ರಿಯೋದಲ್ಲಿ ಸೋತು, ಸಿನ್ಸಿನಾಟಿಯಲ್ಲಿ ನಂ. 1 ಪಟ್ಟಕ್ಕೇರಿದ ಸಾನಿಯಾ

Posted By:
Subscribe to Oneindia Kannada

ಸಿನ್ಸಿನಾಟಿ, ಆಗಸ್ಟ್ 22: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ರಿಯೋ ಒಲಿಂಪಿಕ್ಸ್ ನಲ್ಲಿ ನ್ ನೀರಸ ಪ್ರದರ್ಶನ ನೀಡಿ ನಿರ್ಗಮಿಸಿದ್ದು ನೆನಪಿರಬಹುದು. ಸಿಂಗಲ್ಸ್ ಹಾಗೂ ಡಬಲ್ಸ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಸಾನಿಯಾ ಅವರು ಪದಕ ಗೆಲ್ಲಲು ವಿಫಲರಾಗಿ, ಕಣ್ಣೀರಿಟ್ಟಿದ್ದರು. ಆದರೆ, ಸಾನಿಯಾ ಅಭಿಮಾನಿಗಳಿಗೆ ಶುಭ ಸುದ್ದಿ ಸೋಮವಾರ ಸಿಕ್ಕಿದೆ.

ರಿಯೋದಲ್ಲಿ ಸೋತರೂ, ಸಿನ್ಸಿನಾಟಿ ಓಪನ್ ಗೆದ್ದ ಸಾನಿಯಾ ಈಗ ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ್ತಿಯಾಗಿದ್ದಾರೆ. ಸಾನಿಯಾ 11, 260ಅಂಕ ಗಳಿಸಿದ್ದರೆ, ಈ ಹಿಂದಿನ ಡಬಲ್ಸ್ ಜೋಡಿ ಹಿಂಗೀಸ್ 10,945 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ ಎಂದು ಮಹಿಳಾಅ ಟೆನಿಸ್ ಅಸೋಸಿಯೇಷನ್ (ಡಬ್ಲ್ಯೂಟಿಎ) ಸೋಮವಾರ (ಆಗಸ್ಟ್ 22) ಪ್ರಕಟಿಸಿದೆ.

Sania Mirza becomes sole World No. 1 in women's doubles

ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ(ಆಗಸ್ಟ್ 21) ಪ್ರಶಸ್ತಿ ಗಳಿಸಿದ ಸಾನಿಯಾ ಅವರು ಡಬಲ್ಸ್‌ನಲ್ಲಿ ವಿಶ್ವದ ನಂ.1 ಸ್ಥಾನಕ್ಕೇರಿದ್ದಾರೆ. ಸಾನಿಯಾ ಅವರು ತಮ್ಮ ಯಶಸ್ವಿ ಜೋಡಿಯಾದ ಮಾರ್ಟಿನಾ ಹಿಂಗಿಸ್ ವಿರುದ್ಧವೇ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.

ಜೆಕ್ ಗಣರಾಜ್ಯದ ಬಾರ್ಬೊರಾ ಸ್ಟ್ರಿಕೋವಾ ಜತೆಗೆ ಆಡಿದ ಸಾನಿಯಾ ಅವರು ಸಿನ್ಸಿನಾಟಿ ಓಪನ್ ಫೈನಲ್‌ನಲ್ಲಿ ಮಾರ್ಟಿನಾ ಹಿಂಗಿಸ್ ಹಾಗೂ ಕೊಕೊ ವ್ಯಾಂಡಿವೆಘ್‌ರನ್ನು 7-5, 6-4 ನೇರ ಸೆಟ್‌ಗಳಿಂದ ಸೋಲಿಸಿದರು.

ಕಳೆದ ವರ್ಷ ಮಾರ್ಚ್‌ ನಿಂದ ಮಾರ್ಟಿನಾ ಹಿಂಗೀಸ್ ಜತೆ ಡಬಲ್ಸ್ ಪಂದ್ಯ ಆಡಲು ಆರಂಭಿಸಿರುವ ಸಾನಿಯಾ ಮೂರು ಗ್ರಾನ್‌ಸ್ಲಾಮ್ ಸಹಿತ ಒಟ್ಟು 14 ಪ್ರಶಸ್ತಿಗಳನ್ನು ಗಳಿಸಿದ ದಾಖಲೆ ಸ್ಥಾಪಿಸಿದ್ದಾರೆ. ಆದರೆ, ಇತ್ತೀಚೆಗೆ ಈ ಯಶಸ್ವಿ ಜೋಡಿ ಬೇರ್ಪಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sania Mirza took the sole top spot in the women's doubles rankings after beating former partner Martina Hingis in the Cincinnati Open tennis tournament.
Please Wait while comments are loading...