ದಾಖಲೆಯ 8ನೇ ಬಾರಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಕ್ಕಿದ ಫೆಡರರ್

Subscribe to Oneindia Kannada

ವಿಂಬಲ್ಡನ್, ಜುಲೈ 16: ಟೆನಿಸ್ ಲೋಕದ ಜೀವಂತ ದಂತಕಥೆ ರೋಜರ್ ಫೆಡರರ್ ದಾಖಲೆಯ 8ನೇ ಬಾರಿಗೆ ಪ್ರತಿಷ್ಠಿತ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಇಂದು ವಿಂಬಲ್ಡನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ 6-3 6-1 6-4 ಸೆಟ್ ಗಳ ನೇರ ಅಂತರದಿಂದ ಕ್ರೊಯೇಷಿಯಾದ ಮರಿನ್ ಸಿಲಿಕ್ ವಿರುದ್ಧ ಜಯಗಳಿಸಿದರು. ಈ ಮೂಲಕ ತಮ್ಮ ಜೀವಮಾನದ 8ನೇ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದುಕೊಂಡರು. ಈ ಮೂಲಕ ಅತೀ ಹೆಚ್ಚು ಬಾರಿ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

Roger Federer beats Marin Cilic to lift record eighth Wimbledon title

ಈ ಹಿಂದೆ 2000ನೇ ಇಸವಿಯಲ್ಲಿ ಪೀಟ್ ಸಾಂಪ್ರಸ್ ಹಾಗೂ 1989ರಲ್ಲಿ ವಿಲಿಯಂ ರೆನ್ಶಾವ್ ಗರಿಷ್ಠ 7 ಬಾರಿ ವಿಂಬಲ್ಡನ್ ಪುರುಷರ ಸಿಂಗಲ್ಸ್ ಕಿರೀಟ ಗೆದ್ದಿದ್ದರು. ಆದರೆ ಮಹಿಳೆಯರ ಸಿಂಗಲ್ಸ್ ನಲ್ಲಿ ಮಾತ್ರ ಮಾರ್ಟಿನಾ ನವ್ರಾಟಿಲೋವಾ 9 ಬಾರಿ ವಿಂಬಲ್ಡನ್ ಟ್ರೋಫಿ ಗೆದ್ದಿದ್ದು ಫೆಡರರ್ ಗಿಂತ ಮುಂದಿದ್ದಾರೆ.

ಈ ಗೆಲುವಿನೊಂದಿಗೆ ಫೆಡರರ್ ಒಟ್ಟು 19 ಬಾರಿ ಗ್ರ್ಯಾನ್ ಸ್ಲಾಂ ಟ್ರೋಫಿ ಗೆದ್ದಂತಾಗಿದ್ದು, ಅತೀ ಹೆಚ್ಚು ಗ್ರ್ಯಾನ್ ಸ್ಲಾಂ ಗೆದ್ದ ತಮ್ಮ ದಾಖಲೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಇಂದಿನ ಪಂದ್ಯ

ಇಂದಿನ ಫೈನಲ್ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಮೊದಲ ಸೆಟನ್ನು 7ನೇ ರ್ಯಾಂಕ್ ನ ಸಿಲಿಕ್ ಕಳೆದುಕೊಂಡರು. ಎರಡನೇ ಸೆಟ್ ನಲ್ಲಿ ತಿರುಗಿ ಬೀಳುವ ಪ್ರಯತ್ನಕ್ಕೆ ಮುಂದಾದರೂ ಅವರು ದೇಹ ಅದಕ್ಕೆ ಸ್ಪಂದಿಸಲಿಲ್ಲ. ಎರಡನೇ ಸೆಟ್ ವೇಳೆ ಸಿಲಿಕ್ ಅವರ ಎಡಕಾಲಿ ಪಾದದಲ್ಲಿ ನೋವು ಕಂಡು ಬಂತು. ಇದರಿಂದ ಮೈದಾನದಲ್ಲೇ ಸಿಲಿಕ್ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

