ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಟೆನಿಸ್ ತಾರೆ ಬೋಪಣ್ಣ

Posted By:
Subscribe to Oneindia Kannada

ಲಂಡನ್, ಜೂನ್ 06: ಪುರುಷರ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ 10 ರೊಳಗೆ ಸ್ಥಾನ ಪಡೆದ ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಅವರು ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ರೋಹನ್ ಬೋಪಣ್ಣ ಅವರು ಪುರುಷರ ಎಟಿಪಿ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆಯುವ ಮೂಲಕ ಪುರುಷರ ಡಬಲ್ಸ್ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದುಕೊಂಡಿದ್ದಾರೆ.

Rohan Bopanna enters top 10 in doubles rankings, secures berth to 2016 Rio Olympics

ಫ್ರೆಂಚ್ ಓಪನ್ ಚಾಂಪಿಯನ್​ಷಿಪ್​ನಲ್ಲಿ ಹಾಲಿ ಚಾಂಪಿಯನ್​ಗಳಾದ ಮಾರ್ಕೆಲೊ ಮೇಲೋ ಮತ್ತು ಇವಾನ್ ಡಾಡ್ಜಿಗ್ ಅವರು ಸೆಮಿಫೈನಲ್ ನಲ್ಲಿ ಸೋಲು ಕಂಡಿದ್ದು, ಬೋಪಣ್ಣಗೆ ವರವಾಯಿತು. ರೋಮಾನಿಯಾದ ಜತೆಗಾರ ಫ್ಲೋರಿನ್ ಮೆರ್ಗಿಯಾ ಹಾಗೂ ಬೋಪಣ್ಣ ಅವರು ಕ್ವಾರ್ಟರ್ ಫೈನಲ್ ತನಕ ತಲುಪಿದ್ದರು.[ರೋಹನ್ ಬೋಪಣ್ಣರಿಂದ ಬೆಂಗಳೂರಲ್ಲಿ ಟೆನಿಸ್ ಅಕಾಡೆಮಿ]

ಬೋಪಣ್ಣ ಅವರು ಈಗ ರಿಯೋ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದಿರುವುದರ ಜತೆಗೆ ತಮ್ಮಿಷ್ಟದ ಸಹ ಆಟಗಾರನನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಪಡೆದಿದ್ದಾರೆ. ಈ ನಡುವೆ ಫ್ರೆಂಚ್ ಓಪನ್​ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಲಿಯಾಂಡರ್ ಪೇಸ್ ಎಟಿಪಿ ಶ್ರೇಯಾಂಕದಲ್ಲಿ 46ನೇ ಸ್ಥಾನ ಪಡೆದಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ಯೂಕಿ ಬಾಬ್ರಿ 6 ಸ್ಥಾನ ಕೆಳಗಿಳಿದು 147ನೇ ಸ್ಥಾನ ಪಡೆದಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಸ್ವಿಜರ್ಲೆಂಡ್​ನ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.

ಪುರುಷರ ಶ್ರೇಯಾಂಕದಲ್ಲಿ ಫ್ರೆಂಚ್ ಓಪನ್ ಗೆದ್ದ ಸೆರ್ಬಿಅಯದ ನೋವಾಕ್ ಜೋಕೊವಿಕ್ ಅಗ್ರಸ್ಥಾನಕ್ಕೇರಿದ್ದಾರೆ. ಗಾಯದ ಕಾರಣದಿಂದ ಫ್ರೆಂಚ್ ಓಪನ್ ಆಡದ ರೋಜರ್ ಫೆಡರರ್ ಮೂರನೇ ಸ್ಥಾನಕ್ಕಿಳಿದಿದ್ದಾರೆ. ಆವೆ ಮಣ್ಣಿನ ಕಿಂಗ್ ಸ್ಪೇನಿನ ರಫೆಲ್ ನಡಾಲ್ ಎರಡನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ ಶ್ರೇಯಾಂಕ ಪಟ್ಟಿಯಲ್ಲಿಅಮೆರಿಕದ ಸೆರೆನಾ ವಿಲಿಯಮ್ಸ್ ಅಗ್ರಸ್ಥಾನದಲ್ಲಿದ್ದಾರೆ. ಸೆರೆನಾ ಸೋಲಿಸಿ ಈ ಬಾರಿ ಕಪ್ ಎತ್ತಿದ ಸ್ಪೇನಿಯ ಗರ್ಬಿನ್ ಮುಗುರುಜಾ ಎರಡನೇ ಸ್ಥಾನದಲ್ಲಿದ್ದಾರೆ. (ಐಎಎನ್ ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indias doubles specialist Rohan Bopanna entered the top 10 in the mens doubles rankings on Monday to secure a direct entry at the forthcoming Rio Olympics.
Please Wait while comments are loading...