ಬಾಡ್ಮಿಂಟನ್ : ಭಾರತದ ಸೈನಾ ನೆಹ್ವಾಲ್ ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ

Posted By:
Subscribe to Oneindia Kannada

ಸಿಡ್ನಿ, ಜೂನ್ 12: ಭಾರತದ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಮತ್ತೊಂದು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ, ಚೀನಾದ ಎದುರಾಳಿಯನ್ನು ಸೋಲಿಸಿ ಮಹಿಳೆಯರ ಆಸ್ಟ್ರೇಲಿಯನ್ ಓಪನ್ ಬಾಡ್ಮಿಂಟನ್ ಸೂಪರ್ ಸೀರಿಸ್ ನಲ್ಲಿ ಭಾನುವಾರ ಗೆಲುವು ಸಾಧಿಸಿದ್ದಾರೆ.

750,000 ಡಾಲರ್ ಮೊತ್ತದ ಪ್ರಶಸ್ತಿಯೊಂದಿಗೆ ಸೈನಾ ಅವರು ವಿಜಯೋತ್ಸವ ಆಚರಿಸಿದ್ದಾರೆ.ವಿಶ್ವದ ನಂ 8 ಆಟಗಾರ್ತಿ ಸೈನಾ ಅವರು ಅಂತಿಮ ಹಣಾಹಣಿಯಲ್ಲಿ ಚೀನಾದ ಸನ್ ಯು ವಿರುದ್ಧ ಗೆಲುವು ಸಾಧಿಸಿದರು. ['ಸೈನಾ' ವೃತ್ತಿ ಜೀವನ ಸಾಧನೆ ಕಿರುನೋಟ]

Saina Nehwal

ಆದರೆ, ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಆರಂಭಿಕ ಸೆಟ್ 11-21ರಲ್ಲಿ ಕಳೆದುಕೊಂಡ ಸೈನಾ ಮುಂದಿನ ಎರಡು ಸೆಟ್ ಗಳನ್ನು 21-14, 21-19ರಂತೆ ಗೆದ್ದುಕೊಂಡು ಚಾಂಪಿಯನ್ ಎನಿಸಿಕೊಂಡರು, ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಸೂಪರ್ ಸೀರಿಸ್ ಗೆದ್ದುಕೊಂಡರು.


26 ವರ್ಷ ವಯಸ್ಸಿನ ಸೈನಾ ನೆಹ್ವಾಲ್ ಅವರು ಒಟ್ಟಾರೆ ಏಳು ಸೂಪರ್ ಸೀರಿಸ್ ಕಿರೀಟ ಗೆದ್ದಿದ್ದಾರೆ. ಲಂಡನ್ನಿನ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಅವರು ವಿಶ್ವದ ನಂ.2 ಆಟಗಾರ್ತಿ ವಾಂಗ್ ಯಿಯಾನ್ ಅವರನ್ನು ಸೆಮಿಫೈನಲ್ಸ್ ನಲ್ಲಿ ಸೋಲಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian star Saina Nehwal defeated Chinese Sun Yu to win the women's singles title of the $750,000 Australian Badminton Open Superseries here on Sunday (June 12).
Please Wait while comments are loading...