ಕ್ರೀಡಾಪಟುಗಳನ್ನು ಕೆಣಕಿದ ಶೋಭಾ ಡೇಗೆ ಟ್ವಿಟ್ಟರ್ ನಲ್ಲಿ ಗುದ್ದು

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 09: ಜನಪ್ರಿಯ ಅಂಕಣಗಾರ್ತಿ, ಕಾದಂಬರಿಗಾರ್ತಿ ಶೋಭಾ ಡೇ ಅವರಿಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳಿಂದ ತಿರುಗೇಟು ಸಿಕ್ಕಿದೆ. ಭಾರತದ ಅಥ್ಲೀಟ್ ಗಳು ರಿಯೋಗೆ ತೆರಳುವುದು ಸುಮ್ಮನೆ ವ್ಯರ್ಥ, ದುಡ್ಡು ದಂಡ ಎಂದು ಶೋಭಾ ಟ್ವೀಟ್ ಮಾಡಿದ್ದರು.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

"Goal of Team India at the Olympics: Rio jao. Selfies lo. Khaali haat wapas aao. What a waste of money and opportunity." ಎಂದು ಟ್ವೀಟ್ ಮಾಡಿದ್ದ ಶೋಭಾ ಅವರಿಗೆ ಅಥ್ಲೀಟ್ ಗಳು ಸರಿಯಾಗಿ ಉತ್ತರ ನೀಡಿದ್ದಾರೆ.[ಇತಿಹಾಸ ನಿರ್ಮಿಸಿದ ದೀಪಾಗೆ ಬಿಗ್ ಬಿ ಪ್ರಶಂಸೆ]

ಜಿಮ್ನಾಸ್ಟ್ ನಲ್ಲಿ ದೀಪಾ ಕರ್ಮಾಕರ್ ಅವರು ಫೈನಲ್ ತಲುಪಿರುವುದು ಬಿಟ್ಟರೆ ಭಾರತದ ಅಥ್ಲೀಟ್ ಗಳು ಇಲ್ಲಿ ತನಕ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. [ಪದಕ ಬೇಟೆಗೆ ಸಜ್ಜಾದ ಕನ್ನಡಿಗರು]

ಪದಕದ ಆಸೆ ಹುಟ್ಟಿಸಿದ್ದ ಶೂಟರ್ ಅಭಿನವ್ ಬಿಂದ್ರಾ ಕೂಡಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳೆಯರ ಹಾಕಿ ತಂಡ ಕೂಡಾ ಹೊರದೂಡಲ್ಪಟ್ಟಿದೆ. [ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?]

ಆದರೆ, ಭಾರತದ ಕ್ರೀಡಾಪಟುಗಳು ಸೆಲ್ಫಿ ತೆಗೆದುಕೊಳ್ಳಲು ರಿಯೋಗೆ ಹೋಗಿದ್ದಾರೆ ಎಂಬರ್ಥದ ಮಾತುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಶೋಭಾ ಡೇ ಅವರ ಮಾತಿಗೆ ಸಿಕ್ಕ ಪ್ರತಿಕ್ರಿಯೆಗಳು ಇಲ್ಲಿವೆ....

ರಿಯೋದಲ್ಲಿ ಟೀಂ ಇಂಡಿಯಾದ ಗುರಿ ಏನು?

ರಿಯೋದಲ್ಲಿ ಟೀಂ ಇಂಡಿಯಾದ ಗುರಿ ಏನು?

ರಿಯೋದಲ್ಲಿ ಟೀಂ ಇಂಡಿಯಾದ ಗುರಿ ಏನು?, ರಿಯೋಗೆ ಹೋಗಿ, ಖಾಲಿ ಕೈ ಬೀಸಿಕೊಂಡು ವಾಪಸ್ ಬರುವುದು, ಸೆಲ್ಫಿ ತೆಗೆದುಕೊಳ್ಳುವುದು ಬಿಟ್ಟರೆ ಏನು ಪ್ರಯೋಜನವಿಲ್ಲ, ದುಡ್ಡು ಹಾಗೂ ಅವಕಾಶ ವ್ಯರ್ಥ ಎಂದು ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣರಾಗಿದೆ.

ಕ್ರೀಡೆಯನ್ನು ನೋಡುವ ಮನೋಭಾವ ಬೆಳೆಸಿಕೊಳ್ಳಿ

ಮೊದಲು ಕ್ರೀಡೆಯನ್ನು ನೋಡುವ ಮನೋಭಾವ ಬೆಳೆಸಿಕೊಳ್ಳಿ ನಂತರ ಎಲ್ಲವೂ ಬದಲಾಗುತ್ತೆ ಎಂಬ ಸಲಹೆ ನೀಡಲಾಗಿದೆ.

