೆದು, ಬಳಿಕ ಪ್ರೀತಿಗೆ ತಿರುಗಿದೆ. ಸದ್ಯದಲ್ಲಿಯೇ ಅವರು ಸತಿಪತಿಗಳಾಗಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Sakshi Malik to get married
English summary
After stealing the entire nation's heart at the Rio Olympic Games recently by winning the bronze medal, wrestler Sakshi Mailk, 24, is getting married to a man who is two years younger than her, it has been revealed.
Please Wait while comments are loading...