ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆ ಗೋಲ್ಡನ್ ಬಾಯ್ ಯಾರು?

By: ಕ್ರೀಡಾ ಡೆಸ್ಕ್
Subscribe to Oneindia Kannada

ಬೆಂಗಳೂರು, ಸೆ.10 : ರಿಯೋ ಡಿ ಜನೈರೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಟಿ 42 ಹೈ ಜಂಪ್ ನಲ್ಲಿ ಚಿನ್ನ ಮುಡಿಗೇರಿಸಿಕೊಂಡಿರುವ 21 ವರ್ಷದ ಮರಿಯಪ್ಪನ್ ತಂಗವೇಲು ಅವರು ಕರ್ನಾಟಕದಲ್ಲಿ ತರಬೇತಿ ಪಡೆದಿದ್ದರು ಎನ್ನುವುದು ಹೆಮ್ಮೆಯ ವಿಚಾರ.

ಚೆನ್ನೈನ ಸೇಲಂ ಜಿಲ್ಲೆಯ ಪೆರಿಯಾದುಗಪಟ್ಟಿ ಗ್ರಾಮದ ತಂಗವೇಲು ಹೈಜಂಪ್ ತರಬೇತಿ ಪಡೆದಿದ್ದು ಬೆಂಗಳೂರಿನಲ್ಲಿ. ಸತ್ಯನಾರಾಯಣ ಅವರು ತಂಗವೇಲು ಅವರ ಕೋಚ್. 2013ರಲ್ಲಿ ಮರಿಯಪ್ಪನ್ ಮತ್ತು ಸತ್ಯನಾರಾಯಣ ಅವರು ನ್ಯಾಷನಲ್ ಪ್ಯಾರಾ ಅಥ್ಲಿಟ್ ಚಾಂಪಿಯನ್ ಶಿಪ್‌ನಲ್ಲಿ ಭೇಟಿಯಾಗಿದ್ದರು. ನಂತರ ಬೆಂಗಳೂರಿಗೆ ತರಬೇತಿಗಾಗಿ ಅವರು ಕರೆತಂದಿದ್ದರು. [ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಡಬಲ್ ಧಮಾಕ]

Mariyappan Thangavelu

ಚಿನ್ನ ಗೆಲ್ಲುವ ಭರವಸೆ : ಈ ಬಾರಿಯ ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸುವ ಮುಂಚೆ ಮಾತನಾಡಿದ್ದ ಮರಿಯಪ್ಪನ್, 'ಒಲಿಂಪಿಕ್ಸ್ ನಲ್ಲಿ ಗುರಿಯೇನು ನನಗೆ ಮೀರಿ ಇಲ್ಲ, ಹೀಗಾಗಿ ಚಿನ್ನದ ಪದಕ ಗೆಲ್ಲುವ ಸಾಧ್ಯತೆ ಇದೆ' ಎಂದು ಹೇಳಿದ್ದರು. ಅದರಂತೆ ಮರಿಯಪ್ಪನ್ ಚಿನ್ನದ ಪದಕವನ್ನ ತಮ್ಮದಾಗಿಸಿಕೊಂಡಿದ್ದು, ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.[ರಿಯೋ ಪ್ಯಾರಾಲಿಂಪಿಕ್ಸ್ : ಕನ್ನಡಿಗ ಫರ್ಮಾನ್ ಭಾಷಾಗೆ 4ನೇ ಸ್ಥಾನ]

ಇವರ ಈ ಸಾಧನೆಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕ್ರಿಕೆಟಿಗ ಗೌತಮ್ ಗಂಭೀರ್ ಸೇರಿದಂತೆ ಬಾಲಿವುಡ್ ತಾರೆಯರು ಮರಿಯಪ್ಪನ್ ಅವರನ್ನು ಅಭಿನಂದಿಸಿದ್ದಾರೆ.

