ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಮತ್ತೊಂದು ಚಿನ್ನ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಸೆ 14 : ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ. ಕ್ರೀಡಾಕೂಟದಲ್ಲಿ ಇದುವರೆಗೂ ಭಾರತ 4 ಪದಕಗಳನ್ನು ಪಡೆದಿದೆ.

ಪುರುಷರ ಜಾವೆಲಿನ್ ಥ್ರೋನಲ್ಲಿ ರಾಜಸ್ಥಾನ ಮೂಲದ ದೇವೇಂದ್ರ ಜಝಾರಿಯಾ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. ಇದರೊಂದಿಗೆ ಭಾರತ ರಿಯೋ ಪ್ಯಾರಾಲಿಂಪಿಕ್ಸ್ ನ ಪದಕ ಪಟ್ಟಿಯಲ್ಲಿ ಎರಡನೇ ಚಿನ್ನದ ಪದಕ ಪಡೆದಂತಾಗಿದೆ.[ರಿಯೋ ಪ್ಯಾರಾಲಿಂಪಿಕ್ಸ್ : ಕನ್ನಡಿಗ ಫರ್ಮಾನ್ ಭಾಷಾಗೆ 4ನೇ ಸ್ಥಾನ]

Devendra Jhajharia

ಪುರುಷರ ಎಫ್ 46 ವಿಭಾಗದಲ್ಲಿ 63.97 ಮೀಟರ್ ಜಾವೆಲಿನ್ ಎಸೆದು ದಾಖಲೆಯೊಂದಿಗೆ ದೇವೇಂದ್ರ ಅವರು ಚಿನ್ನದ ಪದಕ ಪಡೆದಿದ್ದಾರೆ. 2004 ರ ಅಥೆನ್ಸ್ ಗೇಮ್ಸ್ ನಲ್ಲಿ ಇವರು 62.15 ಮೀ. ಜಾವೆಲಿನ್ ಎಸೆದು ದಾಖಲೆ ಮಾಡಿದ್ದರು. [ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಡಬಲ್ ಧಮಾಕ!]

ತಮ್ಮ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಪ್ಯಾರಾಲಿಂಪಿಕ್ಸ್‌ನಲ್ಲಿ ಮುರಿದು ದೇವೇಂದ್ರ ಚಿನ್ನಕ್ಕೆ ಕೊರಳೊಡಿದ್ದಾರೆ. ಮರಿಯಪ್ಪನ್ ತಂಗವೇಲ್ ಮತ್ತು ವರುಣ್ ಭಾಟಿ ಅವರು ಕ್ರೀಡಾಕೂಟದಲ್ಲಿ ಪುರುಷರ ಹೈ ಜಂಪ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದರು. [ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆ ಗೋಲ್ಡನ್ ಬಾಯ್ ಯಾರು?]

ದೇವೇಂದ್ರ ಅವರ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ

ಮಹಿಳೆಯರ ಶಾಟ್ ಪುಟ್ ವಿಭಾಗದಲ್ಲಿ ಭಾರತದ ಹೆಮ್ಮೆಯ ಪುತ್ರಿ ದೀಪಾ ಮಲಿಕ್ ಬೆಳ್ಳಿ ಪದಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಭಾರತಕ್ಕೆ ಪ್ಯಾರಾಲಿಂಪಿಕ್ಸ್ ನಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಸಿಕ್ಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Javelin thrower Devendra Jhajharia became the first Indian to clinch two gold medals at the Paralympics after he broke his own world record to clinch the top honours at the Rio Games here.
Please Wait while comments are loading...