ಸಿಂಗಾಪುರ ಸೂಪರ್ ಸೀರಿಸ್: ಸೈನಾ ಔಟ್, ಸಿಂಧು ಮೇಲೆ ನಿರೀಕ್ಷೆ

Posted By:
Subscribe to Oneindia Kannada

ಸಿಂಗಾಪುರ, ಏಪ್ರಿಲ್ 11 : ಲಂಡನ್ ಒಲಿಂಪಿಕ್ ಕಂಚು ವಿಜೇತೆ ಭಾರತದ ಸ್ಟಾರ್ ಶೆಟ್ಲರ್ ಸೈನಾ ನೆಹ್ವಾಲ್ ಮಂಗಳವಾದಿಂದ (ಏಪ್ರಿಲ್ 11) ಆರಂಭಗೊಳ್ಳುತ್ತಿರುವ ಸಿಂಗಾಪುರ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ನಿಂದ ಹಿಂದೆ ಸರಿದಿದ್ದಾರೆ.

ಹೀಗಾಗಿ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಮೇಲೆ ಈ ಟೂರ್ನಿಯಲ್ಲಿ ಅಪಾರ ನಿರೀಕ್ಷೆ ಇಡಲಾಗಿದೆ.[ಇಂಡಿಯನ್ ಓಪನ್ : ಸೈನಾ ನೆಹ್ವಾಲ್ ವಿರುದ್ಧ ಸಿಂಧುಗೆ ಭರ್ಜರಿ ಜಯ]

Saina Nehwal withdraws, PV Sindhu hoping for better show at Singapore Super Series

ಇಂಡಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದು ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕ್ಕೇರಿರುವ ಸಿಂಧುಗೆ ಜಪಾನ್‌ನ ನೊಜೊಮಿ ಒಕುಹರಾ ಸವಾಲು ಎದುರಾಗಲಿದೆ.[ಶೈನಿಂಗ್ 'ಸಿಂಧು' ಇಂಡಿಯನ್ ಓಪನ್ ಫೈನಲ್]

ಬಿಡುವಿಲ್ಲದ ವೇಳಾಪಟ್ಟಿಯಿಂದ ಬಳಲಿರುವ ಸೈನಾ, ಮುಂಬರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಗೆ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಸೈನಾ ಈ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
London Olympic bronze medallist Saina Nehwal pulled out of the USD 350,000 Singapore Super Series to spend more time in training to improve her game ahead of the hectic international circuit.
Please Wait while comments are loading...