ವಿಶ್ವ ಲಂಡನ್ ಅಥ್ಲೆಟಿಕ್ಸ್​ನಿಂದಲೂ ರಷ್ಯಾ ಅಮಾನತು

Written By: Ramesh
Subscribe to Oneindia Kannada

ಲಂಡನ್, ಫೆಬ್ರವರಿ. 07 : ಉದ್ದೀಪನ ಹಗರಣದ ಆರೋಪದಿಂದಾಗಿ ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳದಂತೆ ರಷ್ಯಾ ಮೇಲಿನ ನಿಷೇಧವನ್ನು ಮುಂದಿನ ವರ್ಲ್ಡ್ ಲಂಡನ್ ಅಥ್ಲೆಟಿಕ್ಸ್​ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳದಂತೆ ವಿಸ್ತರಿಸಲಾಗಿದೆ.

ಮೊನಾಕೊದ ಕ್ಯಾಪ್ ಡಿ ಆಯಿಲ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಒಕ್ಕೂಟದ ಸಭೆಯಲ್ಲಿ ರಷ್ಯಾ ಅಥ್ಲೆಟಿಕ್ಸ್ ಸಂಸ್ಥೆಯನ್ನು ಲಂಡನ್ ಅಥ್ಲೆಟಿಕ್ಸ್​ ಚಾಂಪಿಯನ್ ಶಿಪ್ ನಿಂದಲೂ ಅಮಾನತುಗೊಳಿಸುವ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಎಎಎಫ್ ಅಧ್ಯಕ್ಷ ಸೆಬಾಸ್ಟಿಯನ್ ಕೋಯಿ ತಿಳಿಸಿದ್ದಾರೆ.

ರಷ್ಯಾ ಅಥ್ಲೆಟಿಕ್ಸ್ ಸಂಸ್ಥೆಯ ಅಧಿಕಾರಿಗಳೇ ದೇಶದ ಅಥ್ಲೀಟ್​ಗಳಿಗೆ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ವರದಿಗಳನ್ನು ಮುಚ್ಚಿಹಾಕಲು ಸಹಕರಿಸಿದ್ದಾರೆ ಎಂದು 335 ಪುಟಗಳ ತನಿಖಾ ವರದಿಯಲ್ಲಿ ತಿಳಿಸಿತ್ತು.

Russia banned from World Athletics Championships in London

ಇದರಿಂದ ನವೆಂಬರ್ 2015ರಿಂದ ಯಾವುದೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದಂತೆ ನಿಷೇಧ ಹೇರಲಾಗಿತ್ತು. ಅಂದಿನಿಂದ ರಷ್ಯಾ ಅಥ್ಲೆಟಿಕ್ಸ್ ಸಂಸ್ಥೆ ಮೇಲೆ ಹೇರಲಾಗಿದ್ದ ನಿಷೇಧವನ್ನು ರಿಯೋ ಒಲಿಂಪಿಕ್ಸ್ ನಲ್ಲೂ ಪಾಲ್ಗೊಳ್ಳದಂತೆ ಅಮಾನತುಗೊಳಿಸಲಾಗಿತ್ತು.

ಈಗ ಲಂಡನ್ ಅಥ್ಲೆಟಿಕ್ಸ್​ ಚಾಂಪಿಯನ್ ಶಿಪ್ ನಲೂ ಪಾಲ್ಗೊಳ್ಳದಂತೆ ರಷ್ಯಾ ಅಥ್ಲೆಟಿಕ್ಸ್ ಸಂಸ್ಥೆ ಮೇಲೆ ನಿಷೇಧವನ್ನು ವಿಸ್ತರಿಸಲಾಗಿದೆ.

ಉದ್ದೀಪನ ಪರೀಕ್ಷೆಯಲ್ಲಿ ನಿಯಮಗಳನ್ನು ಸಮರ್ಥವಾಗಿ ಪಾಲಿಸುವವರೆಗೆ ಅಮಾನತು ಮುಂದುವರಿಯಲಿದೆ ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Russia will miss August's World Athletics Championships in London after their doping ban was extended, the world governing body president Sebastien Coe said.
Please Wait while comments are loading...