ನಿವೃತ್ತಿಯ ಸುಳಿವು ನೀಡಿದ ಬಾಡ್ಮಿಂಟನ್ ತಾರೆ ಸೈನಾ!

Posted By:
Subscribe to Oneindia Kannada

ನವದೆಹಲಿ, ನವೆಂಬರ್ 03: ಮೊಣಕಾಲಿಗೆ ಸರ್ಜರಿ ಮಾಡಿಸಿಕೊಂಡು ಮತ್ತೆ ಬಾಡ್ಮಿಂಟನ್ ಅಂಗಳಕ್ಕೆ ಕಾಲಿಟ್ಟಿರುವ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಚೀನಾ ಸೂಪರ್ ಸರಣಿಯಲ್ಲಿ ಆಡುವ ಮೂಲಕ ಬ್ಯಾಡ್ಮಿಂಟನ್ ಕಣಕ್ಕೆ ವಾಪಸಾಗಲು ಸಜ್ಜಾಗುತ್ತಿದ್ದಾರೆ. ಆದರೆ, ಈ ಸೂಪರ್ ಸರಣಿಯೇ ತನ್ನ ಕೊನೆಯ ಸರಣಿ ಆಗುವ ಸಾಧ್ಯತೆಯಿದೆ ಎಂದು ಹೇಳುವ ಮೂಲಕ ಎಲ್ಲರ ಹು್ಬೇರುವಂತೆ ಮಾಡಿದ್ದಾರೆ.

ನ.15 ರಿಂದ ಚೀನಾ ಸೂಪರ್ ಸರಣಿ ಆರಂಭವಾಗಲಿದೆ. ರಿಯೋ ಒಲಿಂಪಿಕ್ಸ್‌ನ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 26 ವರ್ಷ ವಯಸ್ಸಿನ ಸೈನಾ ಅವರು ಸಂಪೂರ್ಣ ಫಿಟ್ನೆಸ್ ಹೊಂದಿಲ್ಲ. ನವೆಂಬರ್ 6 ರಿಂದ 11 ರ ತನಕ ನಿಗದಿಯಾಗಿರುವ ಐಒಸಿ ಅಥ್ಲೀಟ್ ಆಯೋಗದ ಸಭೆಗೂ ಸೈನಾ ಹಾಜರಾಗುತ್ತಿಲ್ಲ. ನವೆಂಬರ್ 15 ರಿಂದ 20ರ ತನಕ ಚೀನಾ ಸೂಪರ್ ಸರಣಿ ಹಾಗೂ ನವೆಂಬರ್ 22ರಿಂದ 27ರ ತನಕ ಹಾಂಗ್ ಕಾಂಗ್ ಓಪನ್ ಸೂಪರ್ ಸರಣಿ ನಿಗದಿಯಾಗಿದೆ.

Saina Nehwal feels that her Badminton career may be coming to end

'ನಾನು ಕಠಿಣ ಶ್ರಮಪಡುತ್ತಿರುವೆ. ಗೆಲುವು ಅಥವಾ ಸೋಲಿನ ಬಗ್ಗೆ ಯೋಚಿಸುತ್ತಿಲ್ಲ. ಆದರೆ, ನನ್ನ ಹೃದಯಾಂತರದಲ್ಲಿ ಚೀನಾ ಸೂಪರ್ ಸರಣಿಯಲ್ಲಿ ವೃತ್ತಿಜೀವನ ಕೊನೆಯಾಗಲಿದೆ ಎಂಬ ಭಾವನೆ ಉಂಟಾಗುತ್ತಿದೆ ಎಂದು 2012ರ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಹೇಳಿದ್ದಾರೆ.

ನನ್ನ ವೃತ್ತಿಜೀವನ ಕೊನೆಗೊಂಡಿತು. ಮತ್ತೆ ವಾಪಸಾಗಲಾರೆ ಎಂದು ಹಲವಾರು ಮಂದಿ ಯೋಚಿಸಿದ್ದರು. ಚೀನಾ ಸರಣಿ ನನ್ನ ವೃತ್ತಿಜೀವನದ ಕೊನೆಯ ಸರಣಿ ಎಂದು ನನ್ನ ಅಂತರಾತ್ಮ ಹೇಳುತ್ತಿದೆ. ಮುಂದೇನಾಗುತ್ತದೆ ಎಂದು ಮೊದಲೇ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ನಾನು ಮುಂದಿನ ಒಂದು ವರ್ಷದ ಬಗ್ಗೆ ಯೋಚಿಸುವೆ ಎಂದು ಸೈನಾ ಹೇಳಿದರು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ace Indian shuttler Saina Nehwal who is on a comeback trail after undergoing a knee surgery has set her eyes for a return at the China Super Series Premier starting November 15, but the 26-year-old feels that her badminton career may be coming to an end.
Please Wait while comments are loading...