ರಿಯೋದಿಂದ ಮರಳಿದ ಅಥ್ಲೀಟ್ ಸುಧಾ ಸಿಂಗ್ ಗೆ ಝೀಕಾ ಭೀತಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23: ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ಭಾರತಕ್ಕೆ ಮರಳಿದ ಅಥ್ಲೀಟ್ ಸುಧಾ ಸಿಂಗ್ ಅವರಿಗೆ ಝೀಕಾ ವೈರಾಣು ಭೀತಿ ಕಾಡುತ್ತಿದೆ. ಉತ್ತರಪ್ರದೇಶ ಮೂಲದ ಸುಧಾ ಅವರಿಗೆ ಸದ್ಯಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ತೀವ್ರ ಜ್ವರದಿಂದ ಬಳಲುತ್ತಿರುವ ಅಥ್ಲೀಟ್ ಸುಧಾ ಸಿಂಗ್ ಅವರು ರಿಯೋ ಒಲಿಂಪಿಕ್ಸ್​ನಿಂದ ವಾಪಸಾದ ಕೂಡಲೇ ನಗರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 30 ವರ್ಷ ವಯಸ್ಸಿನ ಸುಧಾ ಅವರಿಗೆ ಮೊಣಕಾಲಿನ ನೋವು, ಅಧಿಕ ರಕ್ತದೊತ್ತಡ ಇದೆ, ಸದ್ಯಕ್ಕೆ ಪ್ರತ್ಯೇಕ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ['ಸಾವಿನ ಓಟ' ಓಡಿ ಬದುಕುಳಿದಿದ್ದೇ ಹೆಚ್ಚು : ಓಪಿ ಜೈಶಾ]

Rio-returned athlete Sudha Singh fears Zika Virus hospitalised

ಝೀಕಾ ವೈರಾಣು ಕಾಡುತ್ತಿದೆಯೇ? ಇಲ್ಲವೇ? ಎಂಬುದನ್ನು ಪರೀಕ್ಷಿಸಲು ವೈರಾಲಜಿ ಇನ್ಸ್ಟಿಟ್ಯೂಟಿಗೆ ರಕ್ತದ ಸ್ಯಾಂಪಲ್ಸ್ ಕಳಿಸಲಾಗಿದೆ. ವರದಿ ಬಂದ ನಂತರವಷ್ಟೇ ಝೀಕಾ ವೈರಾಣು ದಾಳಿ ಬಗ್ಗೆ ದೃಢವಾಗಿ ಹೇಳಲು ಸಾಧ್ಯ ಎಂದು ಡಾ ಎಸ್ ಆರ್ ಸರಳಾ ಅವರು ಎನ್ ಡಿಟಿವಿಗೆ ಹೇಳಿದ್ದಾರೆ.[ಒಲಿಂಪಿಕ್ಸ್ ಗ್ರಾಮವನ್ನು ಸುತ್ತಿಕೊಂಡಿರುವ ಸಮಸ್ಯೆಗಳು]

ಸುಧಾ ರಿಯೋದಲ್ಲಿ ಸ್ಟೀಪಲ್​ಚೇಸ್​ನಲ್ಲಿ ಸ್ಪರ್ಧಿಸಿದ್ದರು. ಈಗ ಝಿಕಾ ಜ್ವರದ ಭೀತಿ ಎದುರಿಸುತ್ತಿದ್ದಾರೆ. ಮಂಗಳವಾರದಂದು ದೆಹಲಿಯಿಂದ ವಿಶೇಷ ವೈದ್ಯರ ತಂಡ, ಬೆಂಗಳೂರಿಗೆ ಆಗಮಿಸಲಿದೆ ಎಂದು ಸಾಯ್ ಪ್ರಾದೇಶಿಕ ನಿರ್ದೇಶಕ ಎಂ.ಶ್ಯಾಮ್ ಸುಂದರ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian athlete Sudha Singh, who returned from Rio Olympics with fever and body ache last week, has been undergoing treatment at a private hospital here for a suspected Zika virus.
Please Wait while comments are loading...