ಕೊನೆಗೆ 35 ವರ್ಷದ ಮೂರನೇ ರ್ಯಾಂಕ್ ನ ಫೆಡರರ್ 1 ಗಂಟೆ 41 ನಿಮಿಷಗಳ ಆಟದಲ್ಲಿ ಸಿಲಿಕ್ ವಿರುದ್ಧ ಜಯಗಳಿಸಿದರು. 'ಓಪನ್ ಎರಾ' (ಗ್ರ್ಯಾನ್ ಸ್ಲಾಂ ಟೂರ್ನಮೆಂಟ್ ಗಳಲ್ಲಿ ವೃತ್ತಿಪರ ಆಟಗಾರರು ಆಡಲು ಆರಂಭಿಸಿದ ನಂತರದ ಕಾಲ, ಅಂದರೆ 1968ರ ನಂತರ)ದಲ್ಲಿ ಗ್ರ್ಯಾನ್ ಸ್ಲಾಂ ಗೆದ್ದುಕೊಂಡ ಹಿರಿಯ ಆಟಗಾರ ಎಂಬ ದಾಖಲೆಗೂ ಫೆಡರರ್ ಪಾತ್ರವಾದರು.

Roger Federer beats Marin Cilic to lift record eighth Wimbledon title

ತಮ್ಮ ಜಯದ ನಂತರ ಮಾತನಾಡಿದ ಫೆಡರರ್ ಗಾಯಗೊಂಡ ಸಿಲಿಕ್ ರನ್ನು ಉದ್ದೇಶಿಸಿ, "ಇದು ಕೆಲವೊಮ್ಮೆ ತುಂಬಾ ಕ್ರೂರವಾದುದು. ಆದರೂ (ಮರಿನ್) ಉತ್ತಮ ಹೋರಾಟ ನಡೆಸಿದರು. ಅವರು ನಿಜವಾದ ಹೀರೋ. ಈ ಅದ್ಭುತ ಪಂದ್ಯಾವಾಳಿಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ," ಎಂದು ಹೇಳಿದರು.

"ಒಂದೇ ಒಂದು ಸೆಟ್ ಸೋಲದೆ ಈ ಪಂದ್ಯಾವಳಿಯಲ್ಲಿ ಆಡಿ ಟ್ರೋಫಿ ಗೆದ್ದಿದ್ದೇನೆ. ಇದು ನಿಜವಾಗಿ ದೊಡ್ಡ ಪವಾಡ," ಎಂದು ತಮ್ಮ ಗೆಲುವನ್ನು ಫೆಡರರ್ ಬಣ್ಣಿಸಿದರು.

ಈ ವರ್ಷ ಫೆಡರರ್ ಮೂರರಲ್ಲಿ ಎರಡು ಗ್ರ್ಯಾನ್ ಸ್ಲಾಂ (ಆಸ್ಟ್ರೇಲಿಯನ್ ಮತ್ತು ವಿಂಬಲ್ಡನ್) ಗೆದ್ದಿದ್ದಾರೆ. ಫ್ರೆಂಚ್ ಓಪನ್ ನಲ್ಲಿ ಮಾತ್ರ ಸೋತಿದ್ದು ಯುಎಸ್ ಓಪನ್ ಇನ್ನಷ್ಟೇ ನಡೆಯಬೇಕಾಗಿದೆ.

ಟೆನಿಸ್ ನಲ್ಲಿ 35 ವರ್ಷ ಇಳಿವಯಸ್ಸು. ಆದರೆ ತಮ್ಮ ಇಳಿವಯಸ್ಸಲ್ಲೂ ಫೆಡರರ್ ಎರಡೆರಡು ಟ್ರೋಫಿ ಗೆದ್ದಿದ್ದು ತಮ್ಮ ಚಾರ್ಮ್ ಇನ್ನೂ ಕುಂದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.

Roger Federer Lift Record 8th Wimbledon Championship Title | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Switzerland's Roger Federer defeated Croatia's Marin Cilic by 6-3, 6-1, 6-4 in the final to lift record eighth Wimbledon Tennis Championship title here on Sunday (July 16).
Please Wait while comments are loading...