ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಖೇಲ್ ರತ್ನ ಭಾಗ್ಯ!

Written By: Ramesh
Subscribe to Oneindia Kannada

ನವದೆಹಲಿ, ಸೆ. 19 : ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ವಿಜೇತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ವಿಜೇತರಿಗೆ ಮುಂದಿನ ವರ್ಷ ಖೇಲ್ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಕ್ರೀಡಾ ಸಚಿವ ವಿಜಯ್‌ ಗೋಯಲ್ ಘೋಷಿಸಿದ್ದಾರೆ. [ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಡಬಲ್ ಧಮಾಕ!]

ಹೈದರಬಾದ್ ನಲ್ಲಿರುವ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡಮಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ರೀಡಾ ಸಚಿವ ವಿಜಯ್‌ ಗೋಯಲ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಒಟ್ಟು 4 ಪದಕಗಳ ಸಿಕ್ಕಿವೆ. ಅದರಲ್ಲಿ ಎರಡು ಬಂಗಾರ, ಒಂದು ಬೆಳ್ಳಿ, ಒಂದು ಕಂಚು ದೊರೆತಿದೆ. [ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಮತ್ತೊಂದು ಚಿನ್ನ]

ರಿಯೋ ಒಲಿಂಪಿಕ್ಸ್ ಪದಕ ಗೆದ್ದ ಪಿ.ವಿ.ಸಿಂಧು, ಕುಸ್ತಿಪಟು ಸಾಕ್ಷಿ ಮಲಿಕ್, ಜಿಮ್ನಾಸ್ಟಿಕ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ದೀಪಾ ಕರ್ಮಾಕರ್, ಶೂಟರ್ ಜಿತು ರಾಯ್‌ಗೆ ಖೇಲ್ ರತ್ನ ಪ್ರಶಸ್ತಿ ಘೋಷಿಸಿರುವ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದವರಿಗೂ ಖೇಲ್ ರತ್ನ ಪ್ರಶಸ್ತಿ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು. [ಸಿಂಧು, ದೀಪಾ, ಜಿತು,ಸಾಕ್ಷಿಗೆ ಖೇಲ್ ರತ್ನ ಪ್ರಶಸ್ತಿ]

ಆದರೆ ಪ್ರಶಸ್ತಿ ನೀಡುವ ಬಗ್ಗೆ ಕೇಂದ್ರ ಸರ್ಕಾರದ ನಿಯಮ ಇಲ್ಲದಿರುವುದರಿಂದ ಪರಿಶೀಲನೆ ನಡೆಸುತ್ತೇವೆ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯೆಲ್ ಹೇಳಿದ್ದರು. ಪದಕ ಗೆದ್ದ ನಾಲ್ಕು ಕ್ರೀಡಾಪಟುಗಳು ಮುಂದಿನ ವರ್ಷ ಖೇಲ್ ರತ್ನ ಪ್ರಶಸ್ತಿ ಪಡೆಯಲಿದ್ದಾರೆ.

ರಾಜಸ್ಥಾನ ಮೂಲದ ದೇವೇಂದ್ರ ಜಝಾರಿಯಾ

ರಾಜಸ್ಥಾನ ಮೂಲದ ದೇವೇಂದ್ರ ಜಝಾರಿಯಾ

ರಾಜಸ್ಥಾನ ಮೂಲದ ದೇವೇಂದ್ರ ಜಝಾರಿಯಾ ಪುರುಷರ ಎಫ್ 46 ವಿಭಾಗದಲ್ಲಿ 63.97 ಮೀಟರ್ ಜಾವೆಲಿನ್ ಎಸೆದು ದಾಖಲೆಯೊಂದಿಗೆ ಅವರು ಚಿನ್ನದ ಪದಕ ಪಡೆದಿದ್ದಾರೆ. 2004 ರ ಅಥೆನ್ಸ್ ಗೇಮ್ಸ್ ನಲ್ಲಿ ಇವರು 62.15 ಮೀ. ಜಾವೆಲಿನ್ ಎಸೆದು ದಾಖಲೆ ಮಾಡಿದ್ದರು.

ಮರಿಯಪ್ಪನ್ ತಂಗವೇಲು

ಮರಿಯಪ್ಪನ್ ತಂಗವೇಲು

ಪುರುಷರ ಟಿ 42 ಹೈ ಜಂಪ್ ಫೈನಲ್ ನಲ್ಲಿ ತಮಿಳುನಾಡಿನ ಮೂಲದ ಮರಿಯಪ್ಪನ್ ತಂಗವೇಲು 1.89 ಮೀಟರ್ ಜಿಗಿದು ಚಿನ್ನ ಗೆದ್ದಿದ್ದಾರೆ. ಇದರಿಂದ ಇವರು ಮುಂದಿನ ವರ್ಷದ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ದೀಪಾ ಮಲಿಕ್

ದೀಪಾ ಮಲಿಕ್

2016 ಪ್ಯಾರಾಲಿಂಪಿಕ್ಸ್ ನ ಶಾಟ್ ಪುಟ್ ವಿಭಾಗದ ಎಫ್ 33 ಸ್ಪರ್ಧೆಯಲ್ಲಿ ದೀಪಾ ಮಲಿಕ್ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದಾರೆ. ಮಹಿಳೆಯರ ಶಾಟ್ ಪುಟ್ ಸ್ಪರ್ಧೆಯಲ್ಲಿ ಈ ಪ್ರಶಸ್ತಿ ಲಭಿಸಿದ್ದು, ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ದೀಪಾ ಮಲೀಕ್ ಪಾತ್ರರಾಗಿದ್ದಾರೆ.

ಕಂಚು ವಿಜೇತ ವರುಣ್ ಭಾಟಿ

ಕಂಚು ವಿಜೇತ ವರುಣ್ ಭಾಟಿ

ಪುರುಷರ ಟಿ 42 ಹೈ ಜಂಪ್ ಫೈನಲ್ ಗೇಮ್ ನಲ್ಲಿ ವರುಣ್ ಭಾಟಿ ಅವರು 1.86 ಮೀಟರ್ ಜಿಗಿದು ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

2016 ರ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದವರು

2016 ರ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದವರು

ರಿಯೋ ಒಲಿಂಪಿಕ್ಸ್ 2016ರಲ್ಲಿ ಉತ್ತಮ ಸಾಧನೆ ತೋರಿದ ಪಿವಿ ಸಿಂಧು(ಬಾಡ್ಮಿಂಟನ್), ದೀಪಾ ಕರ್ಮಾಕರ್(ಜಿಮ್ನಾಸ್ಟ್), ಜಿತು ರೈ, ಸಾಕ್ಷಿ ಮಲೀಕ್(ಕುಸ್ತಿ) ಅವರಿಗೆ 2016ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Equating the paralympians' achievements with the Olympic medallists at Rio de Janeiro, Sports Minister Vijay Goel confirmed those who won medals at Paralympics will also be conferred with coveted Khel Ratna awards, next year.
Please Wait while comments are loading...