ಸೈನಾ ನೆಹ್ವಾಲ್ ಮುಡಿಗೆ ಮಲೇಷ್ಯಾ ಮಾಸ್ಟರ್ ಗ್ರ್ಯಾನ್ ಪ್ರೀ ಗ್ಗೋಲ್ಡ್

Written By: Ramesh
Subscribe to Oneindia Kannada

ಸರಾವಕ್, (ಮಲೇಷ್ಯಾ), ಜನವರಿ. 22 : ಭಾರತದ ಸ್ಟಾರ್ ಶೆಟ್ಲರ್ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಗೋಲ್ಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಭಾನವಾರ ನಡೆದ ಫೈನಲ್ ಪಂದ್ಯದಲ್ಲಿ ಥೈಲ್ಯಾಂಡ್ ನ ಆಟಗಾರ್ತಿ ಪೊರ್ನಪವೀ ಚಚೊವ್ ವುಂಗ್ ಎದುರು 22-20,22,20 ಸೆಟ್ ಗಳಿಂದ ಭರ್ಜರಿ ಗೆಲುವು ಪಡೆದುಕೊಂಡರು. ಈ ಮೂಲಕ ಈ ವರ್ಷದ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

Saina Nehwal wins Malaysian Masters Grand Prix Gold

ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮೊದಲ ಮಹತ್ವದ ಟೂರ್ನಿ ಆಡುತ್ತಿರುವ ಸೈನಾ ಶನಿವಾರ ನಡೆದ ಸೆಮಿಫೈನಲ್ ನಲ್ಲಿ 21-13, 21-10ರಲ್ಲಿ ಯಿಪ್ ಪುಯಿ ಯಿನ್ ಎದುರು ಸುಲಭ ಗೆಲುವು ಪಡೆದು ಫೈನಲ್ ಪ್ರವೇಶಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian badminton ace Saina Nehwal notched up her first title after a career-threatening injury by claiming the Malaysia Masters Grand Prix Gold with a hard-fought victory in the summit clash here on Sunday.
Please Wait while comments are loading...