ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಡಬಲ್ ಧಮಾಕ!

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ, ಸೆಪ್ಟೆಂಬರ್ 10 : ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಇಬ್ಬರು ಆಟಗಾರರು ಇತಿಹಾಸ ನಿರ್ಮಿಸಿದ್ದಾರೆ.

ಪುರುಷರ ಟಿ 42 ಹೈ ಜಂಪ್ ಫೈನಲ್‌ನಲ್ಲಿ ಭಾರತಕ್ಕೆ ಚಿನ್ನ ಹಾಗೂ ಕಂಚಿನ ಪದಕಗಳು ಲಭಿಸಿದೆ. ಭಾರತದ ಮರಿಯಪ್ಪನ್ ತಂಗವೇಲ್ ಹಾಗೂ ವರುಣ್ ಭಾಟಿ ಅವರು ಚಿನ್ನ ಹಾಗೂ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ.[ಎಕ್ಸಾಂನಲ್ಲಿ ಫೇಲಾದೆ, ಬಾಡ್ಮಿಂಟನ್ ನಲ್ಲಿ ಪಾಸಾದೆ : ಗೋಪಿಚಂದ್]

paralympic

ಪುರುಷರ ಟಿ 42 ಹೈ ಜಂಪ್ ಫೈನಲ್ ನಲ್ಲಿ ಮರಿಯಪ್ಪನ್ ತಂಗವೇಲು 1.89 ಮೀಟರ್ ದೂರ ಜಿಗಿದು ಚಿನ್ನ ಗೆದ್ದಿದ್ದಾರೆ. ಇನ್ನು ಇದೇ ಗೇಮ್ ನಲ್ಲಿ ವರುಣ್ ಭಾಟಿ ಅವರು 1.86 ಮೀಟರ್ ದೂರ ಜಿಗಿದು ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.[ಕುಸ್ತಿ ಪಟು ಸಾಕ್ಷಿ ಕೈಹಿಡಿಯಲಿರುವ ಆ ಕುಸ್ತಿ ಪಟು ಯಾರು?]

ಈ ಇಬ್ಬರು ಕ್ರೀಡಾಪಟುಗಳು ಪದಕ ಗೆಲ್ಲುವ ಮೂಲಕ ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕದ ಖಾತೆ ತೆರೆದಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ರಿಯೋ ಒಲಿಂಪಿಕ್ ನಲ್ಲಿ ಭಾರತ ಕೇವಲ ಎರಡು ಪದಕಗಳಿಗೆ ತೃಪ್ತಿಪಟ್ಟಿಕೊಂಡಿದೆ. ಆದರೆ, ಈ ಪ್ಯಾರಾಲಿಂಪಿಕ್ಸ್ ಸೆ.7 ರಿಂದ ಪ್ರಾರಂಭವಾಗಿದ್ದು ಆರಂಭದಲ್ಲಿಯೇ ಭಾರತದ ಕ್ರೀಡಾಪಟಗಳು ಎರಡು ಪದಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಸೆ.18 ರಂದು ಪ್ಯಾರಾಲಿಂಪಿಕ್ಸ್ ತೆರೆಕಾಣಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It was double jubilation for India early on Saturday morning when Mariyappan Thangavelu soared to a gold medal and compatriot Varun Singh Bhati clinched the bronze medal in the men's high jump T-42 event at the Rio Paralympics.
Please Wait while comments are loading...