ಕುಸ್ತಿಪಟು ಸತ್ಯವ್ರತ್ ಜೊತೆ ಸಾಕ್ಷಿ ಮಲಿಕ್ ನಿಶ್ಚಿತಾರ್ಥ

Written By: Ramesh
Subscribe to Oneindia Kannada

ನವದೆಹಲಿ, ಅಕ್ಟೋಬರ್. 17 : ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಹೆಮ್ಮೆಯ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಭಾನುವಾರ ಪ್ರಿಯತಮ ಸತ್ಯವ್ರತ್ ಕದಿಯನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು.

ರೋಹ್ಟಕ್ ನಲ್ಲಿರುವ ಸಾಕ್ಷಿ ಮಲಿಕ್ ಅವರ ನಿವಾಸದಲ್ಲಿ ಭಾನುವಾರ ನಡೆದ ಸರಳ ನಿಶ್ವಿತಾರ್ಥ ಸಮಾರಂಭದಲ್ಲಿ ಇಬ್ಬರು ಉಂಗುರ ಬದಲಾಯಿಸಿಕೊಂಡರು. ಈ ವೇಳೆ ಎರಡು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. [ಕಂಚು ವಿಜೇತೆ ಸಾಕ್ಷಿ ಮಲಿಕ್ ವರಿಸಲಿದ್ದಾರೆ ಈ ಕುಸ್ತಿ ಪಟು!]

Sakshi Malik

ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದರಿಂದ ಕುಟುಂಬದವರಿಗೆ ಬಿಟ್ಟು ಬೇರೆ ಯಾರಿಗೂ ಅಹ್ವಾನ ನೀಡಿಲ್ಲ. ಕೇವಲ ಕುಟುಂಬದವರು ಮಾತ್ರ ಭಾಗವಹಿಸಿದ್ದು. ನಿಶ್ಚಿತಾರ್ಥ ಸಮಾರಂಭ ಬಹಳ ಚೆನ್ನಾಗಿ ನಡೆದಿದೆ ಎಂದು ಸತ್ಯವ್ರತ್ ಅವರ ತಂದೆ ಅರ್ಜುನ್‌ ಪ್ರಶಸ್ತಿ ಪುರಸ್ಕೃತ ಸತ್ಯವಾನ್ ಪೆಹ್ವಾನ್ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.

ಸತ್ಯವ್ರತ್ ಅವರನ್ನು ಪ್ರೀತಿಸುತ್ತಿರುವುದಾಗಿ ಸಾಕ್ಷಿ ಈ ಹಿಂದೆಯೇ ಹೇಳಿಕೊಂಡಿದ್ದರು. 24 ವರ್ಷದ ಸಾಕ್ಷಿ ಮಲಿಕ್ ಭಾವಿ ಪತಿ ಸತ್ಯವ್ರತ್ ಅವರಿಗಿಂತ 2 ವರ್ಷ ದೊಡ್ಡವರಾಗಿದ್ದಾರೆ.

22 ರ ಹರೆಯದ ಸತ್ಯವ್ರತ್, 2010 ರ ಯೂತ್ ಒಲಿಂಪಿಕ್ಸ್ ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಕುಸ್ತಿ ತರಬೇತಿಯಲ್ಲಿ ಸಾಕ್ಷಿ ಹಾಗೂ ಸತ್ಯವೃತ್ ಪರಸ್ಪರ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio Olympic medallist Sakshi Malik on Sunday (Oct 16) got engaged to wrestler boyfriend Satyawart Kadian at her residence in Rohtak.
Please Wait while comments are loading...