ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಕ್ರಿಕೆಟ್ : ಸಚಿನ್ ಮತ್ತೆ ರಾಯಭಾರಿ

By Kiran B Hegde

ದುಬೈ, ಡಿ. 22: ಭಾರತ ರತ್ನ ಸಚಿನ್ ತೆಂಡೂಲ್ಕರ್ ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. 2015ರ ವಿಶ್ವಕಪ್‌ನ ರಾಯಭಾರಿಯಾಗಿ ಸಚಿನ್ ತೆಂಡೂಲ್ಕರ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಘೋಷಿಸಿದೆ. ಸಚಿನ್ ತೆಂಡೂಲ್ಕರ್ ಅವರು ಐಸಿಸಿ ಆಯೋಜಿಸುವ ಅತ್ಯಂತ ದೊಡ್ಡ ಪಂದ್ಯಾವಳಿಗೆ ರಾಯಭಾರಿಯಾಗಿ ನೇಮಕಗೊಳ್ಳುತ್ತಿರುವುದು ಇದು ಎರಡನೇ ಬಾರಿ.

ಕ್ರಿಕೆಟ್ ವಿಶ್ವಕಪ್ ಜಗತ್ತಿನಲ್ಲಿಯೇ ಮೂರನೇ ಅತಿದೊಡ್ಡ ಪಂದ್ಯಾವಳಿಯಾಗಿದೆ. ಫೆಬ್ರವರಿ 14ರಿಂದ ಮಾರ್ಚ್ 19ರ ವರೆಗೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನಲ್ಲಿ ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ. ಈ ನಿಮಿತ್ತ ಐಸಿಸಿ ಹಮ್ಮಿಕೊಂಡಿರುವ ವಿವಿಧ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು, ಪಂದ್ಯಾವಳಿಯ ಲಾಭಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಸಚಿನ್ ಕೆಲಸ ಮಾಡಲಿದ್ದಾರೆಂದು ಐಸಿಸಿ ತಿಳಿಸಿದೆ. ಭಾರತದ ವಿರಾಟ್ ಕೊಯ್ಲಿ ಅವರನ್ನು ಕೂಡ ವಿಶ್ವಕಪ್‌ಗೆ ರಾಯಭಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. [ತೆಂಡೂಲ್ಕರ್ ಆತ್ಮಕಥೆ ಅಭಿಮಾನಿಗಳಿಗೆ ಅರ್ಪಣೆ]

sachin

ರಾಯಭಾರಿಯಾಗಿದ್ದಕ್ಕೆ ಹೆಮ್ಮೆಯಿದೆ : ಐಸಿಸಿ ಕ್ರಿಕೆಟ್ ವಿಶ್ವಕಪ್‌ ಪಂದ್ಯಾವಳಿಗೆ ಎರಡನೇ ಬಾರಿ ರಾಯಭಾರಿಯಾಗಿರುವುದಕ್ಕೆ ಹೆಮ್ಮೆಯಿದೆ ಎಂದು ಸಚಿನ್ ಹೇಳಿಕೊಂಡಿದ್ದಾರೆ. ಸತತ ಆರು ವಿಶ್ವಕಪ್ ಆಡಿದ್ದೇನೆ. ಆದ್ದರಿಂದ ಈ ಬಾರಿಯ ವಿಶ್ವಕಪ್‌ ನನಗೆ 1987ರ ವಿಶ್ವಕಪ್ ಅನ್ನು ನೆನಪಿಗೆ ತರುತ್ತಿದೆ. ಆ ಪಂದ್ಯಾವಳಿಯಲ್ಲಿ ನಾನೋರ್ವ ಬಾಲ್ ಬಾಯ್ ಆಗಿದ್ದೆ ಎಂದು ನೆನಪಿಸಿಕೊಂಡರು.

ಸಚಿನ್ ರಾಯಭಾರಿ ಖುಷಿಯಾಗಿದೆ : ವಿಶ್ವಕಪ್‌ಗೆ ರಾಯಭಾರಿಯಾಗಲು ಸಚಿನ್ ತೆಂಡೂಲ್ಕರ್ ಒಪ್ಪಿಕೊಂಡಿರುವುದು ಸಂತೋಷ ತಂದಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್ಸನ್ ಹೇಳಿದ್ದಾರೆ. [ಆಂಧ್ರದ ಗ್ರಾಮ ದತ್ತು ಪಡೆದ ಸಚಿನ್]

ಸಚಿನ್ ತಮ್ಮ ವ್ಯಕ್ತಿತ್ವ, ಸಹಿಷ್ಣುತೆ, ಪ್ರತಿಭೆ ಹಾಗೂ ಬದ್ಧತೆಯ ಕಾರಣದಿಂದ ಕೇವಲ ಕ್ರಿಕೆಟಿಗರಿಗಷ್ಟೇ ಅಲ್ಲ, ಸಂಪೂರ್ಣ ಆಟಗಾರರಿಗೆ ಆದರ್ಶವಾಗಿದ್ದಾರೆಂದು ಡೇವಿಡ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ನ ಗಳಿಸಿದ ಆಟಗಾರ : ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. 200 ಟೆಸ್ಟ್‌ಗಳನ್ನು, 463 ಏಕ ದಿನ ಪಂದ್ಯಗಳನ್ನು ಹಾಗೂ ಒಂದು ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಅವರು ಆಡಿದ್ದರು. ತಮ್ಮ 24 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಸಚಿನ್ 34,357 ಅಂತಾರಾಷ್ಟ್ರೀಯ ರನ್ ಹಾಗೂ 100 ಶತಕಗಳನ್ನು ದಾಖಲಿಸಿದ್ದಾರೆ. [ಬ್ಯಾಟ್ ಹಿಡಿದ ಕೈಯಲ್ಲಿ ಪೊರಕೆ ತಗೊಂಡ ಸಚಿನ್]

ವಿಶ್ವಕಪ್‌ ಪಂದ್ಯಾವಳಿಗಳಲ್ಲಿ 45 ಪಂದ್ಯಗಳನ್ನು ಆಡಿರುವ ಸಚಿನ್, 56.95 ಸರಾಸರಿಯೊಂದಿಗೆ 2,278 ರನ್‌ಗಳನ್ನು ಪೇರಿಸಿದ್ದಾರೆ. ಇದು ವಿಶ್ವಕಪ್‌ನಲ್ಲಿ ಆಟಗಾರರೊಬ್ಬರು ಗಳಿಸಿರುವ ಅತ್ಯಧಿಕ ರನ್. 2003ರ ವಿಶ್ವಕಪ್‌ನಲ್ಲಿ 673 ರನ್ ಪೇರಿಸಿದ್ದ ತೆಂಡೂಲ್ಕರ್ ಸರಣಿ ಪುರುಷೋತ್ತಮ ಗೌರವಕ್ಕೆ ಪಾತ್ರರಾಗಿದ್ದರು. ಆದರೆ, ಈ ವಿಶ್ವಕಪ್‌ನಲ್ಲಿ ಭಾರತ ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X