ಸೈನಾಗೆ ಅಚ್ಚರಿಯ ಸೋಲು, ಪದಕದ ಆಸೆ ಮತ್ತೆ ಟುಸ್

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 14: ರಿಯೋದಲ್ಲಿ ಪದಕ ಗೆಲ್ಲುವ ಕುದುರೆ ಎನಿಸಿದ್ದ ಅಗ್ರ ಶ್ರೇಯಾಂಕಿತ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಲೀಗ್ ಹಂತದ ಪಂದ್ಯದಲ್ಲಿ ಕಡಿಮೆ ಶ್ರೇಯಾಂಕಿತ ಆಟಗಾರ್ತಿ ಎದುರು ಅಚ್ಚರಿಯ ಸೋಲು ಕಂಡಿದ್ದಾರೆ. ಈ ಮೂಲಕ ಭಾರತದ ಪದಕ ಗೆಲ್ಲುವ ಆಸೆಗೆ ತಣ್ಣೀರೆರಚಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಲಂಡನ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ನೆಹ್ವಾಲ್ ಮೇಲೆ ಸಹಜವಾಗಿ ನಿರೀಕ್ಷೆ ದೊಡ್ಡ ಮಟ್ಟದಲ್ಲಿತ್ತು. ಆದರೆ, ರಿಯೋ ಒಲಿಂಪಿಕ್ಸ್​ನ ಲೀಗ್ ಹಂತದಲ್ಲೇ ಸೈನಾ ಸೋತು ನಿರ್ಗಮಿಸಿದ್ದಾರೆ.

Saina Nehwal

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಜಿ ಗುಂಪಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ಅವರು ಉಕ್ರೇನ್​ನ ಮರಿಯಾ ಉಲಿಟಿನಾ ವಿರುದ್ಧ ಸೋಲ=ಲು ಕಂಡಿದ್ದಾರೆ.

ಸೈನಾ 18-21, 19-21 ನೇರ ಗೇಮ್ ಗಳಿಂದ ಸೋಲನುಭವಿಸುವ ಮೂಲಕ ಪದಕದ ರೇಸ್​ನಿಂದ ಹೊರಬಿದ್ದಿದ್ದಾರೆ. ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್​ನಲ್ಲಿ ಭಾರತದ ಪಿ.ವಿ. ಸಿಂಧು ಭಾನುವಾರ ಕೆನಡಾ ಲೀ ಮಿಷಲ್ ಅವರನ್ನು ಎದುರಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sania Mirza and Rohan Bopanna suffered a sudden mid-match slump to fritter away a great opportunity as they lost the mixed doubles semifinal from a position of strength to Americans Venus Williams and Rajeev Ram here today.
Please Wait while comments are loading...