ಕಳೆದ ಮಾರ್ಚ್ ನಲ್ಲಿ ಮರಿಯಪ್ಪನ್ ಟುನಿಸಿಯಾದ ಐಪಿಸಿ ಗ್ರ್ಯಾಂಡ್ ಪ್ರಿಕ್ಸ್‌ನ ಟಿ 42 ಹೈಜಂಪ್‌ ಸ್ಪರ್ಧೆಯಲ್ಲಿ 1.78 ಮೀಟರ್ ಎತ್ತರ ಜಿಗಿದು ಎ ಶ್ರೇಯಾಂಕದಲ್ಲಿ ರಿಯೋಗೆ ಆಯ್ಕೆಯಾಗಿದ್ದರು. ಚಿಕ್ಕಂದಿನಲ್ಲಿ ವಾಲಿಬಾಲ್ ನಲ್ಲಿ ಆಸಕ್ತಿಹೊಂದಿದ್ದ ಮರಿಯಪ್ಪನ್‌ಗೆ ಅವರ ಶಿಕ್ಷಕರು ಹೈಜಂಪ್ ಅಭ್ಯಾಸ ಮಾಡುವಂತೆ ಸಲಹೆ ನೀಡಿದ್ದರು. ಅಂದಿನಿಂದ ಮರಿಯಪ್ಪನ್ ಹೈಜಂಪ್ ಅಭ್ಯಾಸದಲ್ಲಿ ತೊಡಗಿದ್ದರು.

ಮರಿಯಪ್ಪನ್ 5 ವರ್ಷದವರಿದ್ದಾಗ ತಮ್ಮ ಪೆರಿಯಾದುಗಪಟ್ಟಿ ಗ್ರಾಮದಲ್ಲಿ ಶಾಲೆಯಿಂದ ಬರುತ್ತಿದ್ದಾಗ ಅಪಘಾತಕ್ಕೀಡಾಗಿ ಅವರ ಬಲಗಾಲು ಮುರಿದು ಹೋಗಿತ್ತು. ಇವರ ತಾಯಿ ತರಕಾರಿ ವ್ಯಾಪಾರ ಮಾಡುತ್ತ ಜೀವನ ಸಾಗಿಸುತ್ತಿದ್ದು, ಚಿಕಿತ್ಸೆಗಾಗಿ 3 ಲಕ್ಷ ರೂ. ಸಾಲ ಮಾಡಿದ್ದರು. ಕಷ್ಟದಲ್ಲಿ ಬದುಕಿ ಚಿನ್ನಕ್ಕೆ ಕೊರಳೊಡ್ಡಿದ ಮರಿಯಪ್ಪನ್ ಅವರನ್ನು ಇಡೀ ದೇಶವೇ ಇಂದು ಕೊಂಡಾಡುತ್ತಿದೆ.

ಮರಿಯಪ್ಪನ್ ತಂಗವೇಲು ಪರಿಚಯ
* ಜೂನ್ 28 1995 ರಲ್ಲಿ ಜನನ
* ಮೂಲತಃ ತಮಿಳುನಾಡಿನ ಸೇಲಂನಿಂದ 50 ಕಿ.ಮೀ ದೂರದಲ್ಲಿರುವ ಪೆರಿಯಾವಾಡಗಂಪಟ್ಟಿ ಗ್ರಾಮದವರು
* ಸತ್ಯನಾರಾಯಣ ಅವರ ಬಳಿ ಕೋಚಿಂಗ್
* ರಿಯೋ ಗೇಮ್ಸ್ ಗೆ ಪ್ರವೇಶಿಸಲು ನಡೆದ ಅರ್ಹತಾ ಸ್ಪರ್ಧೆಯಲ್ಲಿ 1.78 ಮೀ ಉದ್ದ ಜಿಗಿದಿದ್ದರು
* ಪ್ಯಾರಾಲಿಂಪಿಕ್ಸ್ 2016 ನಲ್ಲಿ ಬಂಗಾರ ಪಡೆದಿರುವುದು ಇವರ ಮೊದಲ ಸಾಧನೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Every champion's journey is an inspiration And India's golden boy Mariyappan Thangavelu's story is also same. He went through a lot of hardships before winning gold at Rio Paralympics on Friday (September 9)
Please Wait while comments are loading...