ಟೆನಿಸ್ ಆಟಗಾರ ಸೋಮ್ ದೇವ್ ಟ್ವೀಟ್

ಟೆನಿಸ್ ಆಟಗಾರ ಸೋಮ್ ದೇವ್ ಟ್ವೀಟ್ ಮಾಡಿ ನಿಮ್ಮ ಮಾತುಗಳು ಶೋಭೆ ತರುವುದಿಲ್ಲ, ಅಥ್ಲೀಟ್ ಗಳ ಪರಿಶ್ರಮಕ್ಕೆ ಬೆಲೆ ಇಲ್ಲವೆ ಎಂದು ಕೇಳಿದ್ದಾರೆ.

ಕ್ರೀಡಾಪಟುಗಳ ಕಷ್ಟ ನಿಮಗೇನು ಗೊತ್ತು?

ಕ್ರೀಡಾಪಟುಗಳ ಕಷ್ಟ ನಿಮಗೇನು ಗೊತ್ತು? ನಾಲ್ಕು ಗಂಟೆಗೆ ಎದ್ದು, ದಾಲ್ ರೋಟಿ ತಿಂದು, ಸೌಕರ್ಯ ಇಲ್ಲದಿದ್ದರೂ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳ ಬಗ್ಗೆ ಈ ರೀತಿ ಹೇಳುತ್ತೀರಾ?

ಸುಮ್ಮನೆ ಹಾಕಿ ಪಿಚ್ ನಲ್ಲಿ 60 ನಿಮಿಷ ಓಡಿ

ಸುಮ್ಮನೆ ಹಾಕಿ ಪಿಚ್ ನಲ್ಲಿ 60 ನಿಮಿಷ ಓಡಿ ಸಾಕು, ಅಥವಾ ರೈಫಲ್ ಹಿಡಿದು ನಿಲ್ಲಿ ಕಷ್ಟ ಏನು ಎಂದು ಗೊತ್ತಾಗುತ್ತದೆ.

ಫಿಟ್ನೆಸ್ ಸಂಸ್ಕೃತಿ ಬದಲಾಯಿಸಲು ಯತ್ನಿಸಿ

ಫಿಟ್ನೆಸ್ ಸಂಸ್ಕೃತಿ ಬದಲಾಯಿಸಲು ಯತ್ನಿಸಿ, ಪದಕ ಗೆಲ್ಲಲಿಲ್ಲ ಎಂದು ಮೂದಲಿಸಬೇಡಿ

ಶೂಟರ್ ಅಭಿನವ್ ಬಿಂದ್ರಾದಿಂದ ಟ್ವೀಟ್

ವೈಯಕ್ತಿಕ ಚಿನ್ನದ ಪದಕ ಗೆದ್ದಿರುವ ಏಕೈಕ ಶೂಟರ್ ಅಭಿನವ್ ಬಿಂದ್ರಾ ಅವರು ಶೋಭಾ ಡೇ ಪ್ರತಿಕ್ರಿಯೆ ನೀಡಿದ್ದು ಹೀಗೆ

ಸರಿಯಿಲ್ಲದ ವ್ಯವಸ್ಥೆಯಲ್ಲಿ ಕ್ರೀಡಾಪಟುಗಳ ಸಾಧನೆ ಗಮನಾರ್ಹ

ಸರಿಯಿಲ್ಲದ ವ್ಯವಸ್ಥೆಯಲ್ಲಿ ಕ್ರೀಡಾಪಟುಗಳ ಸಾಧನೆ ಗಮನಾರ್ಹ, ನೀವು ವ್ಯವಸ್ಥೆ ಸರಿಪಡಿಸಿ.

ಶ್ರೀಮಂತ ಸಮಾಜಕ್ಕೆ ಏನು ಗೊತ್ತಿದೆ

ಶ್ರೀಮಂತ ಸಮಾಜಕ್ಕೆ ಏನು ಗೊತ್ತಿರುತ್ತದೆ, ಕ್ರೀಡಾಪಟುಗಳ ಕಷ್ಟ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Well known Indian columnist and novelist Shobhaa De invited controversy last evening (August 8) after she tweeted mocking the Indian contingent at the Rio Olympics 2016.
Please Wait while comments are loading...