ಕುಸ್ತಿ ಪಟು ಸಾಕ್ಷಿ ಕೈಹಿಡಿಯಲಿರುವ ಆ ಕುಸ್ತಿ ಪಟು ಯಾರು?

By: ಕ್ರೀಡಾ ಡೆಸ್ಕ್
Subscribe to Oneindia Kannada

ನವದೆಹಲಿ, ಆಗಸ್ಟ್ 28: ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕ ಗೆದ್ದು ಕೊಟ್ಟ ಸಾಕ್ಷಿ ಮಲಿಕ್ ಗೆ ಕಂಕಣಭಾಗ್ಯ ಕೂಡಿ ಬಂದಿದೆ. ಸಾಕ್ಷಿ ಅವರು ಇದೇ ವರ್ಷ ಹಸೆಮಣೆ ಏರಲಿದ್ದಾರೆ. ಈ ಬಗ್ಗೆ ಸ್ವತಃ ಸಾಕ್ಷಿ ಕೂಡಾ ಸುಳಿವು ನೀಡಿದ್ದರು.

ಸಾಕ್ಷಿ ಮಲಿಕ್ ಅವರೇ ತಮ್ಮ ಮದುವೆ ವಿಷಯದ ಬಗ್ಗೆ ಸುದ್ದಿಗಾರರಿಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ನಾನು ಈ ವರ್ಷವೇ ಮದುವೆಯಾಗಲಿದ್ದೇನೆ, ಆದರೆ, ನಾನು ವರಿಸಲಿರುವ ವರ ಯಾರು, ಆತನ ಬಗ್ಗೆ ಕೇಳಬೇಡಿ. ಅವರೂ ಕೂಡ ನನ್ನ ಹಾಗೆಯೇ ವೃತ್ತಿಯಲ್ಲಿದ್ದಾರೆದ್ದಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು. [ರಿಯೋ ಒಲಿಂಪಿಕ್ಸ್ ಸಾಧಕರಿಗೆ ಖೇಲ್ ರತ್ನ ಪ್ರಶಸ್ತಿ]

Sakshi Malik, Rio 2016 Medallist, To Get Married This Year

ಸಾಕ್ಷಿ ಹೇಳುವಂತೆ ನಾನು ಮದುವೆ ಆಗುವವರು ನನ್ನ ಹಾಗಯೇ ಆಗಿದ್ದಾರೆ ಎಂದು ಹೇಳುವ ಮೂಲಕ ಸಣ್ಣ ಸುಳಿವು ಕೊಟ್ಟಿದ್ದಾರೆ. ಅಂದರೆ ಸಾಕ್ಷಿ ಕೈಹಿಡಿಯಲಿರುವ ವರ ಸಹ ಕುಸ್ತಿ ಪಟು ಆಗಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಮದುವೆಯ ನಂತರವೂ ನಾನು ಕುಸ್ತಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವುದಾಗಿಯೂ ತಿಳಿಸಿದರು.[ಕುಸ್ತಿ: ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

ರಿಯೋ ಒಲಿಂಪಿಕ್ ನಲ್ಲಿ 58 ಕೆ.ಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಸಾಕ್ಷಿ ಮಲಿಕ್ ಅವರ ಕೈಹಿಡಿಯುವ ಗಂಡು ಯಾರು ಎಂಬುವುದು ಈಗ ಕುತೂಹಲ ಕೆರಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sakshi Mailik is going to get married this year but did not reveal the name of wrestler. "I am going to get married this year. However, I can't reveal the name of my would-be husband. That's a secret. He is wrestler," Sakshi told Anandabazar Patrika.
Please Wait while comments are loading...